ನವದೆಹಲಿ(ಡಿ.  21)   ಸಿಎಎಗೆ (ಪೌರತ್ವ ತಿದ್ದುಪಡಿ) ಸಂಬಂಧಿಸಿದ ರೀತಿ ರಿವಾಜು ಮತ್ತು ಕಾನೂನುಗಳ ತಿದ್ದುಪಡಿಗೆ ಕೊರೋನಾ ಪರಿಸ್ಥಿತಿ ಸುಧಾರಣೆಯಾದ ನಂತರದಲ್ಲಿ ಚಾಲನೆ ನೀಡಲಾಗುವುದು  ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೊರೋನಾ ಕಾರಣಕ್ಕೆ ರೂಲ್ಸ್ ಸಿದ್ಧಮಾಡಲು ಸಾಧ್ಯವಾಗಿಲ್ಲ. 'ಕೊರೋನಾ ಲಸಿಕೆ ವಿತರಣೆ ಒಂದು ಕಡೆ ಆರಂಭವಾದ ತಕ್ಷಣ ಇನ್ನೊಂದು ಕಡೆ ಸಿಎಎಗೆ ಸಂಬಂಧಿಸಿದ ಕಾನೂನುಗಳ ರೂಪುರೇಷೆ ಸಿದ್ಧತೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಮಮತಾಗೆ ಸದ್ದಿಲ್ಲದೆ ಅಮಿತ್ ಶಾ ಶಾಕ್

ಪಶ್ಚಿಮ ಬಂಗಾಳದ ಬೋಲ್ ಪುರದಲ್ಲಿ ಮಾತನಾಡಿದ ಕೇಂದ್ರ ಸಚಿವರು,  ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಮಮತಾ ಸರ್ಕಾರ ಒಳನುಸುಳುವಿಕೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದು ಬಿಜೆಪಿಯಿಂದ ಮಾತ್ರ ಅದಕ್ಕೆ ಬ್ರೇಕ್ ಹಾಕಲು ಸಾಧ್ಯ ಎಂದು ಹೇಳಿದರು.

ಅಸ್ಸಾಂನಂತೆ ಪಶ್ಚಿಮ ಬಂಗಾಳದಲ್ಲಿಯೂ  ಎನ್‌ಆರ್‌ಸಿ  ಮತ್ತು ಸಿಎಎ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರ ಆಲೋಚನೆ ಮಾಡಿದೆ ಎಂದುಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯ ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು  ಬಿಜೆಪಿ ತಳಮಟ್ಟದಿಂದ ಪಕ್ಷ ಸಂಘಟನೆ  ಮಾಡಿಕೊಳ್ಳುತ್ತಿದೆ.