ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಂದಿಗೆ ಆನೆಯ ಆಟ: ನೋಡುಗರಿಗೆ ಪುಳಕ,ಕಾರು ಓನರ್‌ಗೆ ನಡುಕ

ಕಾಡಾನೆಯೊಂದು ರಸ್ತೆಯಲ್ಲಿ ನಿಲ್ಲಿಸಿದ್ದ ಕಾರೊಂದನ್ನು, ಮಕ್ಕಳು ಆಟಿಕೆ ಕಾರಿನಲ್ಲಿ ಆಡುವಂತೆ ಸುತ್ತಲೂ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆ ಆಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ನರೆಂಗಿ ಮಿಲಿಟರಿ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

wild elephant playing with car, pushing car around like toy in Assam's guwahati video goes viral akb

ಗುವಾಹಟಿ: ಕಾಡಾನೆಯೊಂದು ರಸ್ತೆಯಲ್ಲಿ ನಿಲ್ಲಿಸಿದ್ದ ಕಾರೊಂದನ್ನು, ಮಕ್ಕಳು ಆಟಿಕೆ ಕಾರಿನಲ್ಲಿ ಆಡುವಂತೆ ಸುತ್ತಲೂ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆ ಆಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ನರೆಂಗಿ ಮಿಲಿಟರಿ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ದೈತ್ಯರು ಆಟವಾಡುವಂತಹ ಆಟಿಕೆಗಳು ಅಸ್ಸಾಂನ ದೃಶ್ಯ ತಮ್ಮದೇ ನೆಲದಲ್ಲಿ ವಲಸಿಗರಾದವರು' ಎಂದು ಬರೆದು ಈ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ರಸ್ತೆ ಬದಿ ಕಾರೊಂದನ್ನು ಪಾರ್ಕಿಂಗ್ (Car Parking) ಮಾಡಲಾಗಿತ್ತು. ಈ ಕಾರನ್ನು ನೋಡಿದ ಆನೆಗೆ (elephant) ಏನನಿಸಿತೋ ಏನೋ, ಕಾರನ್ನು ಸೊಂಡಿಲಿನಲ್ಲಿ ಹಿಡಿದು ಸುತ್ತಲೂ ತಿರುಗಿಸುತ್ತಿದೆ. ಇದನ್ನು ನೋಡುತ್ತಿದ್ದ ಜನರು ಜೋರಾಗಿ ಬೊಬ್ಬೆ ಹಾಕಿ ಆನೆಯನ್ನು ಓಡಿಸಲು ಯತ್ನಿಸುವುದನ್ನು ವಿಡಿಯೋದ ಹಿನ್ನೆಲೆಯಲ್ಲಿ ಕೇಳಬಹುದಾಗಿದೆ. ಆದರೆ ಕಾರನ್ನು ಒಂದು ಸುತ್ತು ಚೆನ್ನಾಗಿ ತಿರುಗಿಸಿದ ಆನೆ ಮತ್ತೆ ಕಾರಿದ್ದ ಸ್ಥಳದಲ್ಲೇ ಅದನ್ನು ತಂದು ನಿಲ್ಲಿಸಿ ಸುಮ್ಮನಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಒತ್ತುವರಿ (Forest encroachment) ಕಾಡು ನಾಶದ ಕಾರಣದಿಂದ ಕಾಡುಪ್ರಾಣಿಗಳು (Wild animal) ಹಾಗೂ ಮನುಷ್ಯರ ನಡುವೆ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಕಾಡುಪ್ರಾಣಿಗಳು ನಾಡಿನತ್ತ ಬಂದು ಉಪಟಳ ನೀಡುತ್ತಿವೆ. ಆನೆ ಕಾರಿಡಾರ್‌ಗಳ ನಾಶದಿಂದ ಆನೆಗಳು ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುತ್ತಿವೆ. 

ಕೆಲ ದಿನಗಳ ಹಿಂದೆ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌  ಅವರಿಗೆ ಕಾಡಾನೆ ಬಿಸಿ ಮುಟ್ಟಿಸಿತ್ತು. ಮಾಜಿ ಸಿಎಂ ಗರ್ವಾಲ್ ಪ್ರವಾಸದಿಂದ ಕೋಟ್‌ದ್ವಾರಕ್ಕೆ ಹಿಂತಿರುಗುತ್ತಿದ್ದ ವೇಳೆ ಸಿದ್ಧಬಲಿ ದೇವಸ್ಥಾನದ ಬಳಿ ಅವರ ಬೆಂಗಾವಲು ಪಡೆಗೆ ಗಜರಾಜ ಅಡ್ಡಿಪಡಿಸಿದ್ದಾನೆ. ಹೀಗಾಗಿ ಕಾಡಾನೆಯಿಂದ ಬಚಾವ್‌ ಆಗುವ ಸಲುವಾಗಿ ಮಾಜಿ ಸಿಎಂ ಹಾಗೂ ಅವರ ಭದ್ರತಾ ಸಿಬ್ಬಂದಿ ಬೆಟ್ಟವೇರಿ ಕುಳಿತಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಚಿಕ್ಕಮಗಳೂರು: ಮೋಹಿನಿ ಬಲೆಗೆ ಬಿದ್ದ ಮದಗಜ, ನಿಟ್ಟುಸಿರು ಬಿಟ್ಟ ಜನತೆ..!

ರಾವತ್ ಅವರ ಪೈಲಟ್ ವಾಹನಗಳು (pilot vehicle) ಆನೆಯ ಬದಿಯಿಂದ ಹಾದುಹೋಗಲು ಪ್ರಯತ್ನ ಮಾಡಿದವು. ಆದರೆ, ಆನೆ (Elephant) ರೋಷಾವೇಷದಲ್ಲಿತ್ತು. ಹೀಗಾಗಿ ಆನೆಯ ವರ್ತನೆಯನ್ನು ನೋಡಿಕೊಂಡು ಮುಂದೆ ಹೋಗುವ ತೀರ್ಮಾನ ಮಾಡಿದ್ದೆವು. ಪೈಲಟ್‌ ವಾಹನ ನಿಂತ ಕೆಲ ಸಮಯದಲ್ಲಿಯೇ ಅದರ ಹಿಂದೆ ಮಾಜಿ ಸಿಎಂ ರಾವತ್ ಅವರ ಕಾರು ಸೇರಿದಂತೆ ಇತರೆ ವಾಹನಗಳೂ ಬಂದು ನಿಂತುಕೊಂಡವು. ಆನೆ ದಾರಿ ಬಿಡುತ್ತದೆ, ಮುಂದೆ ಸಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು. ಆದರೆ, ಅವರೆಣಿಸಿದಂತೆ ಆಗಲಿಲ್ಲ. ನಮ್ಮ ಬೆಂಗಾವಲು ಪಡೆಯ ವಾಹನದ ಕಡೆಗೆ ಜೋರಾಗಿ ಆನೆ ಬರಲು ಆರಂಭ ಮಾಡಿತು. ಇದಾದ ಬಳಿಕ ವೇಗವಾಗಿ ಹಿಮ್ಮುಖವಾಗಿ ಬರಲು ಆರಂಭಿಸಿದವು. ಆನೆ ಕೂಡ ನಮ್ಮೆಲ್ಲರನ್ನೂ ಜೋರಾಗಿ ಅಟ್ಟಿಸಿ ಬರಲು ಆರಂಭಿಸಿತು ಎಂದು ರಾವತ್ ಮಾಧ್ಯಮ ಸಲಹೆಗಾರ ದರ್ಶನ್‌ ಸಿಂಗ್‌ ರಾವತ್‌ ಘಟನೆ ಬಗ್ಗೆ ವಿವರಿಸಿದ್ದಾರೆ. 

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಸಂಜೆ 5 ರಿಂದ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿತ್ತು. ಈ ಕಾರಣದಿಂದಾಗಿ ಮಾಜಿ ಸಿಎಂ ಹಾಗೂ ಬೆಂಗಾವಲು ಪಡೆ ಅರ್ಧ ಗಂಟೆಗಳ ಕಾಲ ಬೆಟ್ಟದ ಮೇಲೆಯೇ ತಂಗಿತ್ತು. ಈ ವೇಳೆ ವಾಹನಗಳು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದವು. ನಂತರ ಸಿಬ್ಬಂದಿ ತರಾತುರಿಯಲ್ಲಿ ಬೆಂಕಿ, ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಓಡಿಸಿದರು. ಮಾಜಿ ಸಿಎಂ ಹೆದ್ದಾರಿಯಲ್ಲಿ ಸಾಗಿದ ನಂತರ ಅರಣ್ಯ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಈ ರಸ್ತೆ ಇರುವ, ಕೊಟ್‌ದ್ವಾರ-ದುಗಡ್ಡಾ ನಡುವಿನ ಪ್ರದೇಶವು ಶಿವಾಲಿಕ್ ಆನೆ ಕಾರಿಡಾರ್ (Shivalik Elephant corridor) ಪ್ರದೇಶದಲ್ಲಿ ಬರುತ್ತದೆ ಎಂದು ದುಗಡ್ಡಾ ರೇಂಜ್ ಆಫೀಸರ್ ಪ್ರದೀಪ್ ಡೊಬ್ರಿಯಾಲ್ ಹೇಳಿದರು.
 

Latest Videos
Follow Us:
Download App:
  • android
  • ios