ಈ ಆನೆಗೆಷ್ಟು ಬುದ್ಧಿ ನೋಡಿ: ನಿಧಾನವಾಗಿ ವಿದ್ಯುತ್ ಬೇಲಿ ನೆಲಕ್ಕೆ ಕೆಡವಿದ ಮದಗಜ
ಆನೆಯೊಂದು ಸೋಲಾರ್ ಬೇಲಿಯನ್ನು ತನಗೇನು ಹಾನಿಯಾಗದಂತೆ ನೋಡಿಕೊಂಡು ನಿಧಾನವಾಗಿ ನೆಲಕ್ಕೆ ಕೆಡವುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ಆನೆಯ ಬುದ್ಧಿವಂತಿಕೆಗೆ ಬೆರಗಾಗಿದ್ದಾರೆ.
ಆನೆಗಳು ಬಹಳ ಬುದ್ದಿವಂತ ಪ್ರಾಣಿಗಳು ಎಂಬುದನ್ನು ಮತ್ತೊಮ್ಮೆ ಹೇಳಬೇಕಾಗಿಲ್ಲ. ಅವರ ಕೆಲವು ವರ್ತನೆಗಳು ಅವು ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿವಂತ ಪ್ರಾಣಿಗಳು ಎಂಬುದನ್ನು ಸಾಬೀತುಪಡಿಸಿವೆ. ಕಾಡಾನೆಗಳು ಹಾಗೂ ಪ್ರಾಣಿಗಳ ಸಂಘರ್ಷ ಇಂದು ನಿನ್ನೆಯದಲ್ಲ, ಕಾಡಂಚಿನ ಹಳ್ಳಿಗಳಲ್ಲಿ ಆನೆಗಳ ಹಾವಳಿ ಮಾಮೂಲಿ. ಆಹಾರ ಅರಸಿ ನಾಡಿನತ್ತ ದಾಂಗುಡಿಯಿಡುವ ಕಾಡಾನೆಗಳು, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನೆಲ್ಲಾ ನಾಶಪಡಿಸುತ್ತವೆ. ಹೀಗಾಗಿ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ಸೋಲಾರ್ ಬೇಲಿ, ವಿದ್ಯುತ್ ಬೇಲಿ ಮುಂತಾದವುಗಳ ಮೊರೆ ಹೋಗುತ್ತಾರೆ. ಆದರೆ ಬುದ್ಧಿವಂತ ಆನೆಗಳು ಇವುಗಳನ್ನು ಕೂಡ ಬಹಳ ಸುಲಭವಾಗಿ ತಮ್ಮ ಬುದ್ಧಿ ಪ್ರಯೋಗಿಸಿ ನೆಲಕ್ಕೆ ಕೆಡವುತ್ತವೆ. ಆನೆಯೊಂದು ಸೋಲಾರ್ ಬೇಲಿಯನ್ನು ತನಗೇನು ಹಾನಿಯಾಗದಂತೆ ನೋಡಿಕೊಂಡು ನಿಧಾನವಾಗಿ ನೆಲಕ್ಕೆ ಕೆಡವುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ಆನೆಯ ಬುದ್ಧಿವಂತಿಕೆಗೆ ಬೆರಗಾಗಿದ್ದಾರೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (IFS) ಅಧಿಕಾರಿ ಪರ್ವಿನ್ ಕಸ್ವಾನ್ (Parveen Kaswan) ಅವರು ಸಾಮಾಜಿಕ ಜಾಲತಾಣ (Social Media) ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಮನುಷ್ಯರೇ ನಾವೂ ಕೂಡ ತುಂಬಾ ಸ್ಮಾರ್ಟ್ ಇದ್ದೇವೆ. ನೋಡಿಲ್ಲಿ, ಈ ಆನೆ ಎಷ್ಟೊಂದು ಸ್ಮಾರ್ಟ್ ಆಗಿ ತಾಳ್ಮೆಯಿಂದ ವಿದ್ಯುತ್ ಬೇಲಿಯನ್ನು ಮುರಿಯುತ್ತಿದೆ ನೋಡಿ" ಎಂದು ಬರೆದು ಈ ವಿಡಿಯೋವನ್ನು ಪರ್ವಿನ್ ಕಸ್ವಾನ್ ಅವರು ಶೇರ್ ಮಾಡಿದ್ದಾರೆ.
ಆನೆಗೂ ಹೆದರದೇ, ರಿವರ್ಸ್ ಡ್ರೈವ್ ಮಾಡಿದ ಚಾಲಕ ಧೈರ್ಯಕ್ಕೆ ಭೇಷ್ ಎನ್ನಲೇ ಬೇಕು!
ಮೊದಲಿಗೆ ಆನೆ ಬಹಳ ಜಾಣತನದಿಂದ ಈ ಕರೆಂಟ್ ಬೇಲಿಯಲ್ಲಿ ವಿದ್ಯುತ್ ಹರಿಯುತ್ತಿದೆಯೇ ಎಂಬುದನ್ನು ಪರೀಕ್ಷಿಸುತ್ತದೆ. ನಿಧಾನವಾಗಿ ತನ್ನ ಕಾಲಿನಲ್ಲಿ ಮೆಲ್ಲ ಮೆಲ್ಲನೇ ಮುಟ್ಟುವ ಆನೆ ನಂತರ ನಿಧಾನವಾಗಿ ವಿದ್ಯುತ್ ಬೇಲಿಯ (electrical fence) ಕಂಬವನ್ನು ತನ್ನ ಕಾಲಿನಿಂದ ಕೆಳಗೆ ತಳ್ಳುತ್ತದೆ. ನಂತರ ಆ ಬೇಲಿ ದಾಟುವಲ್ಲಿ ಯಶಸ್ವಿಯಾಗುತ್ತದೆ. ಈ ವಿಡಿಯೋ ನೋಡಿದ ಅನೇಕರು ಬಹಳ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಆನೆಯನ್ನು ರಸ್ಲರ್ ಜಾನ್ ಸೀನಾಗೆ ಹೋಲಿಸಿದ್ದಾರೆ. ಮತ್ತೆ ಕೆಲವರು ಬೇಲಿ ಮುರಿಯುವಲ್ಲಿ ಆನೆಯ ತಾಳ್ಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತೆ ಕೆಲವರು ಇದೇ ಕಾರಣಕ್ಕೆ ಆನೆ ಹಾಗೂ ಮಾನವರ ನಡುವೆ ಸಂಘರ್ಷ ನಡೆಯುತ್ತದೆ ಎಂದಿದ್ದಾರೆ.
Viral Video: ಆನೆ ಅಟ್ಟಿಸಿ ಬಂದಿದ್ದಕ್ಕೆ 8 ಕಿ.ಮೀ. ರಿವರ್ಸ್ ಬಸ್ ಓಡಿಸಿದ ಚಾಲಕ!
ಇನ್ನೊಂದೆಡೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಕೂಡ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ದೊಡ್ಡ ಸಂಖ್ಯೆಯ ಆನೆಗಳ ಹಿಂಡೊಂದು ರಾಗಿ ಹೊಲಗಳತ್ತ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ತಮಿಳುನಾಡಿನ ವಿಡಿಯೋ ಇದಾಗಿದೆ. ಪೂರ್ವಘಟ್ಟ ಪ್ರದೇಶದಲ್ಲಿನ ಕಾಡುಗಳಿಂದ ಆನೆಗಳು ದೊಡ್ಡಸಂಖ್ಯೆಯಲ್ಲಿ ಆಹಾರ ಅರಸಿ ರಾಗಿ ಹೊಲಗಳತ್ತ ಬರುವ ಸಮಯ ಇದಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಸುರಕ್ಷಿತವಾಗಿ ಕಾಡಿನತ್ತ ಓಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ. 23 ಸೆಕೆಂಡ್‌ಗಳ ವಿಡಿಯೋದಲ್ಲಿ 50ಕ್ಕಿಂತ ಹೆಚ್ಚು ಆನೆಗಳು ಹಿಂಡು ಹಿಂಡಾಗಿ ಸಾಗುತ್ತಿರುವ ದೃಶ್ಯವಿದೆ.