ಟ್ರಾಫಿಕ್ ಪೊಲೀಸ್ ತರ ಬಸ್ ನಿಲ್ಲಿಸಿದ ಆನೆ : ವಿಡಿಯೋ ನೋಡಿ
- ಬಸ್ ಮುಂದೆ ಧುತ್ತನೇ ಎದುರಾದ ಆನೆ
- ಏನೂ ಆಗದಂತೆ ಪರಿಸ್ಥಿತಿ ನಿಭಾಯಿಸಿದ ಚಾಲಕ
- ಕೇರಳದ ಮುನ್ನಾರ್‌ನಲ್ಲಿ ಘಟನೆ
ಆನೆಗಳ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು. ದಟ್ಟಾರಣ್ಯಗಳ ನಡುವೆ ಸಾಗುವ ರಸ್ತೆಗಳಲ್ಲಿ ಆನೆಗಳು ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆನೆಗಳು ಸೌಮ್ಯ ಪ್ರಾಣಿಗಳು. ತಮ್ಮನ್ನು ಯಾರೂ ಕೆರಳಿಸದ ಹೊರತು ಅವುಗಳು ಯಾರಿಗೂ ಏನು ಮಾಡುವುದಿಲ್ಲ. ಆದರೆ ಮದವೇರಿದರೆ ಅವುಗಳ ಮುಂದೆ ಉಳಿಯಲು ಸಾಧ್ಯವಿಲ್ಲ.
ಆದರೆ ಕಾಡಾನೆಗಳ ಬಗ್ಗೆ ಭಯ ಮಾತ್ರ ಜನರಿಗೆ ಇದ್ದೇ ಇದೆ. ಆದಾಗ್ಯೂ ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ಧುತ್ತನೇ ಆನೆಯೊಂದು ಎದುರಾದರೆ ಹೇಗಿರುತ್ತದೆ. ನಿಜವಾಗಿಯೂ ಎದೆ ಢವ ಢವನೇ ಹೊಡೆದುಕೊಳ್ಳಲು ಶುರು ಮಾಡುತ್ತದೆ ಅಲ್ಲವೇ ಹಾಗೆಯೇ ಕೇರಳದ ಮುನ್ನಾರ್‌ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಕೇರಳ ಸಾರಿಗೆ ಇಲಾಖೆಗೆ ಸೇರಿದ ಬಸ್ ಮುಂದೆ ಆನೆಯೊಂದು ಧುತ್ತನೇ ಎದುರಾಗಿದೆ.
ಆನೆಯನ್ನು ನೋಡಿ ಬಸ್‌ನಲ್ಲಿ ಇದ್ದ ಪ್ರಯಾಣಿಕರೆಲ್ಲಾ ಬೊಬ್ಬೆ ಹೊಡೆಯಲು ಶುರು ಮಾಡುತ್ತಾರೆ. ಜೊತೆಗೆ ತಮ್ಮ ಫೋನ್‌ಗಳನ್ನು ಕೈಗೆ ತೆಗೆದುಕೊಂಡು ವಿಡಿಯೋ ಮಾಡಲು ಶುರು ಮಾಡುತ್ತಾರೆ. ವಿಡಿಯೋದಲ್ಲಿ ಕಾಣಿಸುವಂತೆ ಎರಡು ದಂತಗಳ ದೊಡ್ಡ ಕಾಡಾನೆಯನ್ನು (wild elephant) ನೋಡಿ ಬಸ್ ಚಾಲಕ ಬಸ್‌ನ್ನು ನಿಲ್ಲಿಸುತ್ತಾನೆ. ಇತ್ತ ಬಸ್ ನಿಂತಲ್ಲಿಗೆ ಬರುವ ಆನೆ ಒಮ್ಮೆ ಡ್ರೈವರ್ ಇದ್ದಲ್ಲಿಗೆ ತನ್ನ ಸೊಂಡಿಲನ್ನು ತೂರಿಸುತ್ತದೆ. ನಂತರ ಸ್ವಲ್ಪ ಕಾಲ ಬಸ್ ಮುಂದೆಯೇ ನಿಲ್ಲುತ್ತದೆ. ನಂತರ ನಿಧಾನಕ್ಕೆ ರಸ್ತೆಯಿಂದ ದೂರ ಸರಿದು, ಬಸ್ ಮುಂದೆ ಹೋಗಲು ಅವಕಾಶ ಮಾಡಿಕೊಡುತ್ತದೆ.
ಈ ಒಂದು ನಿಮಿಷ 34 ಸೆಕೆಂಡ್‌ಗಳ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು (Supriya Sahu) ಅವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಯ (Elephant) ಆಗಮನದ ವೇಳೆ ಬಸ್ (Bus) ಚಾಲಕ (Driver) ಆ ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಈ ಸರ್ಕಾರಿ ಬಸ್ಸಿನ ಚಾಲಕ ಯಾರೆಂದು ಗೊತ್ತಿಲ್ಲ ಆದರೆ ಅವನು ಖಂಡಿತವಾಗಿಯೂ ಮಿಸ್ಟರ್ ಕೂಲ್. ಆನೆಯ ಮೇಲ್ವಿಚಾರಣೆ ತಪಾಸಣೆಯನ್ನು ಅವರು ನಿರ್ವಹಿಸಿದ ರೀತಿ, ಇದು ಅವರ ನಡುವೆ ಎಂದಿನಂತೆ ವ್ಯವಹಾರದಂತಿದೆ ಎಂದು ಬರೆದಿದ್ದಾರೆ.
ರಾಷ್ಟ್ರೀಯ ಆನೆ ದಿನ : ಹಣ್ಣು ತರಕಾರಿಗಳ ಬಪೆ ಆಯೋಜಿಸಿ ಗಜಪಡೆಗೆ ಸನ್ಮಾನ
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಮಂಗಳವಾರ ಮುನ್ನಾರ್ (Munnar) ಉಪ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಈ ಘಟನೆ ನಡೆದಿದೆ. ಕಿರು ವೀಡಿಯೊದಲ್ಲಿ, ರಸ್ತೆಯಲ್ಲಿ ಆನೆ ನಡೆದುಕೊಂಡು ಹೋಗುವುದನ್ನು ನೋಡಿದ ಸರ್ಕಾರಿ ಬಸ್ ಚಾಲಕನೊಬ್ಬ ಬಸ್ ನಿಲ್ಲಿಸಿದ್ದಾನೆ. ಆದರೆ, ಕೆಲವೇ ಸೆಕೆಂಡ್‌ಗಳ ನಂತರ ಆನೆ ಬಸ್‌ನತ್ತ ಧಾವಿಸಿದಾಗ ಒಳಗಿದ್ದ ಪ್ರಯಾಣಿಕರು ಕೂಗಾಡಲು ಆರಂಭಿಸಿದರು. ಆದರೆ ಚಾಲಕ ಶಾಂತವಾಗಿ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದರು. ಈ ವೀಡಿಯೊವನ್ನು 15 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಚಾಲಕ ತೋರಿದ ಧೈರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಕೆಸರು ತುಂಬಿದ ಹೊಂಡಕ್ಕೆ ಬಿದ್ದ ಆನೆಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ