ಗಂಡನಿಗೆ ಪ್ರಾಂಕ್ ಮಾಡಲು ಹೋದ ಪತ್ನಿಗೆ ತಿಂದ ಬೈಗಳು. ಮಂಜುಲಿಕಾಳಂತೆ ಗಂಡನನ್ನು ಹೆದರಿಸಿದ ಪತ್ನಿ. ಈ ವಿಡಿಯೋ ನೋಡಿದ ನೆಟ್ಟಿಗರು, ಮಹಿಳೆಗೆ ಇದು ನಿಂಗೆ ಬೇಕಿತ್ತಾ ಎಂದಿದ್ದಾರೆ.

ಇಂದಿನ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಏನು ಹಂಚಿಕೊಳ್ಳಬೇಕು ಎಂಬುವುದೇ ಗೊತ್ತಾಗಲ್ಲ. ಹೆಚ್ಚು ಲೈಕ್ಸ್ ಮತ್ತು ವ್ಯೂವ್‌ಗಾಗಿ ಖಾಸಗಿ ಬದುಕಿನ ಅತ್ಯಮೂಲ್ಯವಾದ ಕ್ಷಣಗಳನ್ನು ಶೇರ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಾರೆ. ಕೆಲವೊಮ್ಮೆ ಖಾಸಗಿ ಬದುಕಿನಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದೀಗ ಮಹಿಳೆಯೊಬ್ಬರು ಗಂಡನಿಗೆ ಪ್ರಾಂಕ್ ಮಾಡಲು ಹೋಗಿ ಬೈಗಳು ತಿಂದಿದ್ದಾಳೆ. ಪತ್ನಿ ಮಾಡಿದ ಕಿತಾಪತಿಯಿಂದ ನೊಂದ ಗಂಡ, ನಿನ್ನೊಂದಿಗೆ ನಾನು ಮಲಗಲ್ಲ ಎಂದು ದಿಂಬು ಮತ್ತು ಹಾಸಿಗೆ ಹಿಡಿದು ಬೆಡ್‌ರೂಮ್‌ನಿಂದ ಹೊರಗೆ ಹೋಗಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮಹಿಳೆಗೆ ಇದು ನಿಂಗೆ ಬೇಕಿತ್ತಾ ಎಂದಿದ್ದಾರೆ. 

ವೈರಲ್ ಆಗಿರುವ ವಿಡಿಯೋವನ್ನು Vishakha & Divesh (vishakha_divesh) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ 48 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು 21 ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ಪತ್ನಿಯ ಕಿತಾಪತಿಯಿಂದ ಗಂಡನಿಗೆ, ಆ ಸಮಯದಲ್ಲಿ ಎಲ್ಲಾ ದೇವರು ಕಣ್ಮುಂದೆ ಬಂದಿರಬೇಕು. ಪಾಪ ಆತನಿಗೆ ಎಷ್ಟು ಭಯವಾಗಿದೆ ಎಂದು ಆತನ ಮುಖ ನೋಡಿದರೆ ಗೊತ್ತಾಗುತ್ತದೆ. ಈ ವಿಡಿಯೋ ನೋಡಿದ ಓರ್ವ ಮಹಿಳೆ, ಇಂದು ನಾನು ಸಹ ಇದೇ ರೀತಿ ಮಾಡಿ ಗಂಡನನ್ನು ಹೆದರಿಸುವೆ ಎಂದು ಹೇಳಿ ಕಮೆಂಟ್ ಮಾಡಿದ್ದಾರೆ. 

ಕನ್ನಡದ ಆಪ್ತಮಿತ್ರ ಮತ್ತು ಆಪ್ತರಕ್ಷಕ ಸಿನಿಮಾದಲ್ಲಿನ ನಾಗವಲ್ಲಿ ಪಾತ್ರ ಅಂದ್ರೆ ಜನರು ಭಯಪಡುತ್ತಾರೆ. ಇದೇ ಕಥೆಯನ್ನು ಹೊಂದಿರುವ ಸಿನಿಮಾಗಳು ತಮಿಳು, ತೆಲಗು, ಹಿಂದಿ ಭಾಷೆಯಲ್ಲಿಯೂ ಬಿಡುಗಡೆಗೊಂಡಿವೆ. ಹಿಂದಿಯಲ್ಲಿ 'ಭೂಲ್ ಭೂಲಯ್ಯ' ಸರಣಿಯಲ್ಲಿ ಸಿನಿಮಾಗಳು ಬಿಡುಗಡೆಗೊಂಡಿವೆ. ಕನ್ನಡದ ನಾಗವಲ್ಲಿ ಹಿಂದಿ ಸಿನಿಮಾಗಳಲ್ಲು ಮಂಜುಲಿಕಾ ಆಗಿದ್ದಾಳೆ. ಹಾಗಾಗಿ ಕನ್ನಡಿಗರಂತೆ ಹಿಂದಿ ಭಾಷಿಕರಿಗೆ ಮಂಜುಲಿಕಾ ಅಂದ್ರೆ ಭಯ. ಈ ವೈರಲ್ ಅಗಿರುವ ವಿಡಿಯೋದಲ್ಲಿ ಮಹಿಳೆ ಮಂಜುಲಿಕಾಳಂತೆ ಗಂಡನನ್ನು ಹೆದರಿಸಿದ್ದಾಳೆ. ಪತ್ನಿಯನ್ನು ಕಂಡ ಗಂಡ ಅಕ್ಷರಷಃ ಭಯಗೊಂಡಿರೋದನ್ನು ವಿಡಿಯೋದಲ್ಲಿ ನೋಡಬಹುದು. 

ಇದನ್ನೂ ಓದಿ: ಭಕ್ತರಿಗಾಗಿ ಸಿದ್ಧಪಡಿಸಿದ್ದ ಪ್ರಸಾದದಲ್ಲಿ ಬೂದಿ, ಮಣ್ಣು ಹಾಕಿದ ಪೊಲೀಸ್; ಶಾಪ ಹಾಕಿದ ಜನರು

ವೈರಲ್ ವಿಡಿಯೋದಲ್ಲಿ ಏನಿದೆ? 
ಗಂಡ ನಿದ್ದೆ ಮಾಡುತ್ತಿರುವ ಸಂದರ್ಭದಲ್ಲಿ ಆತನ ಪಕ್ಕ ಹೋಗಿ ಮಹಿಳೆ ಮಲಗುತ್ತಾಳೆ. ನಂತರ 'ಮೇರೇ ಚಾಹತೇ ಓ' ಎಂದ ಜೋರಾಗಿ ಹಾಡು ಹೇಳಲು ಆರಂಭಿಸುತ್ತಾಳೆ. ಈ ಧ್ವನಿಯಿಂದ ಗಂಡ ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ. ಗಂಡ ಏಳುತ್ತಿದ್ದಂತೆ ನಿದ್ದೆಯಲ್ಲಿ ಕನವರಿಸಿದಂತೆ ಸಿನಿಮಾದ ಡೈಲಾಗ್ ಹೇಳುತ್ತಾನೆ. ಇದನ್ನು ನೋಡಿ ಹೆದರಿದ ಗಂಡ, ಹನುಮಾನ್ ಚಾಲೀಸಾ ಹೇಳುತ್ತಾ ಗಣಪತಿ ಬಪ್ಪಾ ಕಾಪಾಡು ಎಂದು ಮೊರೆಯಿಡುತ್ತಾನೆ. ನಂತರ ಹೆಂಡ್ತಿಯನ್ನು ಎಬ್ಬಿಸಿದಾಗ, ಏನಾಗಿದೆ? ಏಕೆ ಹೀಗೆ ಕೂತಿದ್ದೀಯಾ ಎಂದು ಮಹಿಳೆ ಗಂಡನನ್ನೇ ಪ್ರಶ್ನೆ ಮಾಡುತ್ತಾಳೆ. ನಂತರ ನಗುತ್ತಾಳೆ. ಇದರಿಂದ ಕೋಪಗೊಂಡ ಪತಿ, ನಿನಗೇನು ಹುಚ್ಚು ಹಿಡಿದಿದೆಯಾ? ನಿನ್ನೊಂದಿಗೆ ನಾನು ಮಲಗಲ್ಲ. ಹೊರಗೆ ಸೋಫಾ ಮೇಲೆ ಮಲಗುತ್ತೇನೆ ಎಂದು ಅಲ್ಲಿಂದ ಹೊರಡುತ್ತಾನೆ. 

ಇದನ್ನೂ ಓದಿ: ಸತ್ರೂ ಬಿಡ್ತಿಲ್ಲ, ಸಮಾಧಿ ಮುಂದೆ ಯುವತಿಯ ರೀಲ್ಸ್; ಅಶರೀರ ವಾಣಿ ಕೇಳಿ ಕಾಲ್ಕಿತ್ತ ಹುಡುಗಿ ವಿಡಿಯೋ ನೋಡಿ

View post on Instagram