Dancing Girl Video:ಯುವತಿಯೊಬ್ಬಳು ಸಮಾಧಿ ಮುಂದೆ ರೀಲ್ಸ್ ಮಾಡುತ್ತಿದ್ದಾಗ ಅಶರೀರವಾಣಿ ಕೇಳಿ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರವಾಗಿರುವ ರೀಲ್ಸ್ ವೈರಲ್ ಆಗುತ್ತಿರುತ್ತವೆ. ರೀಲ್ಡ್ ಮೂಲಕ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದುವ ಕನಸು ಕಾಣುವ ಜನರು ಅದಕ್ಕಾಗಿ ತುಂಬಾನೇ ಕಷ್ಟಪಡುತ್ತಾರೆ. ಚೆಂದದ ಡ್ರೆಸ್ ಧರಿಸಿ, ಸುಂದರವಾದ ಸ್ಥಳದಲ್ಲಿ ನಿಂತ್ಕೊಂಡು ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಎಷ್ಟೇ ಅಚ್ಚುಕಟ್ಟಾಗಿ ಮಾಡಿದ್ರೂ ವಿಡಿಯೋಗಳಿಗೆ ಲೈಕ್ಸ್ ಬರದೇ ನಿರಾಶರಾಗುತ್ತಾರೆ. ರೀಲ್ಸ್ ಮಾಡುವಾಗಿನ ಎಡವಟ್ಟಿನ ಮೇಕಿಂಗ್ ವಿಡಿಯೋಗಳು ಅತಿ ಕಡಿಮೆ ಸಮಯದಲ್ಲಿ ಎಲ್ಲರ ಮೊಬೈಲ್ ತಲುಪುತ್ತವೆ. ಇಂದಿನ ವಿಡಿಯೋದಲ್ಲಿ ಯುವತಿಯೊಬ್ಬಳು ಸಮಾಧಿ ಮುಂದೆ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿನಗೆ ಬೇರೆ ಯಾವ ಜಾಗ ಸಿಗಲಿಲ್ಲವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಮಾಧಿ ಮುಂದೆ ಹಿಂದಿಯ ರೊಮ್ಯಾಂಟಿಕ್ 'ತೇರೇ ಲಿಯೇ ಸಜ್ ಕೇ' ಹಾಡಿಗೆ ಯುವತಿ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ತರೇಹವಾರಿಯಾಗಿ ಕಮೆಂಟ್ ಮಾಡಿದ್ದಾರೆ. ಸಿಕ್ಕ ಸಿಕ್ಕ ಜಾಗದಲ್ಲಿ ಕ್ಯಾಮೆರಾ ಆನ್ ಮಾಡ್ಕೊಂಡು ನಿಂತ್ರೆ ಸಮಾಧಿಯಲ್ಲಿರೋರು ಎದ್ದು ಬರುತ್ತಾರೆ ಹುಷಾರ್ ಎಂದು ನೆಟ್ಟಿಗರು ಯುವತಿಗೆ ಸಲಹೆ ನೀಡಿದ್ದಾರೆ. ಕೆಲವರು ಸಮಾಧಿ ಬಳಿ ರೀಲ್ಸ್ ಮಾಡುವ ನಿನ್ನ ಧೈರ್ಯ ಮೆಚ್ಚಬೇಕು ಎಂದು ಮೆಚ್ಚುಗೆಯ ಮಾತಗಳನ್ನಾಡಿದ್ದಾರೆ. ಹಸಿರು ಬಣ್ಣದ ಸೀರೆ ಧರಿಸಿರುವ ಯುವತಿ ಡ್ಯಾನ್ಸ್ ಮಾಡೋದನ್ನು ವಿಡಿಯೋದಲ್ಲಿ ಕಾಣಬಹುದು. ರೀಲ್ಸ್‌ನಲ್ಲಿ ಮೇಲ್ ವಾಯ್ಸ್ ಬರುತ್ತಿದ್ದಂತೆ ಭಯಗೊಂಡಂತೆ ನಟಿಸಿರುವ ಯುವತಿ ಅಲ್ಲಿಂದ ಓಡಿ ಹೋಗಿದ್ದಾಳೆ.
ಯುವತಿಯ ಈ ರೀಲ್ಸ್ saiba__19 ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದುವರೆಗೂ ಈ ವಿಡಿಯೋಗೆ 11 ಲಕ್ಷಕ್ಕೂ ಅಧಿಕ ವ್ಯೂವ್, 3.4 ಸಾವಿರಕ್ಕೂ ಹೆಚ್ಚು ಲೈಕ್ಸ್, 15 ಸಾವಿರ ಅಧಿಕ ಬಾರಿ ಶೇರ್ ಮಾಡಿಕೊಳ್ಳಲಾಗಿದೆ. ಯುವತಿಯ ವೈರಲ್ ಡ್ಯಾನ್ಸ್‌ಗೆ ಕಮೆಂಟ್ ಮಾಡಿರುವ ನಟ್ಟಿಗರು, ಸತ್ತರೂ ನೆಮ್ಮದಿಯಿಂದ ಇರಲು ಇಂದಿನ ಯುವ ಸಮುದಾಯ ಬಿಡುತ್ತಿಲ್ಲವಲ್ಲಾ? ಸತ್ತ ವ್ಯಕ್ತಿ ಬದುಕಿದ್ದಾಗ ಯಾರೂ ನನ್ನ ಬಳಿ ಬರಲಿಲ್ಲ. ಈಗ ಬಂದ್ರೆ ಏನು ಮಾಡಲಿ ಎಂದು ಯೋಚಿಸುತ್ತಿರಬೇಕು ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 17 ಪತ್ನಿಯರ ಮುದ್ದಿನ ಗಂಡ, 84 ಮಕ್ಕಳ ಪ್ರೀತಿಯ ಅಬ್ಬಾ ಜಾನ್; ನಾನು ಗ್ಲೋಬಲ್ ಫಾದರ್ ಎಂದ ಸೂಪರ್ ಡ್ಯಾಡಿ
ಸೈಬಾ ತನ್ನ ಇನ್‌ಸ್ಟಾಗ್ರಾಂನಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದು, ಅನೇಕ ರೀಲ್ಸ್ ಅಪ್ಲೋಡ್ ಮಾಡುತ್ತಿರುತ್ತಾರೆ. ಸೈಬಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದು, ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡುತ್ತಿರುತ್ತಾಳೆ. ಇನ್‌ಸ್ಟಾ ಬಯೋದಲ್ಲಿ ಹೆಸರು ಸೈಬಾ, ಅದು ಸಹ ಹಾಳಾಗಿದೆ ಎಂದು ಬರೆದುಕೊಂಡಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಹಾವುಗಳನ್ನು ರಕ್ಷಣೆ ಮಾಡಿ ಅವುಗಳ ಜೊತೆ ರೀಲ್ಸ್ ಮಾಡುವ ಸೈಬಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಹಾವುಗಳ ರಕ್ಷಣೆ ಮಾಡುವ ಸೈಬಾ ಅವುಗಳ ಜೊತೆ ರೀಲ್ಸ್ ಮಾಡುವ ಮೂಲಕವೇ ಹೆಚ್ಚು ಫೇಮಸ್ ಆಗಿದ್ದಾರೆ.
ಇದನ್ನೂ ಓದಿ:ಆಫಿಸ್‌ನಲ್ಲಿಯೇ ಕುಚ್ ಕುಚ್; ಮುತ್ತಿನಮಳೆ ಸುರಿಸೋ ಆತುರದಲ್ಲಿ ಕ್ಯಾಮೆರಾ ಇರೋದನ್ನೇ ಮರೆತ್ರು!
