ಐಎಎಸ್, ಐಪಿಎಸ್, ನೀಟ್, ಐಐಟಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಿಂತ ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿ ಪರೀಕ್ಷೆ ಅತ್ಯಂತ ಕಠಿಣ. ವಿಶಾಲ್ ಮಾರ್ಟ್ ಗಾರ್ಡ್ ಆಗಿ ಕೆಲಸ ಗಿಟ್ಟಿಸಿಕೊಳ್ಳವುದು ನನ್ನ ಕನಸು. ಈ ರೀತಿ ಹಲವು ಮೀಮ್ಸ್ ಹರಿದಾಡುತ್ತಿದೆ. ದಿಢೀರ್ ವಿಶಾಲ್ ಮಾರ್ಟ್ ಗಾರ್ಡ್ ಮೀಮ್ಸ್ ಹರಿದಾಡುತ್ತಿರುವುದೇಕೆ?
ಬೆಂಗಳೂರು(ಮೇ.20) ಇಂಟರ್ನೆಟ್‌ನಲ್ಲಿ ವಿಶಾಲ್ ಮೆಗಾ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿಯದ್ದೇ ಭಾರಿ ಸದ್ದು. ಹಲವರು ಮೀಮ್ಸ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ವಿರಾಟ್ ಕೊಹ್ಲಿ ದಿಢೀರ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಕೊಟ್ಟಿದ್ದೇ, ವಿಶಾಲ್ ಮಾರ್ಟ್ ಕೆಲಸ ಗಿಟ್ಟಿಸಿಕೊಳ್ಳಲು ಎಂದು ಮೀಮ್ಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿಯದ್ದೇ ಸದ್ದು. ಯುಪಿಎಸ್‌ಸಿ, ಜಿಇಇ, ನೀಟ್, ಐಐಟಿ ಸೇರಿದಂತೆ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳು ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿ ಪರೀಕ್ಷೆ ಮುಂದೆ ಏನೂ ಅಲ್ಲ ಎಂದು ಹಲವರು ಮೀಮ್ಸ್ ಮಾಡಿದ್ದಾರೆ.
ದಿಢೀರ್ ವಿಶಾಲ್ ಮಾರ್ಟ್ ಸಕ್ಯೂರಿಟಿ ಗಾರ್ಡ್ ನೇಮಕಾತಿ ಮೀಮ್ಸ್ ಆಗಿದ್ದೇಕೆ?
ವಿಶಾಲ್ ಮೆಗಾ ಮಾರ್ಟ್ ಭಾರತದಲ್ಲಿ ಹಲೆವೆಡೆ ಕೇಂದ್ರಗಳನ್ನು ಹೊಂದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರ ಪಟ್ಟಣಗಳಲ್ಲಿ ವಿಶಾಲ್ ಮಾರ್ಟ್ ಕಾರ್ಯನಿರ್ವಹಿಸುತ್ತಿದೆ. ಇದೀಗ ದೇಶಾದ್ಯಂತ ಇರುವ 645 ವಿಶಾಲ್ ಮಾರ್ಟ್‌ಗೆ ಸೆಕ್ಯೂರಿಟಿ ಗಾರ್ಡ್ ನೇಮಕಾತಿಗೆ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಜಾಹೀರಾತು ನೀಡಿತ್ತು. ಎಲ್ಲಾ ಕಂಪನಿಗಳು ನೀಡುವಂತೆ ಸೆಕ್ಯೂರಿಟಿ ಗಾರ್ಡ್ ನೇಮಕಾತಿಗೆ ಜಾಹೀರಾತು ನೀಡಿದೆ. ಇದರಲ್ಲಿ ವಿಶೇಷ ಏನೂ ಇಲ್ಲ. ಆದರೆ ಈ ನೇಮಕಾತಿ ಜಾಹೀರಾತು ಅಷ್ಟೇ ಬೇಗದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಸಿತ್ತು. ನೆಟ್ಟಿಗರು ಮೀಮ್ಸ್ ಮೂಲಕ ಪ್ರತಿಕ್ರಿಯಿಸಲು ಆರಂಭಿಸಿದ್ದರು. ಇದು ಕಾಡ್ಗಿಚ್ಚಿನಂತೆ ಹರಿದಾಡಿತ್ತು. ಇದೀಗ ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ಸ್ ಮೀಮ್ಸ್ ವೈರಲ್ ಆಗಿದೆ.
ಗಂಭೀರ ನೇಮಕಾತಿ ಪ್ರಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ವಿಶಾಲ್ ಮಾರ್ಟ್ ನೇಮಕಾತಿ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಫ್ರೆಶರ್ಸ್‌ಗೆ 9,000 ರೂಪಾಯಿಯಿಂದ 12,000 ರೂಪಾಯಿ, ಅನುಭವಿಗಳಿಗೆ 13,000 ರೂಪಾಯಿಯಿಂದ 18,000 ರೂಪಾಯಿ ಹಾಗೂ ಸೂಪರ್‌ವೈರಸ್ ಹುದ್ದೆಗೆ 19,000 ರೂಪಾಯಿಯಿಂದ 25,000 ರೂಪಾಯಿ. ಈ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯಲ್ಲಿ ಕೆಲ ಸೂಚನೆಯನ್ನು ಕಂಪನಿ ನೀಡಿದೆ. ಈ ಪೈಕಿ ಸೆಕ್ಯೂರಿಟಿ ನೇಮಕಾತಿಗೆ ಲಿಖಿತ ಪರೀಕ್ಷೆ, ಬಳಿಕ ಫಿಸಿಕಲ್ ಟೆಸ್ಟ್, ಮೆಡಿಕಲ್ ಟೆಸ್ಟ್ ಸೇರಿದಂತೆ ಹಲವು ಹಂತದ ಪರೀಕ್ಷೆಗಳನ್ನು ವಿಭಾಗಿಸಲಾಗಿತ್ತು. ಇದೇ ನೇಮಕಾತಿ ಪ್ರಕ್ರಿಯೆ ಇದೀಗ ಟ್ರೋಲ್ ಆಗಿ, ಮೀಮ್ಸ್ ಆಗಿ ಹರಿದಾಡುತ್ತಿದೆ.
ವಿಶಾಲ್ ಮೆಗಾ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿಗೆ ತೆರಳುವ ಮುನ್ನ ಅಭ್ಯರ್ಥಿಗಳಿಗೆ ಕೋಚಿಂಗ್ ನೀಡುವ ಕುರಿತು ಹಲವು ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಟ್ರೋಲ್ ಮಾಡಲಾಗಿದೆ. ಮೊದಲ ಪ್ರಯತ್ನದಲ್ಲೇ ವಿಶಾಲ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಇದಕ್ಕೆ ಕಠಿಣ ಪರಿಶ್ರಮ, ಓದು ಅಗತ್ಯವಿದೆ. ಹೀಗಾಗಿ ಕೋಚಿಂಗ್ ಪಡೆದು ನೇಮಕಾತಿಯಲ್ಲಿ ಪಾಲ್ಗೊಳ್ಳಿ ಎಂದು ಟ್ರೋಲ್ ಮಾಡಲಾಗಿದೆ. ಹಲವು ಕಂಪನಿಗಳು ಸಿಇಒ, ಬಾಸ್, ಮ್ಯಾನೇಜರ್‌ಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಎಲ್ಲೆಡೆ ಉದ್ಯೋಗ ಕಡಿತವಾಗುತ್ತಿದೆ. ಆದರೆ ನೀವು ಹೆದರಬೇಕಾಗಿಲ್ಲ, ಕಾರಣ ನೀವು ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ಎಂದು ಟ್ರೋಲ್ ಮಾಡಲಾಗುತ್ತಿದೆ.
ನನ್ನ ಮೂರನೇ ಪ್ರಯತ್ನದಲ್ಲಿ ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದೇನೆ. ನಿರುದ್ಯೋಗ ಸಮಸ್ಯೆ ಇಲ್ಲಿಗೆ ಅಂತ್ಯಗೊಂಡಿತು ಎಂದು ಟ್ರೋಲ್ ಮಾಡಿದ್ದಾರೆ. ಹಲವರು ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿ ಕುರಿತು ಮೀಮ್ಸ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಈ ಮೂಲಕ ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ಉದ್ಯೋಗ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ.


