ಅಮೆರಿಕವು ಚೀನಾದ ಸರಕುಗಳ ಮೇಲೆ ಸುಂಕ ವಿಧಿಸಿದ್ದಕ್ಕೆ ಚೀನಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದೆ. ಅಮೆರಿಕನ್ನರು ಕಾರ್ಖಾನೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು 1950ರ ದಶಕದ ನೆನಪುಗಳನ್ನು ಕೆದಕುತ್ತಿದ್ದಾರೆ.

ನವದೆಹಲಿ (ಏ.9): ಅಮೆರಿಕವು ಇತ್ತೀಚೆಗೆ ಚೀನಾದಿಂದ ಬರುವ ಸರಕುಗಳ ಮೇಲೆ ಭಾರಿ ಸುಂಕವನ್ನು ವಿಧಿಸಿದೆ. ಇದರಿಂದ ಚೀನಾದಿಂದ ಅಮೆರಿಕಕ್ಕೆ ಹೋಗುವ ಬಟ್ಟೆ, ಬೂಟುಗಳು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕೊರತೆಯಾಗಬಹುದು ಮತ್ತು ಬೆಲೆಗಳು ಏರಿಕೆಯಾಗಬಹುದು ಎಂದು ಅಂಸಾಜಿಸಲಾಗಿದೆ. ಅಮೆರಿಕದ ಹೆಚ್ಚಿನ ಕಂಪನಿಗಳು ಉತ್ಪಾದನಾ ಕಾರ್ಯವನ್ನು ವಿದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಚೀನಾದಲ್ಲಿ ಮಾಡಿಸುತ್ತವೆ. ಆದರೆ ಈಗ ಸುಂಕದ ಕಾರಣದಿಂದ ಅಮೆರಿಕದಲ್ಲೇ ಉತ್ಪಾದನೆಯನ್ನು ಪ್ರಾರಂಭಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. 

ಇದೇ ವಿಷಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮೀಮ್‌ಗಳು ಹರಿದಾಡುತ್ತಿವೆ. 1950ರ ದಶಕದ ಹಳೆಯ ನೆನಪು ಕೆದಕಿ ಸೋಶಿಯಲ್‌ ಮೀಡಿಯಾದಲ್ಲಿ ಜನರು ಅಮೆರಿಕವನ್ನು ತಮಾಷೆ ಮಾಡುತ್ತಿದ್ದಾರೆ, ಅಮೆರಿಕನ್ನರು ಈಗ ಕಾರ್ಖಾನೆಗಳು ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ, ಅವರು ಕೇವಲ ಕಚೇರಿ ಅಥವಾ ಸೇವಾ ವಲಯಕ್ಕೆ ಸೀಮಿತವಾಗಿದ್ದರು. 

ಅನೇಕ ಮೀಮ್‌ಗಳಲ್ಲಿ ಅಮೆರಿಕದ ದಢೂತಿ ಜನಸಂಖ್ಯೆಯ ಬಗ್ಗೆಯೂ ತಮಾಷೆ ಮಾಡಲಾಗುತ್ತಿದೆ. ಒಂದು ಮೀಮ್‌ನಲ್ಲಿ, "ಈಗ ನೀವು ಬರ ಆರ್ಡರ್‌ ಮಾಡೋದಲ್ಲ, ಯಂತ್ರಗಳನ್ನು ಕೂಡ ನೀವೇ ಚಲಾಯಿಸಬೇಕಾಗುತ್ತದೆ'ಎಂದು ತೋರಿಸಲಾಗಿದೆ. ಚೀನಾದ ಜನರು ಈ ಬಗ್ಗೆ ವ್ಯಂಗ್ಯವಾಡುತ್ತಾ, ಇದು 1950ರ ದಶಕದ ಹಳೆಯ ನೆನಪು ಎಂದು ಹೇಳುತ್ತಿದ್ದಾರೆ. 

ಸೋಶಿಯಲ್‌ ಮೀಡಿಯಾದಲ್ಲಿ ಚೀನಾ, ಅಮೆರಿಕವನ್ನು ಭಾರೀ ಟ್ರೋಲ್ ಮಾಡಿದೆ. ಚೀನಾದ ಯೂಸರ್‌ಗಳು ತಮಾಷೆ ಮಾಡುತ್ತಾ, ಅಮೆರಿಕ ಈಗ ಕಾರ್ಖಾನೆಗಳು ಮತ್ತು ಪ್ರೊಡಕ್ಷನ್‌, ಅದರ ಆರ್ಥಿಕತೆಯ ಬೆನ್ನೆಲುಬಾಗಿದ್ದ ಸಮಯಕ್ಕೆ ಮರಳುತ್ತಿದೆ ಎಂದು ಹೇಳುತ್ತಿದ್ದಾರೆ.

ಮತ್ತೊಮ್ಮೆ ಚೀನಾ ಪ್ರತೀಕಾರ: ಅಮೆರಿಕದ ಸರಕುಗಳ ಮೇಲೆ ಶೇ.84ಕ್ಕೆ ಸುಂಕ ಏರಿಕೆ!

ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಮೀಮ್‌ಗಳು ವೈರಲ್ ಆಗುತ್ತಿವೆ, ಇದರಲ್ಲಿ ಅಮೆರಿಕದ ಹೊಸ ನೀತಿಗಳನ್ನು ಹಳೆಯ ಕಾಲದ ನೆನಪುಗಳಂತೆ ತೋರಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೊಗೆ ಜನರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಯೂಸರ್‌ ವೀಡಿಯೊದ ಕಾಮೆಂಟ್‌ನಲ್ಲಿ, "ವಾಹ್! ಅಮೆರಿಕ ಮತ್ತೆ ಕಾರ್ಖಾನೆಗಳನ್ನು ಕಂಡುಹಿಡಿದಿದೆ, ಮುಂದಿನ ಹೆಜ್ಜೆ ಏನು? ಎಂದು ಬರೆದಿದ್ದಾರೆ.

ವಲ್‌ರಸ್‌ಗೆ ಬಿಗ್‌ ಬರ್ತ್‌ಡೇ ಬ್ಯಾಶ್‌: ಚೀನಾದ ಝೂ ವೀಡಿಯೋ ಸಖತ್ ವೈರಲ್‌

Scroll to load tweet…