ಚೆನ್ನೈ(ಡಿ.15): ಭಾರತದಲ್ಲೂ ಕೊರೋನಾ ಲಸಿಕೆ ಲಭ್ಯತೆ ಸನ್ನಿಹಿತವಾಗುತ್ತಿದ್ದಂತೆಯೇ ರಾಜ್ಯವಾರು ಲಸಿಕೆ ವಿತರಣೆಯ ಲೆಕ್ಕಾಚಾರ ಶುರುವಾಗಿದೆ. ಮೂಲಗಳ ಪ್ರಕಾರ ಒಟ್ಟಾರೆ ಜನಸಂಖ್ಯೆ ಆಧಾರದ ಬದಲಾಗಿ, 50 ವರ್ಷ ಮೀರಿದ ಹಾಗೂ ಪೂರ್ವ ರೋಗಗಳಿಂದ ಬಳಲುತ್ತಿರುವ ಜನರು ಹೆಚ್ಚಿರುವ ರಾಜ್ಯಗಳು ಲಸಿಕೆಯಲ್ಲಿ ಸಿಂಹಪಾಲು ಪಡೆಯುವ ನಿರೀಕ್ಷೆ ಇದೆ.

ಕೊರೋನಾ ಲಸಿಕೆ ಖರೀದಿಯಲ್ಲಿ ದಿಢೀರ್ 10 ಕೋಟಿ ಇಳಿಕೆ!

ಉದಾಹರಣೆಗೆ 12.3 ಕೋಟಿ ಜನರಿರುವ ಬಿಹಾರಕ್ಕಿಂತ 7.6 ಕೋಟಿ ಜನಸಂಖ್ಯೆ ಹೊಂದಿರುವ ತಮಿಳುನಾಡಿಗೆ ಹೆಚ್ಚಿನ ಲಸಿಕೆ ಲಭ್ಯವಾಗಲಿದೆ. ಕಾರಣ ಬಿಹಾರದಲ್ಲಿ 50 ವರ್ಷ ಮೇಲ್ಪಟ್ಟವರ ಪ್ರಮಾಣ 1.8 ಕೋಟಿ ಇದ್ದರೆ, ತಮಿಳುನಾಡಿನಲ್ಲಿ  ಆ ಪ್ರಮಾಣ 2 ಕೋಟಿ ಇದೆ. ಹೀಗಾಗಿ ತಮಿಳುನಾಡಿಗೆ ಹೆಚ್ಚು ಲಸಿಕೆಗಳು ಲಭಿಸಲಿವೆ. 

ಜನವರಿಯಿಂದ ಲಸಿಕೆ ವಿತರಣೆ, ಅಕ್ಟೋಬರ್‌ಗೆ ದೇಶ ಸಹಜತೆಗೆ: ಪೂನಾವಾಲಾ ಭವಿಷ್ಯ

ಮಧ್ಯಪ್ರದೇಶ ಹಾಗೂ ರಾಜಸ್ಥಾನದ್ದೂ ಇದೇ ಕಥೆ. ಇವುಗಳ ಜನಸಂಖ್ಯೆ ಕೂಡಾ ತಮಿಳುನಾಡಿಗಿಂತ ಹೆಚ್ಚಿದ್ದರೂ ಐವತ್ತು ವರ್ಷ ಮೇಲ್ಪಟ್ಟವರು ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವವರ ಪ್ರಮಾಣ ಈ ಎರಡೂ ಕಡಿಮೆ ಇದೆ.