ನವದೆಹಲಿ(ಡಿ.15): ಭಾರತದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ ಒಂದು ಕೋಟಿ ತಲುಪಲು ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ದೇಶವು ಲಸಿಕೆ ಖರೀದಿಸಲಿರುವ ಪ್ರಮಾಣ ಸುಮಾರು ಹತ್ತು ಕೋಟಿಯಷ್ಟು ದಿಢೀರ್ ಇಳಿಕೆಯಾಗಿದೆ. ರಷ್ಯಾದ ಗಮಾಲೆಯಾ ಇನ್ಸ್ಟಿಟ್ಯೂಟ್ ಭಾರತ ಸ್ಪುಟ್ನಿಕ್ 5 ಲಸಿಕೆಯನ್ನು ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಿದೆ.

ಜನವರಿಯಿಂದ ಲಸಿಕೆ ವಿತರಣೆ, ಅಕ್ಟೋಬರ್‌ಗೆ ದೇಶ ಸಹಜತೆಗೆ: ಪೂನಾವಾಲಾ ಭವಿಷ್ಯ

ಹೀಗಾಗಿ ಭಾರತ ಈವರೆಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಕೊರೋನಾ ಲಸಿಕೆಯ ಡೋಸ್‌ಗಳು 160 ಕೋಟಿಯಿಂದ 150 ಕೋಟಿಗಗೆ ಇಳಿಕೆಯಾಗಿದೆ. ರಷ್ಯಾ ಲಸಿಕೆ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಿರುವುದರ ಹಿಂದಿನ ಕಾರಣ ತಿಳಿದು ಬಂದಿಲ್ಲ.

ಜತ್ತಿನಾದ್ಯಂತ ಎರಡು ಕೋಟಿ ಇಳಿಕೆ: ಜಗತ್ತಿನಾದ್ಯಂತ ನವೆಂಬರ್ 30ರವರೆಗೆ ಬೇರೆ ಬೇರೆ ದೇಶಗಳು ಒಟ್ಟು 712 ಕೋಟಿ ಡೋಸ್ ಕೊರೋನಾ ಲಸಿಕೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಡಿ. 11ರ ವೇಳೆಗೆ ಅದು ಕೂಡಾ 701 ಕೋಟಿಗೆ ಇಳಿಕೆಯಾಗಿದೆ ಎಂದು ಜಗತ್ತಿನ ಲಸಿಕೆ ಖರೀದಿ ವ್ಯವಹಾರಗಳ ಅಂಕಿ ಅಂಶವನ್ನು ದಾಖಲಿಸುವ ಡ್ಯೂಕ್ ಯುನಿವರ್ಸಿಟೀಸ್ ಲಾಂಚ್ ಸ್ಕೇಲ್ ಸ್ಟಿಡೋಮೀಟರ್ ವರದಿ ಹೇಳಿದೆ.

ಬಿಹಾರಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೂ ತಮಿಳುನಾಡಿಗೆ ಹೆಚ್ಚು ಕೋವಿಡ್ ಲಸಿಕೆ!

ಈಗಲೂ 160 ಕೋಟಿ ಲಸಿಕೆ ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಭಾರತವೇ ಜಗತ್ತಿನಲ್ಲಿ ಅತಿಹೆಚ್ಚು ಕೊರೋನಾ ಲೊಸಿಕೆ ಖರೀದಿಸಲಿರುವ ದೇಶಗಳಲ್ಲಿ ನಂಬರ್ ವನ್ ಸ್ಥಾನದಲ್ಲಿವೆ. ಆಕ್ಸ್‌ಫರ್ಡ್‌ ಸಂಸ್ಥೆಯ ಅತಿಹೆಚ್ಚು ಕೊರೋನಾ ಲಸಿಕೆಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಸಾಲಿನಲ್ಲಿ ನಂ. 1 ಸ್ಥಾನದಲ್ಲಿದೆ.