ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಜ.22ರ ದಿನಾಂಕ ಆಯ್ಕೆ ಮಾಡಿಕೊಂಡಿದ್ದೇಕೆ? ಇದರ ಮಹತ್ವವೇನು?

ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22ರಂದು ಪ್ರಾಣಪ್ರತಿಷ್ಠೆಯೊಂದಿಗೆ ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಪ್ರಾಣಪ್ರತಿಷ್ಠೆಗೆ ಜನವರಿ 22ರ ದಿನಾಂಕ ಆಯ್ಕೆ ಮಾಡಿಕೊಂಡಿದ್ದೇಕೆ? ಇದರ ಹಿಂದಿನ ಮಹತ್ವವೇನು? 

Why January 22nd chosen for Ayodhya Ram Mandir Pran Pratishta and inauguration ckm

ಆಯೋಧ್ಯೆ(ಜ.03) ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಇದೀಗ ಹಬ್ಬದ ಸಡಗರ. ಕಾರಣ ರಾಮ ಮಂದಿರ ಉದ್ಘಾಟನೆ. ಬರೋಬ್ಬರಿ 500ಕ್ಕೂ ಹೆಚ್ಚು ವರ್ಷಗಳ ಸಂಘರ್ಷ ಅಂತ್ಯಗೊಂಡು ಇದೀಗ ಆಯೋಧ್ಯೆಯಲ್ಲಿ ಮತ್ತೆ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ. ದೇಶದ ಅಸ್ಮಿತೆ, ನಾಗರೀಕತೆ, ಸಂಸ್ಕೃತಿಯ ಮೂಲವಾಗಿರುವ ರಾಮ ಮಂದಿರ ಉದ್ಘಾಟನೆಗೆ ಕೌಂಟ್‌ಡೌನ್ ಶುರುವಾಗಿದೆ. ಜನವರಿ 22ರ ಮಧ್ಯಾಹ್ನ 12.30ರ ವೇಳೆಗೆ ಪ್ರಾಣಪ್ರತಿಷ್ಠೆ ಮೂಲಕ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ರಾಮ ಮಂದಿರದ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆಯನ್ನು ಜನವರಿ 22ರಂದೇ ನಿಗದಿಪಡಿಸಲು ಬಲವಾದ ಕಾರಣವಿದೆ. ಜನವರಿ 22ರ 12.30ರ ಸಮಯ ಹಿಂದೂ ಪಂಚಾಗದ ಪ್ರಕಾರ ಅಭಿಜಿತ್ ಮುಹೂರ್ತವಾಗಿದೆ. ಭಗವಾನ್ ರಾಮ ಹುಟ್ಟಿದ್ದು ಇದೇ ಅಭಿಜಿತ್ ಮುಹೂರ್ತದಲ್ಲಿ ಅನ್ನೋದೇ ವಿಶೇಷ.

ಅಭಿಜಿತ್ ಮುಹೂರ್ತವು ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:33 ರವರೆಗೆ ಇರಲಿದೆ. ಅಭಿಜಿತ್ ಮುಹೂರ್ತ ಮಾತ್ರವಲ್ಲ, ಜನವರಿ 22ರ ಸೋಮವಾರ ಮಂಗಳಕರವಾದ ಮೃಗಶಿರಾ ನಕ್ಷತ್ರ ಬೆಳಗ್ಗೆ 3.52ಕ್ಕೆ ಆರಂಭಗೊಳ್ಳುತ್ತಿದೆ. ಮೃಗಶಿರಾ ನಕ್ಷತ್ರ ಸಮಯ ಜನವರಿ 23ರ ಮಂಗಳವಾರ ಬೆಳಗ್ಗೆ 4:58ರ ವರೆಗೆ ಇರಲಿದೆ. 

ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಬಾಬರ್ ಹುಟ್ಟೂರು ಸೇರಿ 153 ದೇಶದ ಪವಿತ್ರ ನೀರು ಬಳಕೆ!

ಹಿಂದೂ ಪಂಚಾಗದ ಪ್ರಕಾರ ಮೃಗಶಿರಾ ನಕ್ಷತ್ರ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರ ಸೋಮ ದೇವತೆಗೆ ಸಂಬಂಧಿಸಿದೆ. ಸೋಮದೇವತೆಯನ್ನು ಅಮರತ್ವ ದೇವರು ಎಂದು ಕರೆಯಲಾಗುತ್ತದೆ.  ಈ ನಕ್ಷತ್ರ ಜ್ಞಾನ ಹಾಗೂ ಅನುಭದ ಅನ್ವೇಷಣೆ ಸೂಚಿಸುತ್ತದೆ. ಮಗಶಿರ ನಕ್ಷತ್ರ ಚಲನೆಯಿಂದ ನಿರೂಪಿಸಲ್ಪಟ್ಟಿದೆ. ಹೀಗಾಗಿ ಹಿಂದೂ ಸಂಪ್ರದಾಯದಲ್ಲಿ ಮಗಶಿರಾ ಅತ್ಯಂತ ಮಂಗಳಕರ ಘಳಿಗೆ ಎಂದೇ ಪರಿಗಣಿಸಲಾಗಿದೆ. ಈ ಶುಭಮೂಹಾರ್ತದಲ್ಲಿ ಆರಂಭಿಸಿದ ಎಲ್ಲಾ ಕಾರ್ಯಗಳು ಯಶಸ್ವಿಯಾಗುವುದು ಮಾತ್ರವಲ್ಲ ಸಮಾಜದಲ್ಲಿ ಸಕರಾತ್ಮಕ ಪ್ರಭಾವ ಬೀರಲಿದೆ.  

ಶ್ರೀರಾಮ ಹುಟ್ಟಿರುವುದು ಅಭಿಜಿತ್ ಮುಹೂರ್ತ. ಇದೇ ಅಭಿಜಿತ್ ಮುಹೂರ್ತದಲ್ಲಿ ಶಿವನು ರಾಕ್ಷಸನಾದ ತ್ರಿಪುರಾಸುರನನ್ನು ಕೊಂದ ದಿನವಾಗಿದೆ. ಹೀಗಾಗಿ ದೋಷಗಳ ಪರಿಹಾರಕ್ಕೆ ಇದೇ ಮಹೂರ್ತ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ದೋಷಗಳನ್ನು ತೆಗೆದು ಹಾಕಲು ಇದೇ ಅಭಿಜಿತ್ ಮುಹೂರ್ತ ಉತ್ತಮ.  ಜೀವನದಲ್ಲಿ ಎದುರಾಗಿರುವ ದುರುದ್ದೇಶಪೂರಿತ ಪ್ರಭಾವವನ್ನು ತೊಡೆದು ಹಾಕಲು ಇದೇ ಮುಹೂರ್ತ ಉತ್ತಮವಾಗಿದೆ. ಜೊತೆ, ಹೊಸತನ ಅಂದರೆ ಹೊಸ ಪ್ರಯತ್ನ , ಹೊಸ ಉದ್ಯಮ, ವ್ಯವಹಾರ, ಕೆಲಸ, ಹಣಕಾಸು ಹೂಡಿಕೆ, ಗೃಹಪ್ರವೇಶ, ಸಮಾರಂಭ ಸೇರಿದಂತೆ ಇತರ ಶುಭ ಕಾರ್ಯಗಳಿಗೆ ಈ ಮುಹೂರ್ತ ಉತ್ತಮವಾಗಿದೆ. 

ಜನಸಾಮಾನ್ಯರಿಗೆ ಕೇಂದ್ರದ ಬಂಪರ್, ಶ್ರೀರಾಮ ಮಂದಿರ ದರ್ಶನಕ್ಕೆ ಪ್ರತಿ ದಿನ ಆಯೋಧ್ಯೆಗೆ 35 ರೈಲು!

ಈ ಎಲ್ಲಾ ಶುಭಘಳಿಗೆ ಜೊತೆಗೆ ಅಮೃತ ಸಿದ್ದಿ ಯೋಗ, ಸವಾರ್ಥ ಸಿದ್ದಿ ಯೋಗವೂ ಇದೇ ಮೃಗಶಿರಾ ನಕ್ಷತ್ರದ ಸಮಯದೊಂದಿಗೆ ಹೊಂದಿಕೆಯಾಗುತ್ತಿದೆ. ಹೀಗಾಗಿ ಈ ದಿನ ಪವಿತ್ರ ಆಚರಣೆಗೆ, ಶುಭಕಾರ್ಯಕ್ಕೆ ಅತ್ಯುತ್ತಮವಾಗಿದೆ.   

Latest Videos
Follow Us:
Download App:
  • android
  • ios