ಜನಸಾಮಾನ್ಯರಿಗೆ ಕೇಂದ್ರದ ಬಂಪರ್, ಶ್ರೀರಾಮ ಮಂದಿರ ದರ್ಶನಕ್ಕೆ ಪ್ರತಿ ದಿನ ಆಯೋಧ್ಯೆಗೆ 35 ರೈಲು!

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬಂಪರ್ ಕೊಡುಗೆ ನೀಡುತ್ತಿದೆ. ಶ್ರೀರಾಮ ಮಂದಿರದ ದರ್ಶನಕ್ಕಾಗಿ ಪ್ರತಿ ದಿನ 35 ರೈಲುಗಳು ಆಯೋಧ್ಯೆಗೆ ಸಂಚರಿಸಲಿದೆ. ದೇಶದ 430 ಕಡೆಗಳಿಂದ ಆಯೋಧ್ಯೆಗೆ ರೈಲು ಸೇವೆ ನೀಡಲಾಗುತ್ತದೆ. ವಿಶೇಷ ಅಂದರೆ 60 ದಿನಗಳ ಕಾಲ ಪ್ರತಿ ದಿನ ಹೆಚ್ಚುವರಿ 35 ರೈಲುಗಳು ಆಯೋಧ್ಯೆಗೆ ಸೇವೆ ನೀಡಲಿದೆ.
 

PM Modi Govt plan to introduce daily 35 trains to Ayodya for Ram Mandir Darshan ckm

ನವದೆಹಲಿ(ಜ.02) ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ದೇಶದಲ್ಲಿ ದೀಪಾವಳಿ ಹಬ್ಬದಂತ ಸಡಗರ ಎಲ್ಲೆಡೆ ಕಾಣುತ್ತಿದೆ. ರಾಮ ಮಮಮಂದಿರ ಪ್ರಾಣಪ್ರತಿಷ್ಠೆಗೆ ಪ್ರಧಾನಿ ಮೋದಿ ಸೇರಿದಂತೆ ದೇಶ ವಿದೇಶದ ಗಣ್ಯರು ಆಗಮಿಸುತ್ತಿದ್ದಾರೆ. ಸಾಧು ಸಂತರು, ಸ್ವಾಮೀಜಿಗಳು ಪ್ರಮುಖ ಕೇಂದ್ರಬಿಂದುಗಳಾಗಿದ್ದಾರೆ. ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಭಕ್ತರು ಜನವರಿ 22ರ ಬದಲು ರಾಮ ಮಂದಿರ ದರ್ಶನಕ್ಕೆ ತೆರಳುವಂತೆ ಮನವಿ ಮಾಡಲಾಗಿದೆ. ಇದೀಗ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶ್ರೀರಾಮ ಮಂದಿರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಜನಸಾಮಾನ್ಯರಿಗಾಗಿ ಪ್ರತಿ ದಿನ 35 ವಿಶೇಷ ಹಾಗೂ ಹೆಚ್ಚುವರಿ ರೈಲುಗಳು ಆಯೋಧ್ಯೆಗೆ ಸೇವೆ ನೀಡಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಇಂದು ಮಹತ್ವದ ಸಭೆ ನಡೆಸಿತ್ತು. ಈ ವೇಳೆ ಬಿಜೆಪಿಯ ಬಹುತೇಕ ನಾಯಕರು ಜನಸಾಮಾನ್ಯರಿಗೆ ಶ್ರೀರಾಮನ ದರ್ಶನಕ್ಕೆ ವ್ಯವಸ್ಥೆ ಮಾಡಲು ಪ್ರಸ್ತಾವನೆಗಳು ಬಂದಿತ್ತು. ಈ ಸಭೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಕೂಡ ಹಾಜರಾಗಿದ್ದರು. ಜನಸಾಮಾನ್ಯರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲು ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಅಶ್ವಿನಿ ವೈಷ್ಣವ್ ಜನಸಾಮಾನ್ಯರಿಗೆ ಬಂಪರ್ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.

ರಾಮ ಮಂದಿರ ಪ್ರಾಣಪತಿಷ್ಠೆಗೆ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಹ್ವಾನ!

ದೇಶದ 430 ಕಡೆಯಿಂದ ಆಯೋಧ್ಯೆಗೆ ರೈಲು ಸೇವೆ ನೀಡಲಿದೆ. ಜನವರಿ 25 ರಿಂದ 60 ದಿನಗಳ ಕಾಲ ವಿಶೇಷ ಹಾಗೂ ಹೆಚ್ಚುವರಿ ರೈಲುಗಳು ಆಯೋಧ್ಯೆಯತ್ತ ಸಂಚರಿಸಲಿದೆ. ಪ್ರತಿ ದಿನ 35 ರೈಲುಗಳು ಆಯೋಧ್ಯೆ ತೆರಳುವ ಭಕ್ತರಿಗೆ ಸೇವೆ ನೀಡಲಿದೆ. ದೇಶಾದ್ಯಂತ ದೀಪಾವಳಿ ಸಡಗರ ಮನೆ ಮಾಡಬೇಕು. ಆಯೋಧ್ಯೆಯ ಐತಿಹಾಸಿಕ ರಾಮ ಮಂದಿರ ಉದ್ಘಾಟನೆ ದೇಶದ ಹೊಸ ಬೆಳಕಿಗೆ ನಾಂದಿ ಹಾಡಬೇಕು ಎಂದು ಜೆಪಿ ನಡ್ಡಾ ಹೇಳಿದ್ದಾರೆ. ಇಷ್ಟೇ ಅಲ್ಲ ಯಾವುದೇ ರೀತಿಯ ಅಜಾಗರೂಕತೆ, ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದ್ದಾರೆ.

ಆಯೋಧ್ಯೆಯಲ್ಲಿ ನವೀಕರಣಗೊಳಿಸಿದ ಆಯೋಧ್ಯೆ ಧಾಮ ಜಂಕ್ಷನ್ ರೈಲು ನಿಲ್ದಾಣವನ್ನು ಡಿಸೆಂಬರ್ 29 ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೂ ಮುನ್ನ ಇಲ್ಲಿನ ನವೀಕೃತ ರೈಲು ನಿಲ್ದಾಣದ ಹೆಸರನ್ನು ಅಯೋಧ್ಯಾ ಧಾಮ ಜಂಕ್ಷನ್‌ ಎಂದು ನಾಮಕರಣ ಮಾಡಲಾಗಿದೆ.  430 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರೈಲು ನಿಲ್ದಾಣವನ್ನು ಪುನರ್ ನವೀಕರಣ ಮಾಡಲಾಗಿದೆ.

ಶ್ರೀರಾಮ ಮಂದಿರ ಉದ್ಘಾಟನೆಗೆ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಆಹ್ವಾನ!
 

Latest Videos
Follow Us:
Download App:
  • android
  • ios