ಆಪರೇಷನ್‌ ಸಿಂದೂರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೈಪುರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಭಾರತೀಯ ಸೇನಾಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾತನಾಡಿದ್ದಕ್ಕೆ ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್‌ ಷರೀಫ್‌ ಚೌಧರಿ ಪ್ರಶ್ನಿಸಿದ್ದಾರೆ. 

ಇಸ್ಲಾಮಾಬಾದ್‌ (ಮೇ.9): ಆಪರೇಷನ್‌ ಸಿಂದೂರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ಸೇನಾಧಿಕಾರಿಗಳು ಗುರುವಾರ ಜೈಪುರದಲ್ಲಿ ನಡೆಸಿದ ಮಾಧ್ಯಮ ಸಂವಾದದ ಬಗ್ಗೆ ಪಾಕಿಸ್ತಾನದ ಸೇನಾ ವಕ್ತಾರ ಲೆ.ಜ. ಅಹ್ಮದ್‌ ಷರೀಫ್‌ ಚೌಧರಿ ಕೇಳಿರುವ ಪ್ರಶ್ನೆಯೊಂದು ಭಾರೀ ವೈರಲ್‌ ಆಗುತ್ತಿದೆ. ‘ಅವರು ಇಂಗ್ಲಿಷ್‌ನಲ್ಲಿ ಯಾಕೆ ಮಾತಾಡಿದರು?’ ಎಂದು ಜ। ಷರೀಫ್‌ ಕೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ನಿಮಗೆ ಇಂಗ್ಲಿಷ್‌ನಲ್ಲಿ ಮಾತಾಡುವಂತೆ ಯಾರು ಹೇಳಿದರು? ನೀವು ಹೇಳಬೇಕಿರುವುದನ್ನು ಇಡೀ ವಿಶ್ವಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇ?’ ಎಂದು ಷರೀಫ್‌ ಪ್ರಶ್ನಿಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ ಆಗುತ್ತಿದೆ.

ಪಹಲ್ಗಾಂ ದಾಳಿಯ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಂಗ್ಲ ಭಾಷೆಯಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಈ ಮೂಲಕ, ಭಾರತವು ತನ್ನ ಮೇಲಿನ ದಾಳಿಗೆ ಪಾಕ್‌ ಬೆಲೆ ತೆರಬೇಕಾಗುವುದು ಎಂದು ಇಡೀ ವಿಶ್ವಕ್ಕೆ ಹೇಳಿದ್ದರು.