ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತ, ತನ್ನ 93ನೇ ವಾಯುಪಡೆ ದಿನಾಚರಣೆಯಂದು ವಿಶಿಷ್ಟ ಉತ್ತರ ನೀಡಿದೆ. ದಾಳಿಗೊಳಗಾದ ಪಾಕಿಸ್ತಾನಿ ಸ್ಥಳಗಳ ಹೆಸರನ್ನು ತನ್ನ ಭೋಜನದ ಮೆನುವಿನಲ್ಲಿ ಸೇರಿಸಿ, ಪಾಕಿಗಳಿಗೆ ಮರ್ಮಾಘಾತ ನೀಡಿದೆ.
ಉಗ್ರರನ್ನು ಪೋಷಿಸುತ್ತಾ, ರಕ್ಷಿಸುತ್ತಿರುವ ಪಾಕಿಸ್ತಾನದ ಇಂದಿನ ಸ್ಥಿತಿ ಯಾರಿಗೂ ಬೇಡವಾಗಿದೆ. 70 ದಶಕಗಳವರೆಗೆ ಭಾರತದ ತಂಟೆಗೆ ಬಂದು ಇಲ್ಲಿಯ ಕೆಲವರ ಕೈವಾಡದಿಂದ ಸುಖವನ್ನು ಅನುಭವಿಸುತ್ತಿದ್ದ ಪಾಕಿಗಳಿಗೆ ಕಳೆದ ಹತ್ತು ವರ್ಷಗಳಲ್ಲಿ ಮರ್ಮಾಘಾತವಾಗಿರುವ ಏಟನ್ನು ಭಾರತ ನೀಡುತ್ತಲೇ ಬಂದಿದೆ. ಅದರಲ್ಲಿಯೂ ಪೆಹಲ್ಗಾಮ್ ದಾಳಿಯ ಬಳಿಕ ಕೇಕೇ ಹಾಕಿ ಮೆರೆಯುತ್ತಿದ್ದ ಪಾಕಿಗಳಿಗೆ 'Operation Sindoor' ಮುಟ್ಟಿಕೊಳ್ಳುವ ಏಟು ನೀಡಿದೆ. ಒಂದೆಡೆ ಈ ಕಾರ್ಯಾಚರಣೆಯಲ್ಲಿ ಸೇನೆ, ಭಾರತದಲ್ಲಿಯೇ ತಯಾರಾಗಿರುವ ಶಸ್ತ್ರಾಸ್ತ್ರಗಳ ಮೂಲಕ ದಿಟ್ಟ ಉತ್ತರ ನೀಡಿ, ಇಡೀ ವಿಶ್ವ ಆತ್ಮನಿರ್ಭರ ಭಾರತದತ್ತ ಬೆರಗುಗಣ್ಣುಗಳಿಂದ ನೋಡುತ್ತಿದ್ದರೆ, ಅತ್ತ ಪಾಕಿಸ್ತಾನದ ಉಗ್ರರಿಗೆ ಬೆವರು ಇಳಿಯುತ್ತಿದೆ.
ಪಾಕಿಗಳ ಹೊಟ್ಟೆಗೆ ಬಿತ್ತು ಬೆಂಕಿ!
ಇದರ ನಡುವೆಯೇ, ಪಾಕಿಗಳ ಹೊಟ್ಟೆಗೆ ಮತ್ತಷ್ಟು ಉರಿ ಬಿದದ್ದು ಮೊನ್ನೆ ನಡೆದ ಭಾರತೀಯ ವಾಯುಪಡೆಯ 93 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ! ಅಷ್ಟಕ್ಕೂ ಭಾರತವೇನೂ ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳ ರುಚಿ ತೋರಿಸಿಲ್ಲ. ಬದಲಿಗೆ ಆಪರೇಷನ್ ಸಿಂದೂರ್ದ ಸಮಯಲ್ಲಿ ಭಾರತ ಉಡೀಸ್ ಮಾಡಿರುವ ಉಗ್ರರ ನೆಲೆಗಳನ್ನು ಮೆನುವಿನಲ್ಲಿ ಸೇರಿಸುವ ಮೂಲಕ ಪಾಕಿಗಳಿಗೆ ಮತ್ತಷ್ಟು ಏಟು ನೀಡಿದೆ. ಬೆಂಕಿಯಲ್ಲಿಯೇ ಬೇಯಿಸುವ ಆಹಾರಗಳಿಗೆ Operation Sindoor ಹೆಸರನ್ನು ಇಡಲಾಗಿದೆ. ಅದು ಹೀಗಿದೆ ನೋಡಿ...
* ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ
* ರಫೀಕಿ ರಾರಾ ಮಟನ್
* ಭೋಲಾರಿ ಪನೀರ್ ಮೇಥಿ ಮಲೈ
* ಸುಕ್ಕೂರ ಶಾಮ ಸವೇರ ಕೋಫ್ತಾ
* ಸರ್ಗೋಧ ದಾಲ್ ಮಖಾನಿ
* ಜಾಕೋಬಾಬಾದ್ ಮೇವಾ ಪುಲಾವ್
* ಬಹವಲ್ಪುರ್ ನಾನ್
ಸಿಹಿತಿನಿಸುಗಳಿಗೆ *ಬಾಲಕೋಟ್ ತಿರಮಿಸು, *ಮುಜಫರಾಬಾದ್ ಕುಲ್ಫಿ ಫಲೂದಾ, ಮುರಿದ್ಕೆ ಮೀಟಾಪನ್ ಎಂದು ಹೆಸರು ಇರಿಸಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಹೆಸರುಗಳು
ಮರ್ಕಜ್ ಸುಭಾನ್ ಅಲ್ಲಾ, ಬಹವಾಲ್ಪುರ್ - ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿನ ಸೈದ್ಧಾಂತಿಕ ಮತ್ತು ಕಾರ್ಯಾಚರಣೆಯ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಲಾಗಿತ್ತು. ಇವುಗಳಲ್ಲಿ ರಾವಲ್ಪಿಂಡಿ, ಬಾಲಾಕೋಟ್, ಬಹವಲ್ಪುರ್, ಮುಜಫರಾಬಾದ್, ಮುರಿಡ್ಕೆ -- ಆಪರೇಷನ್ ಸಿಂಧೂರ್ ಸಮಯದಲ್ಲಿ ಗುರಿಯಾದ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಗರಗಳಲ್ಲಿ ಸೇರಿವೆ. ಮರ್ಕಜ್ ತೈಬಾ, ಮುರಿಡ್ಕೆ - 200 ಎಕರೆ ವಿಸ್ತೀರ್ಣದ ವಿಶಾಲವಾದ ಲಷ್ಕರ್-ಎ-ತೈಬಾ ಸಂಯುಕ್ತ, ಕಾರ್ಯಾಚರಣೆಯಲ್ಲಿ ಅತ್ಯಂತ ಭದ್ರವಾದ ಸ್ಥಳಗಳಲ್ಲಿ ಒಂದಾಗಿದೆ. ಮರ್ಕಜ್ ಅಬ್ಬಾಸ್, ಕೋಟ್ಲಿ - ಪ್ರಮುಖ ಜೆಇಎಂ ತರಬೇತಿ ಮತ್ತು ಶಸ್ತ್ರಾಸ್ತ್ರ ವಿತರಣಾ ಶಿಬಿರವಾಗಿದ್ದರೆ, ಸೈಯದ್ನಾ ಬಿಲಾಲ್ ಮತ್ತು ಶವಾಯಿ ನಲ್ಲ ಶಿಬಿರಗಳು, ಮುಜಫರಾಬಾದ್ - ಸ್ಲೀಪರ್ ಸೆಲ್‌ಗಳು ಬಳಸುವ ಒಳನುಸುಳುವಿಕೆ ಕೇಂದ್ರಗಳಾಗಿವೆ.
ಪಾಕ್ನ ಇತರ ಉಗ್ರರ ಕೇಂದ್ರಗಳು ಇಂತಿವೆ...
ಇದರ ಜೊತೆಗೆ, ಮರ್ಕಜ್ ಅಹ್ಲೆ ಹದೀಸ್, ಬರ್ನಾಲಾ - ಎಲ್‌ಇಟಿ ಕಾರ್ಯಕರ್ತರಿಗೆ ಪ್ರಾದೇಶಿಕ ಲಾಜಿಸ್ಟಿಕ್ಸ್ ಕೇಂದ್ರಗಲಾಗಿವೆ. ಸರ್ಜಲ್ ಮತ್ತು ತೆಹ್ರಾ ಕಲಾನ್, ಪಿಒಕೆ - ಹೊಸದಾಗಿ ನೇಮಕಗೊಂಡ ಭಯೋತ್ಪಾದಕರಿಗೆ ಪೂರ್ವ-ಒಳನುಸುಳುವಿಕೆ ಶಿಬಿರಗಳಾಗಿವೆ. ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ (IACCS) ಮೂಲಕ ಭಾರತ ಇವುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಒಬ್ಬರೇ ಒಬ್ಬ ನಾಗರಿಕರಿಗೆ ತೊಂದರೆಯಾಗದಂತೆ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಭಾರತದ ಯೋಧರು ಯಶಸ್ವಿಯಾಗಿದ್ದಾರೆ.
ವಾಯುಪಡೆ ದಿನ
93 ನೇ ವಾಯುಪಡೆ ದಿನಾಚರಣೆಯಲ್ಲಿ, ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಆಪರೇಷನ್ ಸಿಂದೂರ್ ಅನ್ನು ರಾಷ್ಟ್ರಕ್ಕೆ "ಅಗಾಧ ಹೆಮ್ಮೆಯ ಕ್ಷಣ" ಎಂದು ಬಣ್ಣಿಸಿದರು. "1947 ರಲ್ಲಿ, ನಾವು ಕಾಶ್ಮೀರವನ್ನು ರಕ್ಷಿಸಿದ್ದೇವೆ. 1965 ರಲ್ಲಿ, ನಾವು ಆಕಾಶದಿಂದ ದಾಳಿ ಮಾಡಿದ್ದೇವೆ. 1971 ರಲ್ಲಿ, ನಾವು ಹೊಸ ದೇಶದ ಸೃಷ್ಟಿಗೆ ಕೊಡುಗೆ ನೀಡಿದ್ದೇವೆ. 1999 ರಲ್ಲಿ, ನಾವು ಕಾರ್ಗಿಲ್‌ನಲ್ಲಿ ಧೈರ್ಯವನ್ನು ಪ್ರದರ್ಶಿಸಿದ್ದೇವೆ. 2019 ರಲ್ಲಿ, ನಾವು ಬಾಲಕೋಟ್‌ನಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇವೆ. ಮತ್ತು ಈ ವರ್ಷ, ನಾವು ಆಪರೇಷನ್ ಸಿಂದೂರ್ನಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಶತ್ರುಗಳ ಮೇಲೆ ಜಯ ಸಾಧಿಸಿದ್ದೇವೆ. ಭಾರತೀಯ ವಾಯುಪಡೆಯು ಪ್ರತಿ ಯುಗದಲ್ಲೂ ಸಾಮರ್ಥ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದೆ, ರಾಷ್ಟ್ರದ ವೈಭವವನ್ನು ಎತ್ತಿಹಿಡಿದಿದೆ" ಎಂದು ಅವರು ಹೇಳಿದರು.
