ನವದೆಹಲಿ(ಜ.19) ಕಳೆದೊಂದು ವರ್ಷದಿಂದ ವಿಶ್ವಾದ್ಯಂತ ಕೊರೋನಾ ಮಹಾಮಾರಿಯದ್ದೇ ಅಬ್ಬರ, ಭಾರತಕ್ಕೂ ಕಾಲಿಟ್ಟ ಈ ಸೋಂಕು ಹಲವರ ಪ್ರಾಣ ಬಲಿ ಪಡೆದಿದೆ. ಸದ್ಯ ಇದನ್ನು ನಿವಾರಿಸಲು ಎರಡು ಮೇಡ್‌ ಇನ್ ಇಂಡಿಯಾ ಲಸಿಕೆಗಳು ತಯಾರಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಇದನ್ನು ಬಳಸಲು ಅನುಮತಿ ನಿಡಲಾಗಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ. ಇದು ವಿಶ್ವದ ಅತೀ ದೊಡ್ಡ ಕೊರೋನಾ ಲಸಿಕೆ ಅಭಿಯಾನವೂ ಆಗಿದೆ. ಹೀಗಿರುವಾಗ ಈ ಲಸಿಕೆಯನ್ನು ತೆಡಗೆದುಕೊಳ್ಳಬೇಕೋ? ಬೇಡವೋ ಎಂಬ ಗೊಂದಲ ಜನ ಸಾಮಾನ್ಯರನ್ನೂ ಕಾಡುತ್ತದೆ. ಸದ್ಯ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಈ ಲಸಿಕೆಯನ್ನು ಯಾರು ತೆಗೆದುಕೊಳ್ಳಬಹುದು ಹಾಗೂ ಯಾರು ತೆಗೆದುಕೊಳ್ಳಬಾರದೆಂಬ ಫ್ಯಾಕ್ಟ್‌ಶೀಟ್ ಬಿಡುಗಡೆಗೊಳಿಸಿದೆ.  

ವೃದ್ಧರನ್ನು ಬಿಟ್ಟು ಯುವಕರಿಗೆ ಲಸಿಕೆ ಸರಿಯಲ್ಲ: ಡಬ್ಲ್ಯುಎಚ್‌ಒ!

ಭಾರತದಲ್ಲಿ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿ ಮಂಗಳವಾರಕ್ಕೆ ಮೂರು ದಿನವಾಗಿದೆ. ಹೀಗಿರುವಾಗ ಅನೇಕರಿಗೆ ಆರೋಗ್ಯ ಸಮಸ್ಯೆ ಕಾಡಿದೆ. ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರು ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದ್ದು, ವರದಿಯಲ್ಲಿ ಹೃದಯಾಘಾತದಿಂದ ಮೃತಪಟಟ್ಟಿದ್ದಾರೆಂದು ಹೇಳಲಾಗಿದೆ. ಈ ವರದಿಗಳು ಲಸಿಕೆ ಪಡೆಯಲು ಸಜ್ಜಾದವರಲ್ಲಿ ಭೀತಿ ಹುಟ್ಟಿಸಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೀರಂ ಹಾಗೂ ಭಾರತ್ ಬಯೋಟೆಕ್ ಸಂಸ್ಥೆ ಈ ಫ್ಯಾಕ್ಟ್‌ಶೀಟ್‌ ತಯಾರಿಸಿವೆ. ಈ ಮೂಲಕ ಲಸಿಕೆ ಪಡೆಯಲು ಸಜ್ಜಾದವರಿಗೆ ಯಾವೆಲ್ಲಾ ಅಪಾಯ ಹಾಗೂ ಲಾಭಗಳಿವೆ ಎಂದು ತಿಳಿಸಿಕೊಡುವುದಾಗಿದೆ.

ಇನ್ನು ಕೇಂದ್ರ ಆರೋಗ್ಯ ಇಲಾಖೆಯನ್ವಯ ಸೋಮವಾರ ಸಂಜೆ 5 ಗಂಟೆಯವರೆಗೆ ಭಾರತದಲ್ಲಿ ಒಟ್ಟು  3,81,305 ಮಂದಿಗೆ ಕೊರೋನಾ ಲಸಿಕೆ ನಿಡಲಾಗಿದ್ದು, 580 ಮಂದಿಯಲ್ಲಿ ಲಸಿಕೆ ಪಡೆದ ಬಳಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಸೀರಂ ಸಂಸ್ಥೆಯ ಕೋವಿಶೀಲ್ಡ್ ಲಸಿಕೆ ಯಾರು ಪಡೆದುಕೊಳ್ಳಬಾರದು?

* ಕೋವಿಶೀಲ್ಡ್‌ ಲಸಿಕೆಯಲ್ಲಿ ಬಳಸಲಾಗಿರುವ ಯಾವುದೇ ವಸ್ತು, ಸಾಮಾಗ್ರಿಯಿಂದ ತೀವ್ರವಾದ ಅಲರ್ಜಿ ಇದ್ದವರು ದೂರವಿರಿ

* L-Histidine, ಎಲ್-ಹಿಸ್ಟಿಡಿನ್ ಹೈಡ್ರೋಕ್ಲೋರೈಡ್ ಮೊನೊಹೈಡ್ರೇಟ್, ಮೆಗ್ನೀಸಿಯಮ್ ಕ್ಲೋರೈಡ್ ಹೆಕ್ಸಾಹೈಡ್ರೇಟ್, ಪಾಲಿಸೋರ್ಬೇಟ್ 80, ಎಥೆನಾಲ್, ಸುಕ್ರೋಸ್, ಸೋಡಿಯಂ ಕ್ಲೋರೈಡ್, ಡಿಸೋಡಿಯಮ್ ಎಡಿಟೇಟ್ ಡೈಹೈಡ್ರೇಟ್ (ಇಡಿಟಿಎ), ಹಾಗೂ ಲಸಿಕೆಗೆ ಬೇಕಾದ ನೀರು ಇಷ್ಟನ್ನು ಕೋವಿಶೀಲ್ಡ್‌ನಲ್ಲಿ ಬಳಸಲಾಗಿದೆ.

ಕೋವಿಡ್‌ ಲಸಿಕೆ ಪಡೆದಿದ್ದ ಆರೋಗ್ಯ ಇಲಾಖೆ ನೌಕರ ಸಾವು :ಕಾರಣ..?

* ಒಂದು ವೇಳೆ ಕೋವಿಶೀಲ್ಡ್‌ನ ಮೊದಲ ಡೋಸ್‌ನಿಂದ ಅಲರ್ಜಿ ಉಂಟಾದರೆ ಎರಡನೇ ಡೋಸ್‌ ಪಡೆಯಬೇಡಿ.

* ಲಸಿಕೆ ಪಡೆಯುವ ಮುನ್ನ ಲಸಿಕೆ ಹಾಕುವವರಲ್ಲಿ ನಿಮ್ಮ ಆರೋಗ್ಯದ ಕುರಿತಾದ ಸಂಪೂರ್ಣ ಮಾಹಿತಿ ನೀಡಿ.

* ಈ ಹಿಂದೆ ಯಾವತ್ತಾದರೂ ಯಾವುದಾದರೂ ಔಷಧಿ, ಆಹಾರ ಅಥವಾ ಯಾವುಉದಾದರೂ ಲಸಿಕೆ ಅಥವಾ ಕೋವಿಶೀಲ್ಡ್‌ನಲ್ಲಿ ಬಳಸಲಾದ ವಸ್ತುಗಳನ್ನು ಪಡೆದ ಬಳಿಕ ತೀವ್ರವಾದ ಅಲರ್ಜಿಯಾಗಿದ್ದರೆ ಲಸಿಕೆ ನೀಡುವವರಿಗೆ ತಪ್ಪದೇ ತಿಳಿಸಿ.

ಕೋವ್ಯಾಕ್ಸಿನ್‌ ಲಸಿಕೆ ಪಡೆಯಲು ಹಲವು ರಾಜ್ಯಗಳಲ್ಲಿ ಹಿಂದೇಟು!

* ನಿಮಗೆ ಜ್ವರ ಅಥವಾ ರಕ್ತಸ್ರಾವದ ಕಾಯಿಲೆ ಇದ್ದರೆ ಲಸಿಕೆ ನೀಡುವವರ ಬಳಿ ಮೊದಲೇ ತಿಳಿಸಿ.

* ಲಸಿಕೆಯಲ್ಲಿ ಬಳಸಲಾದ ವಸ್ತುವಿನಿಂದ ನಿಮ್ಮ ರೋಗ ನಿರೋಧಕ ಶಕ್ತಿ ಮೇಲೆ ಪ್ರಭಾವ ಬೀಳುತ್ತದೆ ಎಡಂದಾದರೆ ತಿಳಿಸಿ.

* ನೀವು ಗರ್ಭಿಣಿಯಾಗಿದ್ದರೆ, ಮಗುವಿಗೆ ಎದೆ ಹಾಕು ಉಣಿಸುತ್ತೀರಿ ಅಥವಾ ಪ್ರೆಗ್ನೆನ್ಸಿ ಪ್ಲಾನಿಂದ್ ಇದ್ದರೆ ತಿಳಿಸಿ.

* ಕೋವ್ಯಾಕ್ಸಿನ್ ಲಸಿಕೆಯನ್ನು ತೆಗೆದುಕೊಂಡಿದ್ದೀರೆಂದಾದರೆ ತಪ್ಪದೇ ತಿಳಿಸಿ.

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ ಯಾರು ಪಡೆದುಕೊಳ್ಳಬಾರದು?

* ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರು ಅಥವಾ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಔಷಧಿ ಲಸಿಕೆಯಲ್ಲಿದ್ದರೆ ತಿಳಿಸಿ.

* ಕಿಮೋಥೆರಪಿ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು, ಎಚ್‌ಐವಿ ರೋಗಿಗಳೂ ಇದನ್ನು ತೆಗೆದುಕೊಳ್ಳುವಂತಿಲ್ಲ.

* ಅಲರ್ಜಿಯಿಂದ ಉಸಿರಾಟದ ತೊಂದರೆ, ಮುಖ ಹಾಗೂ ಗಂಟಲು ಊದಿಕೊಳ್ಳುವ, ಹೃದಯ ಬಡಿತ ಹೆಚ್ಚುವ, ಮೈಮೇಲೆ ಕಜ್ಜಿಗಳಾಗುವ ಹಾಗೂ ಸುಸ್ತಾಗುವ ಲಕ್ಷಣಗಳಿದ್ದವರು ಈ ಲಸಿಕೆ ಪಡೆಯದಂತೆ ಸೂಚಿಸಲಾಗಿದೆ. 

'ಕೊರೋನಾ 2ನೇ ಅಲೆಯಲ್ಲಿ ತಲ್ಲಣ : ಕಾಯದೇ ಲಸಿಕೆ ಪಡೆಯಿರಿ'

* ರಕ್ತಸ್ರಾವ ಸಮಸ್ಯೆ ಇದ್ದವರೂ ಈ ಲಸಿಕೆ ಪಡೆಯಬಾರದು.

* ಅಲರ್ಜಿ ಸಮಸ್ಯೆ, ಜ್ವರದಿಂದ ಬಳಲುತ್ತಿರುವವರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರೂ ಈ ಲಸಿಕೆ ಪಡೆಯದಂತೆ ಸೂಚಿಸಲಾಗಿದೆ.

* ಗರ್ಭಿಣಿ ಅಥವಾ ಹಾಲುಣಿಸುವ ತಾಯಂದಿರಿಗೆ ಲಸಿಕೆ ಪಡೆಯದಂತೆ ಸಲಹೆ ನೀಡಲಾಗಿದೆ.

* ಲಸಿಕೆ ಸ್ವೀಕರಿಸವುದಕ್ಕೂ ಮೊದಲು ಕೊರೋನಾ ಲಕ್ಷಣಗಳಿದ್ದರೆ RT-PCR ಟೆಸ್ಟ್‌ ವರದಿ ಸಲ್ಲಿಸಬೇಕು.