ಬಳ್ಳಾರಿ(ಜ.19):  ಕೋವಿಡ್‌ ಲಸಿಕೆ ಪಡೆದಿದ್ದ ಜಿಲ್ಲೆಯ ಸಂಡೂರಿನ ಸರ್ಕಾರಿ ಆಸ್ಪತ್ರೆಯೆ ‘ಡಿ’ ದರ್ಜೆ ನೌಕರ ನಾಗರಾಜ್‌ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

43 ವರ್ಷದ ನಾಗರಾಜ್‌ ಶನಿವಾರ ಕೋವಿಡ್‌ ಲಸಿಕೆ ಪಡೆದಿದ್ದರು. ಸೋಮವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ತೀವ್ರ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಜಿಂದಾಲ್‌ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

'ಕೊರೊನಾ ಲಸಿಕೆ ಪಡೆದುಕೊಂಡ್ರೆ ಸಲಿಂಗಕಾಮಿಗಳಾಗುತ್ತೀರಿ'

 ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಕಮಲಾಪುರ ನಿವಾಸಿಯಾಗಿರುವ ನಾಗರಾಜ್‌ ಲಸಿಕೆ ಪಡೆದ ಬಳಿಕ ಶನಿವಾರ, ಭಾನುವಾರ ಕರ್ತವ್ಯ ಮಾಡಿ, ಸೋಮವಾರ ಸಹ ಕೆಲಸಕ್ಕೆ ಹಾಜರಾಗಿದ್ದರು. ನಾಗರಾಜ್‌ ಸಾವು ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ, ಕೋವಿಡ್‌ ಲಸಿಕೆ ಪಡೆದಿದ್ದರಿಂದ ನಾಗರಾಜ್‌ ಸಾವಿಗೀಡಾಗಿಲ್ಲ.

ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ವಿಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಡಾ. ಜನಾರ್ದನ ತಿಳಿಸಿದ್ದಾರೆ.