WHO ಸುಧಾರಿಸುವ, ಬಲಪಡಿಸುವ ಅಗತ್ಯವಿದೆ, ಪ್ರಮುಖ ಪಾತ್ರವಹಿಸಲು ಭಾರತ ಸಿದ್ಧ, ಪ್ರಧಾನಿ ಮೋದಿ!
- ಜಾಗತಿಕ ಕೋವಿಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
- ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಬೇಕು
- WHO ಕಾರ್ಯಗಳು ಮತ್ತಷ್ಟು ಪ್ರಖರಗೊಳ್ಳಬೇಕು ಎಂದ ಮೋದಿ
ನವದೆಹಲಿ(ಮೇ.12): ವಿಶ್ವ ಆರೋಗ್ಯ ಸಂಸ್ಥೆಯನ್ನು(WHO ) ಬಲಪಡಿಸುವ, ಸುಧಾರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2ನೇ ಕೋವಿಡ್ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸಜ್ಜುಗೊಳಿಸಬೇಕು. WHO ಸುಧಾರಿಸುವ ನಿಟ್ಟಿನಲ್ಲಿ ಭಾರತ ಪ್ರಮುಖ ಪಾತ್ರ ನಿರ್ವಹಿಸಲು ಸಿದ್ಧ ಎಂದು ಮೋದಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವ ಭಾರತ, ವಿಶ್ವ ಆರೋಗ್ಯ ಸಂಸ್ಥೆಯ ಸುಧಾರಣೆಯಲ್ಲಿ ಪ್ರಮುಖ ಪಾತ್ರನಿರ್ವಹಿಸಲು ಬದ್ಧವಾಗಿದೆ. ಮುಂಬರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ವಿಶ್ವ ಆರೋಗ್ಯ ಸಂಸ್ಥೆ ಸಶಕ್ತವಾಗಬೇಕು ಎಂದು ಮೋದಿ ಹೇಳಿದ್ದಾರೆ.
ಕೊರೋನಾಗೆ ಬಲಿಯಾದ ಮಗ, ಸೊಸೆಗೆ ತಾವೇ ಮುಂದೆ ನಿಂತು ಮದುವೆ ಮಾಡಿಸಿದ ಅತ್ತೆ-ಮಾವ, ಬಂಗಲೆ ಗಿಫ್ಟ್!
ಕೋವಿಡ್ ಕಾರಣದಿಂದ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿತ್ತು. ಈ ಸಮಸ್ಯೆಯನ್ನು ಸುಧಾರಿಸಲು ಭಾರತ ಅತೀ ಹೆಚ್ಚು ಹಣವನ್ನು ಆರೋಗ್ಯಕ್ಕಾಗಿ ಮೀಸಲಿಟ್ಟಿದೆ. ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿತ್ತು. ಕೋವಿಡ್ ಲಸಿಕೆ ನೀಡಲು ಹೆಚ್ಚಿನ ಆದ್ಯತೆ ನೀಡಲಾಯಿತು. ಇದರ ಜೊತೆಗೆ ಹಲವು ರಾಷ್ಟ್ರಗಳಿಗೆ ಲಸಿಕೆಯನ್ನೂ ಪೂರೈಸಲಾಯಿತು. ಈ ಮೂಲಕ ಕೋವಿಡ್ ವಿರುದ್ಧ ಭಾರತ ಸಶಕ್ತವಾಗಿ ಹೋರಾಡಿತು. ಇದರ ಜೊತೆಗೆ ನೆರೆ ರಾಷ್ಟ್ರಗಳನ್ನು ಹೋರಾಡುವಂತೆ ಮಾಡಿತು ಎಂದು ಮೋದಿ ಹೇಳಿದ್ದಾರೆ.
ಭಾರತದ ಸಂಪ್ರದಾಯಿಕ ಔಷಧಿಗಳಿಂದ ರೋಗನಿರೋಧಕ ಹೆಚ್ಚಿಸುವಲ್ಲಿ ಭಾರತ ಯಶಸ್ವಿಯಾಯಿತು. ಭಾರತದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಜನ-ಕೇಂದ್ರಿತ ತಂತ್ರವನ್ನು ಅಳವಡಿಸಿಕೊಂಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಸಾಂಕ್ರಾಮಿಕದ ಸವಾಲನ್ನು ಎದುರಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಯೋಜಿಸಿರುವ 2ನೇ ಜಾಗತಿಕ ಕೋವಿಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಕ್ತಿಯುತವಾದ ಜಾಗತಿಕ ಆರೋಗ್ಯ ಭದ್ರತೆಯನ್ನು ರೂಪಿಸುವ ದೃಷ್ಟಿಯಿಂದ ಈ ಶೃಂಗಸಭೆ ನಡೆಸಾಲಿಗೆದೆ.
ಬೆಂಗಳೂರಿಗರಿಗೆ ನೆಮ್ಮದಿ, ಕೊರೋನಾ ಪಾಸಿಟಿವಿಟಿ, ಸೋಂಕಿತರ ಸಂಖ್ಯೆ ಇಳಿಕೆ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಮೇ 12ರಂದು ನಡೆಯುವ 2ನೇ ಜಾಗತಿಕ ಕೋವಿಡ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.. ಮುಂದುವರೆದ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮತ್ತಷ್ಟುಶಕ್ತಿಯುತವಾದ ಆರೋಗ್ಯ ಸೌಲಭ್ಯಗಳನ್ನು ರೂಪಿಸುವ ದೃಷ್ಟಿಯಿಂದ ಈ ಶೃಂಗಸಭೆ ನಡೆಸಲಾಯಿತು. ಜಗತ್ತು ಕೋವಿಡ್‌ನಿಂದ ಹೊರಬರುವಲ್ಲಿ ಭಾರತ ಮುಖ್ಯ ಪಾತ್ರ ವಹಿಸುತ್ತಿದೆ . ಕಳೆದ ವರ್ಷ ಸೆ.22ರಂದು ನಡೆದ ಮೊದಲ ಶೃಂಗಸಭೆಯಲ್ಲೂ ಮೋದಿ ವರ್ಚುವಲ್ ಆಗಿ ಭಾಗಿಯಾಗಿದ್ದರು.
12ರಿಂದ 17ವರ್ಷದೊಳಿಗಿನ ಮಕ್ಕಳಿಗೆ ಲಸಿಕೆ ನೀಡಿ
ಶಾಲೆಗಳು ಪ್ರಾರಂಭವಾದ ಮೊದಲ ವಾರದಲ್ಲಿಯೇ ಜಿಲ್ಲೆಯ 12ರಿಂದ 14 ಹಾಗೂ 15ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟಅಧಿಕಾರಿಗಳು ನಿರ್ದಿಷ್ಟವಾದ ಕಾರಣ ನೀಡಬೇಕು ಎಂದು ಕಾರವಾರ ಜಿಪಂ ಸಿಇಒ ಪ್ರಿಯಾಂಗಾ ಎಂ. ಸೂಚಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾಕರಣ, ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದ ಪ್ರಗತಿ ಪರಿಶಿಲನಾ ಬಗ್ಗೆ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿನ ಒಟ್ಟು 12ರಿಂದ 14 ಹಾಗೂ 15ರಿಂದ 17 ವರ್ಷದೊಳಗಿನ ಮಕ್ಕಳಲ್ಲಿ ಇದೂವರೆಗೂ ಲಸಿಕೆ ಪಡೆಯದೆ ಇರುವ ಮಕ್ಕಳಿಗೆ ಲಸಿಕೆ ನೀಡಬೇಕು. ಮೊದಲನೇ ಡೋಸ್ ಪಡೆದ ಮಕ್ಕಳಿಗೆ ಎರಡನೇ ಡೋಸ್ ಲಸಿಕಾಕರಣ ಸಂಪೂರ್ಣವಾಗಿ ಆಗಬೇಕು ಎಂದರು.