Asianet Suvarna News Asianet Suvarna News

ತ್ರಿಪುಂಡ ತಿಲಕವೆಲ್ಲಿ, ಜನಿವಾರವೆಲ್ಲಿ...? ಆದಿಪುರುಷ್' ನಿರ್ದೇಶಕ ಓಂ ರಾವುತ್ ವಿರುದ್ಧ ಬಿಜೆಪಿ ವಾಗ್ದಾಳಿ!

ಓಂ ರಾವತ್‌ ನಿರ್ದೇಶನದ "ಆದಿಪುರುಷ್' ಚಿತ್ರದ ಟೀಸರ್‌ ಬಿಡುಗಡೆಯಾದ ದಿನದಿಂದಲೂ, ಚಿತ್ರದಲ್ಲಿ ರಾಮಾಯಣದ ಪಾತ್ರಗಳ ರಚನೆಯ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಕುರಿತಾಗಿ ಸ್ವತಃ ಬಿಜೆಪಿ ಪಕ್ಷವೂ ವಿರೋಧ ವ್ಯಕ್ತಪಡಿಸಿದೆ. ಮಧ್ಯಪ್ರದೇಶ ಮಂತ್ರಿ ನರೋತ್ತಮ್‌ ಮಿಶ್ರಾ ಹಾಗೂ ರಾಜ್ಯದ ಮಾಳವಿಕಾ ಅವಿನಾಶ್‌, ರಾಮಾಯಣದ ತಪ್ಪು ನಿರೂಪಣೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

where is tripund tilak Janeyu BJP slams Adipurush director Om Raut for misrepresentation of Ramayana san
Author
First Published Oct 4, 2022, 3:27 PM IST

ನವದೆಹಲಿ (ಅ. 4): ರಾವಣ ದುಷ್ಟನಿರಬಹುದು ಆದರೆ ರಾಕ್ಷಸನಲ್ಲ. ಆತ ಲಂಕಾ ದೇಶದ ಶಿವ ಭಕ್ತ. ಆತನ ಹಣೆಯ ಮೇಲೆ ತ್ರಿಪುಂಡ ತಿಲಕವಿರಬೇಕು. ಅದಲ್ಲದೆ ಆತ ಮಹಾಬ್ರಾಹ್ಮಣ.. ಆದರೆ, ಈ ಎಲ್ಲವನ್ನೂ ಓಂ ರಾವತ್‌ ನಿರ್ದೇಶನದ ಬಹುಕೋಟಿ ವೆಚ್ಚದ ಆದಿಪುರುಷ್‌ ಚಿತ್ರದಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ. ಈ ಕುರಿತಂತೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ಇದಕ್ಕೆ ಬಿಜೆಪಿ ಪಕ್ಷ ಕೂಡ ಪ್ರತಿಕ್ರಿಯೆ ನೀಡಿದೆ. ಮಧ್ಯಪ್ರದೇಶದ ಮಂತ್ರಿ ನರೋತ್ತಮ್‌ ಮಿಶ್ರಾ, ವಾಲ್ಮೀಕಿ ರಾಮಾಯಣದಲ್ಲಿ ಹನುಮಂತ ಹೇಗಿದ್ದ ಎನ್ನುವುದರ ಸ್ಪಷ್ಟ ಚಿತ್ರಣವಿದೆ. ಆತನ ಅಂಗವಸ್ತ್ರಗಳು ಹೇಗಿದ್ದವು ಎನ್ನುವುದರ ವಿವರಣೆ ಇದೆ. ಆದರೆ, ಈ ಚಿತ್ರದಲ್ಲಿ ಅದರ ಲವಲೇಷವೂ ಇಲ್ಲ ಎಂದಿದ್ದಾರೆ. ಇನ್ನೊಂದೆಡೆ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್‌ ಕೂಡ, "ಲಂಕಾದ ಶಿವ-ಭಕ್ತ ಬ್ರಾಹ್ಮಣನಾದ ರಾವಣನು 64 ಕಲೆಗಳನ್ನು ಕರಗತ ಮಾಡಿಕೊಂಡಿದ್ದ ವ್ಯಕ್ತಿ. ವೈಕುಂಠವನ್ನು ಕಾಪಾಡುತ್ತಿದ್ದ ಜಯ(ವಿಜಯ್) ಶಾಪದಿಂದಾಗಿ ರಾವಣನಾಗಿ ಅವತರಿಸಿದ್ದ. ಆದಿಪುರುಷ್ ಚಿತ್ರದಲ್ಲಿರುವವನು ಟರ್ಕಿಯ ಕ್ರೂರನಾಗಿರಬಹುದು ಆದರೆ ರಾವಣನಲ್ಲ! ಬಾಲಿವುಡ್, ನಮ್ಮ ರಾಮಾಯಣದ ಇತಿಹಾಸವನ್ನು ತಪ್ಪಾಗಿ ಬಿಂಬಿಸುವುದನ್ನು ನಿಲ್ಲಿಸಿ. ದಂತಕಥೆ ಎನ್‌ಟಿಆರ್‌ರಾಮರಾವ್‌ ಬಗ್ಗೆ ಎಂದಾದರೂ ಕೇಳಿದ್ದೀರಾ?" ಎಂದು ಟ್ವೀಟ್‌ ಮಾಡಿದ್ದಾರೆ.

ರಾಮಾಯಣದ ಕಥೆಯನ್ನು ಬೆಳ್ಳಿತೆರೆಗೆ ತರುವ ಕನಸಿನೊಂದಿಗೆ ರಾವತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ ಆದರೆ ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಅಭಿನಯದ 'ಆದಿಪುರುಷ' ಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಿದ್ದರೂ ಸಹ, ವಿವಿಧ ವಲಯಗಳಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅದಲ್ಲದೆ, ಚಿತ್ರದ ಅತ್ಯಂತ ಕಳಪೆ ವಿಎಫ್‌ಎಕ್ಸ್‌ಗೂ ಬೇಸರ ವ್ಯಕ್ತವಾಗಿದೆ. ಅದಲ್ಲದೆ, ಸೈಫ್‌ನ ರಾವಣ ಸೇರಿದಂತೆ ವಿವಿಧ ಪಾತ್ರಗಳ ಅವಾಸ್ತವಿಕ ನೋಟದಿಂದಾಗಿ ಜನರು ಹೆಚ್ಚಾಗಿ ಬೇಸರಗೊಂಡಿದ್ದಾರೆ. ಸೈಫ್ ಚಿಕ್ಕದಾದ ಮೊನಚಾದ ಕೂದಲು, ಉದ್ದನೆಯ ಗಡ್ಡ ಮತ್ತು ಕಣ್ಣುಗಳಿಗೆ ಕಾಜಲ್‌ ಧರಿಸಿರುವುದನ್ನು ನೋಡಿದ ಹಲವಾರು ನೆಟಿಜನ್‌ಗಳು ಚಿತ್ರದಲ್ಲಿ ಸೈಫ್‌ ಅಲಿ ರಾವಣನ ಬದಲು, ಮೊಘಲ್‌ ದಾಳಿಕೋರ ಅಥವಾ ಅಲ್ಲಾವುದ್ದೀನ್‌ ಖಿಲ್ಜಿಯ ರೀತಿ ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಮಾಳವಿಕಾ, ರಾವಣನ ಚಿತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ನಿರ್ದೇಶಕರು ವಾಲ್ಮೀಕಿಯ ರಾಮಾಯಣ, ಕಂಬ ರಾಮಾಯಣ ಅಥವಾ ತುಳಸಿದಾಸರ ರಾಮಾಯಣ ಅಥವಾ ಹಲವಾರು ವ್ಯಾಖ್ಯಾನಗಳ ಬಗ್ಗೆ ಸಂಶೋಧನೆ ಮಾಡದೇ ರಾಮಾಯಣ ಪಾತ್ರಗಳನ್ನು ಚಿತ್ರಿಸಿರುವುದರಿಂದ ಬೇಸರವಾಗಿದೆ. ರಾಮಾಯಣ ಕಥೆ ಥಾಯ್ಲೆಂಡ್‌ನಾದ್ಯಂತವೂ ಲಭ್ಯವಿದೆ. ಅಲ್ಲಿ ಅವರು ರಾಮಾಯಣದ ಸುಂದರ ಪ್ರದರ್ಶನಗಳನ್ನು ಮಾಡುತ್ತಾರೆ, ಓಂ ರಾವತ್‌ ಮಾಡಬಹುದಾದ ಕನಿಷ್ಠವೆಂದರೆ ಹಿಂತಿರುಗಿ ಮತ್ತು ನಮ್ಮ ಸ್ವಂತ ಚಲನಚಿತ್ರಗಳನ್ನೇ ನೋಡುವುದು. ಹಲವು ಕನ್ನಡ, ತೆಲುಗು ಹಾಗೂ ತಮಿಳು ಚಲನಚಿತ್ರಗಳಲ್ಲಿ ರಾವಣನ ಪಾತ್ರವನ್ನು ಹೇಗೆ ಚಿತ್ರಿಸಿದ್ದಾರೆ ಎನ್ನುವುದನ್ನು ಒಮ್ಮೆ ಅವರು ನೋಡಬೇಕಿದೆ' ಎಂದು ಹೇಳಿದ್ದಾರೆ.

'ಅವರು ಎನ್‌ಟಿ ರಾಮರಾವ್‌ ಅಥವಾ ಡಾ. ರಾಜ್‌ಕುಮಾರ್‌ ಅವರ ಭೂಕೈಲಾಸ ಚಿತ್ರ ಇಲ್ಲದೇ ಇದ್ದಲ್ಲಿ ಈ ನಟರ ಇನ್ನೂ ಕೆಲವು ಪ್ರಖ್ಯಾತ ಚಲನಚಿತ್ರಗಳನ್ನು ಒಮ್ಮೆ ನೋಡಬೇಕಿತ್ತು. ಸಂಪೂರ್ಣ ರಾಮಾಯಣದಲ್ಲಿ ಎನ್‌ಸಿ ರಂಗಾರಾವ್‌ ಮಾಡಿದ್ದ ಪಾತ್ರಗಳನ್ನು ನೋಡಿದ್ದರೆ ರಾವಣನ ಬಗ್ಗೆ ಕಲ್ಪನೆ ಬರುತ್ತಿತ್ತು. ನಾನು ಬರುತ್ತಿರುವ ಫೋಟೋದಲ್ಲಿರುವ ರಾವಣ ಭಾರತೀಯನಾಗಿ ಕಾಣುತ್ತಿಲ್ಲ. ನೀಲಿ ಕಣ್ಣಿನ ಮೇಕಪ್ ಹೊಂದಿರುವ ಮತ್ತು ಚರ್ಮದ ಜಾಕೆಟ್‌ಗಳನ್ನು ಧರಿಸಿದ್ದಾರೆ. ಇದು ಅವರು ಪ್ರತಿನಿಧಿಸುತ್ತಿರುವ ನಮ್ಮ ಇತಿಹಾಸ; ಸೃಜನಾತ್ಮಕ ಸ್ವಾತಂತ್ರ್ಯದ ವೇಷದಲ್ಲಿ ಅವರು ಅದನ್ನು ಮಾಡಲು ಸಾಧ್ಯವಿಲ್ಲ'ಎಂದು ಹೇಳಿದ್ದಾರೆ.

Adipurush; ಟೀಸರ್ ನೋಡಿ ಗರಂ ಆದ್ರಾ ಪ್ರಭಾಸ್? ಕೋಪದಿಂದ ನಿರ್ದೇಶಕರನ್ನು ಕರೆದ ವಿಡಿಯೋ ವೈರಲ್

ನಾವು ಹೇಗೆದ್ದೇವೆ ಅನ್ನೋದೇ ರಾಮಾಯಣ.  ಇದು ಈ ರಾಷ್ಟ್ರ, ಅದರ ನಾಗರಿಕತೆ ಮತ್ತು ಅದರ ಜನರನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಯಾರೂ ಇದನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ, ಚಲನಚಿತ್ರ ನಿರ್ದೇಶಕರನ್ನು ಒಳಗೊಂಡಿದೆ. ನಾನು ಈ ತಪ್ಪು ನಿರೂಪಣೆಯಿಂದ ಕೋಪಗೊಂಡಿದ್ದೇನೆ ಮತ್ತು ನನಗೆ ದುಃಖವಾಗಿದೆ ಎಂದಿದ್ದಾರೆ.

Aadipurush; ಚಿತ್ರಮಂದಿರ ಅಲ್ಲ, ಕಾರ್ಟೂನ್ ನೆಟ್‌ವರ್ಕ್‌ಲ್ಲಿ ರಿಲೀಸ್ ಆಗಲಿ, ಪ್ರಭಾಸ್ ಸಿನಿಮಾ ಹಿಗ್ಗಾಮುಗ್ಗ ಟ್ರೋಲ್

ಈ ನಡುವೆ, ಸೈಫ್‌ನ (Saif ali Khan)ರಾವಣನ ಪಾತ್ರದ ಹೊರತಾಗಿ, ಯಾವಾಗಲೂ ಕಲಾತ್ಮಕವಾಗಿ ಪ್ರತಿನಿಧಿಸುವ ಪುಷ್ಪಕ್ ವಿಮಾನದ (Pushpak vimana) ಚಿತ್ರಣವನ್ನು ನೆಟಿಜನ್‌ಗಳು ವ್ಯಾಪಕವಾಗಿ ಟೀಕೆ ಮಾಡಿದ್ದಾರೆ. ಟೀಸರ್‌ನಲ್ಲಿ ಸೈಫ್ ಒಂದು ರೀತಿಯ ರೂಪಾಂತರಿತ ಬಾವಲಿಯಂತೆ ಕಾಣುವ ಭಯಾನಕ ಪ್ರಾಣಿಯ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಟೀಸರ್‌ಅನ್ನು ಟೀಕೆ ಮಾಡಿರುವ ಒಬ್ಬರು, "#ಆದಿಪುರುಷ್‌ನಲ್ಲಿ ರಾವಣನಿಗಿಂತ ಹೆಚ್ಚಾಗಿ ಸೈಫ್ ಅಲಿಖಾನ್ ಇಸ್ಲಾಮಿಕ್ ಆಕ್ರಮಣಕಾರನಂತೆ ಕಾಣುತ್ತಾನೆ?' ಎಂದಿದ್ದಾರೆ. 'ಆದಿಪುರುಷ' ಚಿತ್ರವನ್ನು ಟಿ ಸೀರೀಸ್ (T series) ಮತ್ತು ರೆಟ್ರೋಫಿಲ್ಸ್ (Retrofils) ನಿರ್ಮಿಸಿದೆ. ಇದು IMAX ಮತ್ತು 3D ನಲ್ಲಿ ಜನವರಿ 12, 2023 ರಂದು ಥಿಯೇಟರ್‌ಗಳಿಗೆ ಬರಲಿದೆ. ಭೂಷಣ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ನಿರ್ಮಿಸಿರುವ ಈ ಚಿತ್ರವು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

Follow Us:
Download App:
  • android
  • ios