Adipurush; ಟೀಸರ್ ನೋಡಿ ಗರಂ ಆದ್ರಾ ಪ್ರಭಾಸ್? ಕೋಪದಿಂದ ನಿರ್ದೇಶಕರನ್ನು ಕರೆದ ವಿಡಿಯೋ ವೈರಲ್

ತೆಲುಗು ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ  ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. 

Prabhas Got Angry At Director Om Raut Post Adipurush Teaser Release? vide viral sgk

ತೆಲುಗು ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ  ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಚಿತ್ರದಲ್ಲಿ ರಾವಣ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಕಳಪೆ ವಿಎಫ್‌ಎಕ್ಸ್ ನಿಂದ ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ. ನಿರ್ದೇಶಕ ಓಂ ರಾವುತ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಬಾಹುಬಲಿ ಅಂತ ಸಿನಿಮಾ ನೀಡಿದ ಪ್ರಭಾಸ್ ಅವರಿಗೆ ಇಷ್ಟು ಕಳಪೆ ಮಟ್ಟದ ಸಿನಿಮಾ ಮಾಡಬಾರದಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಆದಿಪುರುಷ್ ಟೀಸರ್‌ನ ಗ್ರಾಫಿಕ್ಸ್ ನೋಡಿ ನೆಟ್ಟಿಗರು ಇದಕ್ಕಿಂತ ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಬರುವ ಸೀರಿಸ್ ಚೆನ್ನಾಗಿರುತ್ತೆ, ಇದನ್ನ ಕಾರ್ಟೂನ್ ನೆಟ್‌ವರ್ಟ್‌ನಲ್ಲಿ ರಿಲೀಸ್ ಮಾಡಿ ಎನ್ನುತ್ತಿದ್ದಾರೆ. ಅಲ್ಲದೇ ರಾವಣನನ್ನು ಸಂಪೂರ್ಣ ಬದಲಾಯಿಸಲಾಗಿದೆ, ಸೈಫ್ ಅಲಿ ಖಾನ್ ಅವರ ರಾವಣ ಪಾತ್ರವನ್ನು ಕಿಲ್ಜಿಯ ಹಾಗೆ ತೋರಿಸಲಾಗಿದೆ, ಕ್ಷತ್ರಿಯಾ ರಾಮನನ್ನು ಬ್ರಾಹ್ಮಣನನ್ನಾಗಿ ಮಾಡಲಾಗಿದೆ, ಆಂಜನೇಯನ ಮೀಸೆ ತೆಗೆದು ಮತಾಂತರ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. 

ಸಾಮಾಜಿಕ ಜಾಲಾತಣದಲ್ಲಿ ದೊಡ್ಡ ಮಟ್ಟದ ಟ್ರೋಲ್ ಆಗುತ್ತಿದ್ದರು ಸಹ ಸಿನಿಮಾತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ನಡುವೆ ಪ್ರಭಾಸ್ ಕೋಪಗೊಂಡಿರುವ ವಿಡಿಯೋ ವೈರಲ್ ಆಗಿದೆ. ಸಿಟ್ಟಿನಲ್ಲಿ ನಿರ್ದೇಶಕ ಓಂ ರಾವುತ್ ಅವರನ್ನು ಕರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಈವೆಂಟ್‌ನ ವಿಡಿಯೋ ಇದಾಗದೆ. ಟೀಸರ್ ರಿಲೀಸ್ ಆದ ಬಳಿಕ ಗ್ರಾಫಿಕ್ಸ್ ನೋಡಿ ಕೋಪಗೊಂಡಿರುವ ಪ್ರಭಾಸ್ ನಿರ್ದೇಶಕರ ವಿರುದ್ಧ ಆಕ್ರೋಶಗೊಂಡಿರುವ ವಿಡಿಯೋ ಇದು ಎನ್ನಲಾಗುತ್ತಿದೆ. 

Aadipurush; ಚಿತ್ರಮಂದಿರ ಅಲ್ಲ, ಕಾರ್ಟೂನ್ ನೆಟ್‌ವರ್ಕ್‌ಲ್ಲಿ ರಿಲೀಸ್ ಆಗಲಿ, ಪ್ರಭಾಸ್ ಸಿನಿಮಾ ಹಿಗ್ಗಾಮುಗ್ಗ ಟ್ರೋಲ್

ಪ್ರಭಾಸ್ ಕೋಪದಿಂದ, ಓಂ ನನ್ನ ರೂಮಿಗೆ ಬಾ..ಎಂದು ಜೋರಾಗಿ ಕರೆಯುತ್ತಾರೆ. ಪ್ರಭಾಸ್ ಮುಖದಲ್ಲಿ ಕೋಪ ಎದ್ದು ಕಾಣುತ್ತಿದೆ. ಹಾಗಾಗಿ ಅಭಿಮಾನಿಗಳು ಪ್ರಭಾಸ್ ಯಾವತ್ತೂ ಇಷ್ಟು ಕೋಪ ಮಾಡಿಕೊಂಡಿದ್ದನ್ನು ನೋಡೆ ಇಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಆದಿಪುರುಷ್ ಟೀಸರ್ ರಾಮನ ಜನ್ಮಭೂಮಿ ಅಯೋದ್ಯಯಲ್ಲಿ ರಿಲೀಸ್ ಮಾಡಲಾಗಿದೆ. ಅದ್ದೂರಿ ಈವೆಂಟ್ ನಲ್ಲಿ ಆದಿಪುರುಷ್ ರಿಲೀಸ್ ಆಗಿದೆ.  

ಆದಿಪುರುಷ್ ಟೀಸರ್ ಸ್ವತಃ ಅವರಿಗೆಯೇ ಇಷ್ಟವಾಗಿಲ್ಲ ಎನ್ನುವುದು ಈ ವಿಡಿಯೋದಲ್ಲಿ ಗೊತ್ತಾಗುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಆದಿಪುರುಷ್ ಸಿನಿಮಾ ಕೋಟಿ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ. ಈಗಾಗಲೇ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಷ್ಟಾದರೂ ಚಿತ್ರದ ವಿಎಫ್‌ಎಕ್ಸ್ ಇಷ್ಟು ಕಳಪೆಯಾಗಿ ಬಂದಿರುವುದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ದಯವಿಟ್ಟು ಸಿನಿಮಾದ ಗುಣಮಟ್ಟ ಹೆಚ್ಚಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

Kantara; ರಿಷಬ್ ಶೆಟ್ಟಿ ಸಿನಿಮಾಗೆ ಪ್ರಭಾಸ್ ಫಿದಾ, ಕ್ಲೈಮ್ಯಾಕ್ಸ್ ಬಗ್ಗೆ ಹೇಳಿದ್ದೇನು?

ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ನಟಿಸಿದ್ರೆ, ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಆದಿಪುರುಷ್ ಮುಂದಿನ ವರ್ಷ 2023ರಲ್ಲಿ ಆದಿಪುರುಷ್ ರಿಲೀಸ್ ಆಗುತ್ತಿದೆ.   

Latest Videos
Follow Us:
Download App:
  • android
  • ios