ಏಳು ವರ್ಷದ ಬಾಲಕಿ ಅನ್ನದಾ ದಮರೆ,  ದೀಪಾವಳಿ ರಜೆಯಲ್ಲಿ ತನ್ನನ್ನು ಗುವಾಹಟಿಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಸಂಪರ್ಕಿಸಿ ಅಚ್ಚರಿ ಮೂಡಿಸಿದ್ದಾಳೆ. 

ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಸಿಎಂ ಆಗಿದ್ದಾಗ ಅವರದೇ ಶಿವಸೈನಿಕ ಬೆಂಬಲಿಗರೊಂದಿಗೆ ಗುವಾಹಟಿಗೆ ತೆರಳಿ ಹೊಟೇಲ್‌ನಲ್ಲಿ ಉಳಿದುಕೊಂಡು ಬಂಡಾಯವೆದ್ದು ಬಳಿಕ ಬಿಜೆಪಿ ಬೆಂಬಲದೊಂದಿಗೆ ಉದ್ಧವ್‌ ಠಾಕ್ರೆಯವರನ್ನು ಕೆಳಗಿಳಿಸಿ ಮಹಾರಾಷ್ಟ್ರದ ಸಿಎಂ ಆಗಿದ್ದು, ಈಗ ಇತಿಹಾಸ. ಆಗ ಬಂಡಾಯನಾಯಕನಾಗಿ ಈಗ ಸಿಎಂ ಆಗಿರುವ ಏಕನಾಥ್ ಸಿಂಧೆ ಅವರನ್ನು ಪುಟ್ಟ ಬಾಲಕಿಯೊಬ್ಬಳು ಈಗ ನಮ್ಮನ್ನು ಯಾವಾಗ ಗುವಾಹಟ್ಟಿಗೆ ಕರೆದೊಯ್ಯುವಿರಿ ಎಂದು ಪ್ರಶ್ನಿಸಿದ್ದಾಳೆ. 

ಏಳು ವರ್ಷದ ಬಾಲಕಿ ಅನ್ನದಾ ದಮರೆ, ದೀಪಾವಳಿ ರಜೆಯಲ್ಲಿ ತನ್ನನ್ನು ಗುವಾಹಟಿಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಸಂಪರ್ಕಿಸಿ ಅಚ್ಚರಿ ಮೂಡಿಸಿದ್ದಾಳೆ. ಬಾಲಕಿಯ ಆಸೆಗೆ ಸಿಎಂ ಎಸ್ ಎಂದಿದ್ದು, ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ್ ಹಿಲ್ಸ್‌ನಲ್ಲಿರುವ ಜನಪ್ರಿಯ ದೇವಾಲಯವಾದ ಕಾಮಾಖ್ಯ ಮಂದಿರಕ್ಕೆ ಕೂಡ ಕರೆದೊಯ್ಯುವುದಾಗಿ ಹೇಳಿದರು.

Scroll to load tweet…

ಬಾಲಕಿ ಅನ್ನದಾ ಅವರು ತಮ್ಮ ತಂದೆ ಸಾಕೇತ್ ದಾಮರೆ ಅವರೊಂದಿಗೆ ಭಾನುವಾರ ಸಂಜೆ ಮಲಬಾರ್ ಹಿಲ್‌ನಲ್ಲಿರುವ ಸಿಎಂ ಏಕನಾಥ್ ಸಿಂಧೆ ಅವರ ನಂದನವನ ಬಂಗಲೆಯಲ್ಲಿ ಸಿಎಂ ಅವರನ್ನು ಭೇಟಿಯಾಗಿದ್ದರು. ಸಾಕೇತ್ ದಾಮರೆ ಜಾಹೀರಾತು ಏಜೆನ್ಸಿಯೊಂದನ್ನು ನಡೆಸುತ್ತಿದ್ದಾರೆ. ಬಾಲಕಿ ಸಿಎಂ ಅವರನ್ನು ಕೇಳುತ್ತಿರುವ ವಿಡಿಯೋ ನಿನ್ನೆ(ಜು18) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹಾರಾಷ್ಟ್ರದ ರತ್ನಗಿರಿಯ ಎರಡನೇ ತರಗತಿಯ ಈ ಬಾಲಕಿ ರಾಜಕಾರಣಿಗಳಿಗೆ ಪ್ರಶ್ನೆಗಳನ್ನು ಕೇಳುವ ವೀಡಿಯೊಗಳನ್ನು ಮಾಡುವ ಮೂಲಕ ಜನಪ್ರಿಯಳಾಗಿದ್ದಾಳೆ.

ಒಬ್ಬನೇ ಒಬ್ಬ ಶಾಸಕ ಸೋತರೂ ರಾಜಕೀಯಕ್ಕೇ ಗುಡ್‌ಬೈ ಹೇಳ್ತೀನಿ: ಉದ್ಧವ್‌ಗೆ ಶಿಂಧೆ ಚಾಲೆಂಜ್‌!

ಕೆಲವು ನಿಮಿಷಗಳ ಸುದೀರ್ಘ ಸಂಭಾಷಣೆಯ ಕೊನೆಯಲ್ಲಿ, ಕೊನೆಯದಾಗಿ ನಾನು ನಿಮ್ಮಿಂದ ಭರವಸೆಯನ್ನು ಬಯಸುತ್ತೇನೆ ಎಂದು ಸಿಎಂ ಶಿಂಧೆ ಅವರನ್ನು ಕೇಳಿದ ಅನ್ನದಾ , 'ಮುಂಬರುವ ದೀಪಾವಳಿ ರಜೆಗಾಗಿ ನೀವು ನನ್ನನ್ನು ಗುವಾಹಟಿಗೆ ಕರೆದೊಯ್ಯಬಹುದೇ ಎಂದು ನೇರವಾಗಿ ಕೇಳಿದ್ದಾಳೆ. ಆಕೆಯ ಈ ಪ್ರಶ್ನೆಗೆ ಆ ಕೊಠಡಿಯಲ್ಲಿದ್ದವರ ನಗುವಿಗೆ ಕಾರಣವಾಯಿತು. ಅಲ್ಲದೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದ ನಂತರ ಶಿಂಧೆ ಅವರು ತಮ್ಮ 40 ಶಾಸಕರ ಗುಂಪಿನೊಂದಿಗೆ ಗುವಾಹಟಿಯಲ್ಲಿ ಕೆಲವು ದಿನಗಳ ಕಾಲ ಉಳಿದುಕೊಂಡ ನಗರ ಗುವಾಹಟಿ ಆಗಿರುವುದರಿಂದ ಸಿಎಂಗೂ ನಗು ತಡೆಯಲಾಗಲಿಲ್ಲ.

ಉದ್ಧವ್‌ಗಾಗಿ ಕಣ್ಣೀರು ಸುರಿಸಿದ್ದ ಶಾಸಕನಿಂದ ವಿಶ್ವಾಸಮತಕ್ಕೂ ಮುನ್ನ ಶಿಂಧೆ ಬಣಕ್ಕೆ!

ಬಾಲಕಿಯ ಪ್ರಶ್ನೆಗೆ ಉತ್ತರವಾಗಿ ಏಕನಾಥ್ ಶಿಂಧೆ, ನಾವು ದೇವಿಯ ದರ್ಶನ ಪಡೆಯಲು ಕಾಮಾಖ್ಯ ಮಂದಿರಕ್ಕೆ ಭೇಟಿ ನೀಡೋಣ ಎಂದು ಹೇಳಿದರು. ಅಲ್ಲದೇ ಅವಳ ಮನಸ್ಸಿನ ಉಪಸ್ಥಿತಿಗಾಗಿ( presence of mind) ಅವಳನ್ನು ಸಿಎಂ ಹೊಗಳಿದರು ತುಂಬಾ ಸ್ಮಾರ್ಟ್‌ ಹುಡುಗಿ ಎಂದು ಹೇಳಿದರು. ಜನರಿಗೆ ಸಹಾಯ ಮಾಡಿದರೆ ತಾನು ಮುಖ್ಯಮಂತ್ರಿಯಾಗಬಹುದೇ ಎಂದೂ ಕೂಡ ಬಾಲಕಿ ಅನ್ನದಾ ಸಿಎಂ ಅವರನ್ನು ಕೇಳಿದಳು. ಅದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಸಿಎಂ 'ಹೌದು ಯಾಕೆ ಆಗಲ್ಲ, ನಾವು ನಿಮಗಾಗಿ ವಿಶೇಷ ಮೀಸಲಾತಿ ಯೋಜನೆಯನ್ನು ಹೊರ ತರುತ್ತಿದ್ದೇವೆ ಎಂದರು. ಅದಕ್ಕೂ ಮೊದಲು ಬಾಲಕಿ ತಾನು ಮೋದಿಜಿ (ಪ್ರಧಾನಿ ನರೇಂದ್ರ ಮೋದಿ) ಅವರನ್ನು ಮಾತ್ರ ಮೆಚ್ಚುತ್ತಿದ್ದೆ ಆದರೆ ಧರ್ಮವೀರ್, (ಥಾಣೆಯ ದಿವಂಗತ ಶಿವಸೇನಾ ನಾಯಕ ಆನಂದ್ ದಿಘೆ) ಅವರ ಜೀವನಾಧಾರಿತ ಮರಾಠಿ ಚಲನಚಿತ್ರ ನೋಡಿದ ನಂತರ ನಿಮ್ಮನ್ನು ಕೂಡ ಮೆಚ್ಚಲು ಪ್ರಾರಂಭಿಸಿದೆ ಎಂದು ಸಿಎಂಗೆ ತಿಳಿಸಿದರು. ಅಂದಹಾಗೆ ಏಕನಾಥ್ ಶಿಂಧೆ, ಆನಂದ್ ದಿಘೆಯವರ ಶಿಷ್ಯ.