Asianet Suvarna News Asianet Suvarna News

ತೆಲಂಗಾಣದಲ್ಲಿ ಬದಲಾಗ್ತಿದೆ ಸರ್ಕಾರ: ರೇವಂತ್ ರೆಡ್ಡಿ, ಕೆಟಿಆರ್‌ಗೆ ಯುಕೆ ಡೆಪ್ಯುಟಿ ಹೈ ಕಮಿಷನರ್ ಪೋಸ್ಟ್‌ ವೈರಲ್‌!

ಆಂಧ್ರಪ್ರದೇಶ ಮತ್ತು ತೆಲಂಗಾಣದ ಡೆಪ್ಯುಟಿ ಹೈ ಕಮಿಷನರ್ ಗರೆಥ್ ವೈನ್ ಓವನ್ ಅವರು ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಕೆ.ಟಿ. ರಾಮರಾವ್‌ ಹಾಗೂ ರೇವಂತ್ ರೆಡ್ಡಿ ಅವರಿಗೆ ಪೋಸ್ಟ್‌ ಮಾಡಿದ್ದು, ವೈರಲ್‌ ಅಗಿದೆ. 

what uk deputy high commissioner to ap telangana posted on brs loss congress win ash
Author
First Published Dec 4, 2023, 11:17 AM IST

ಹೈದರಾಬಾದ್‌ (ಡಿಸೆಂಬರ್ 4, 2023): ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಗಳ ಬಗ್ಗೆ ಇತರ ದೇಶಗಳ ಕಾನ್ಸುಲೇಟ್‌ಗಳು ಪ್ರತಿಕ್ರಿಯೆ ನೀಡುತ್ತವೆ ಎಂದು ನಿರೀಕ್ಷಿಸಲಾಗಲ್ಲ. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೇ ಬೇರೆ. ಇದು ವಿಭಿನ್ನ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತವೆ ಮತ್ತು ವಿದೇಶದಲ್ಲಿರುವ ಈ ರಾಜ್ಯಗಳ ಜನಸಂಖ್ಯೆ ಈ ಎರಡು ರಾಜ್ಯಗಳನ್ನು ಇತರ ರಾಜ್ಯಗಳಿಂದ ಪ್ರತ್ಯೇಕಿಸುತ್ತದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದ ಡೆಪ್ಯುಟಿ ಹೈ ಕಮಿಷನರ್ ಗರೆಥ್ ವೈನ್ ಓವನ್ ಅವರು ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಎರಡು ವಿಭಿನ್ನ ಪೋಸ್ಟ್‌ಗಳನ್ನು ಮಾಡಿದ್ದಾರೆ. ಅಲ್ಲದೆ, ಗೇಮ್ ಚೇಂಜರ್ ಚುನಾವಣಾ ಫಲಿತಾಂಶಗಳಿಗೆ ಯುಕೆ ತಮ್ಮ ಪ್ರತಿಕ್ರಯೆ ನೀಡಿದೆ. 

ಇದನ್ನು ಓದಿ: ಈಶಾನ್ಯ ಮಿಜೋರಾಂನಲ್ಲಿ ZPM ಮ್ಯಾಜಿಕ್‌; ಮೋದಿ ದೂರ ಮಾಡಿಕೊಂಡ MNFಗೆ ಕೈ ತಪ್ಪುತ್ತಾ ಅಧಿಕಾರ?
 
ಬಿಆರ್‌ಎಸ್‌ ನಾಯಕ ಹಾಗೂ ಸಚಿವರಾಗಿದ್ದ ಕೆ.ಟಿ. ರಾಮರಾವ್‌ ಹಾಗೂ ಕೆಸಿಆರ್‌ ಪುತ್ರ ಕೆ.ಸಿ. ರಾಮರಾವ್ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲೊಪ್ಪಿಕೊಳ್ಳುತ್ತಿದ್ದಂತೆಯೇ ಯುಕೆ ಡೆಪ್ಯುಟಿ ಹೈ ಕಮಿಷನರ್ ಟ್ವೀಟ್‌ ಮಾಡಿದ್ದಾರೆ. ವಿಜೆತರಾದ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಹಾಗೂ ಭಾವಿ ಸಿಎಂ ಎಂದೇ ಬಿಂಬಿತರಾಗಿರೋ ರೇವಂತ್‌ ರೆಡ್ಡಿ ಹಾಗೂ ಕೈ ಪಕ್ಷವನ್ನು ಗರೆಥ್ ವೈನ್ ಓವನ್ ಅಭಿನಂದಿಸಿದ್ದಾರೆ. 

ಅಲ್ಲದೆ, ನಿಮ್ಮೊಂದಿಗೆ ಕೆಲಸ ಮಾಡಿದ್ದನ್ನು ಆನಂದಿಸಿದೆ @KTRBRS ಮತ್ತು ಯುಕೆ ಹಾಗೂ ತೆಲಂಗಾಣದ ನಡುವಿನ ಸಂಬಂಧವನ್ನು ಬಿಲ್ಡ್‌ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ಅಲ್ಲದೆ, ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಯಿರುವ ವಿಜೇತ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ ಅನುಮುಲಾ ರೇವಂತ್ ರೆಡ್ಡಿ ಅವರಿಗೂ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ತೃತೀಯ ರಂಗ ರಾಷ್ಟ್ರ ನಾಯಕನಾಗಲು ಹೊರಟ ಕೆಸಿಆರ್‌ಗೆ ತವರಲ್ಲೇ ಮುಖಭಂಗ: ಕನಸಿನ ಕಾರಿಗೆ ಬ್ರೇಕ್‌ ಹಾಕಿದ ಹಸ್ತ!

ಅಭಿನಂದನೆಗಳು @INCTelangana ಮತ್ತು @revanth_anumula. UK ಹಾಗೂ ತೆಲಂಗಾಣ ನಡುವಿನ ಸಂಬಂಧಗಳನ್ನು ಬಲಪಡಿಸಲು ನಿಮ್ಮ ಮತ್ತು ನಿಮ್ಮ ತಂಡದೊಂದಿಗೆ ಕೆಲಸ ಮಾಡಲು ಎದುರುನೋಡುತ್ತಿದ್ದೇವೆ ಎಂದೂ ಆಂಧ್ರಪ್ರದೇಶ ಮತ್ತು ತೆಲಂಗಾಣದ ಡೆಪ್ಯುಟಿ ಹೈ ಕಮಿಷನರ್ ಗರೆಥ್ ವೈನ್ ಓವನ್ ಟ್ವೀಟ್‌ ಮಾಡಿದ್ದಾರೆ. 

ಸೆಪ್ಟೆಂಬರ್ 2022 ರಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಡೆಪ್ಯುಟಿ ಹೈ ಕಮಿಷನರ್ ಆಗಿ ಗರೆಥ್ ವೈನ್ ಓವನ್ ಅವರು ಜವಾಬ್ದಾರಿಯನ್ನು ವಹಿಸಿಕೊಂಡಿದ್ರು. ತೆಲುಗು ಬಹುಸಂಖ್ಯಾತ ರಾಜ್ಯಗಳಲ್ಲಿ UK ಜತೆಗಗಿನ ಎಲ್ಲಾ ಅಂಶಗಳಿಗೆ ಜವಾಬ್ದಾರರಾಗಿದ್ದಾರೆ. ಡೆಪ್ಯುಟಿ ಹೈ ಕಮಿಷನರ್ ಆಗಿ, ಅವರ ಪಾತ್ರವು ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸುವುದು, ವೈಜ್ಞಾನಿಕ ಮತ್ತು ಶಿಕ್ಷಣ ಸಹಕಾರವನ್ನು ಬಲಪಡಿಸುವುದು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಹಾಗೂ ಸ್ವಚ್ಛ ಮತ್ತು ಸುಸ್ಥಿರ ಬೆಳವಣಿಗೆಗೆ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಪಾಲುದಾರರೊಂದಿಗೆ ಕೆಲಸ ಮಾಡುವುದು ಒಳಗೊಂಡಿರುತ್ತದೆ.

ಇದನ್ನು ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಪಾರುಪತ್ಯ: 'ಶಿವರಾಜ'ನ ಜತೆ 'ಮಹಾರಾಜ'ನ ನೆರವಿಗೆ ಕಾಂಗ್ರೆಸ್‌ ಧೂಳೀಪಟ!

Follow Us:
Download App:
  • android
  • ios