Chikkaballapura : ಮಾಂಡಸ್ ಚಂಡಮಾರುತಕ್ಕೆ ತತ್ತರಿಸಿದ ಜಿಲ್ಲೆಯ ಜನತೆ
ಬಂಗಾಳ ಕೊಲ್ಲಿಯಲ್ಲಿ ಉಲ್ಬಣಿಸಿರುವ ಮಾಂಡಸ್ ಚಂಡಮಾರುತ ಪರಿಣಾಮ ಜಿಲ್ಲೆಗೂ ತಟ್ಟಿದ್ದು ದಿಡೀರ್‌ನೆ ಹವಮಾನದಲ್ಲಿ ಏರುಪೇರು ಉಂಟಾಗಿ ಜಿಲ್ಲಾದ್ಯಂತ ಮೂಡಕವಿದ ವಾತಾವರಣ ನಿರ್ಮಾಣವಾಗಿ ಚಳಿಯ ಅಬ್ಬರಕ್ಕೆ ಇಡೀ ಜಿಲ್ಲೆ ಜನ ಜೀವನ ನಡುಗುತ್ತಿದೆ. ಜಿಲ್ಲೆಯ ತಾಪಮಾನ 17 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.
ಚಿಕ್ಕಬಳ್ಳಾಪುರ (ಡಿ.10): ಬಂಗಾಳ ಕೊಲ್ಲಿಯಲ್ಲಿ ಉಲ್ಬಣಿಸಿರುವ ಮಾಂಡಸ್ ಚಂಡಮಾರುತ ಪರಿಣಾಮ ಜಿಲ್ಲೆಗೂ ತಟ್ಟಿದ್ದು ದಿಡೀರ್‌ನೆ ಹವಮಾನದಲ್ಲಿ ಏರುಪೇರು ಉಂಟಾಗಿ ಜಿಲ್ಲಾದ್ಯಂತ ಮೂಡಕವಿದ ವಾತಾವರಣ ನಿರ್ಮಾಣವಾಗಿ ಚಳಿಯ ಅಬ್ಬರಕ್ಕೆ ಇಡೀ ಜಿಲ್ಲೆ ಜನ ಜೀವನ ನಡುಗುತ್ತಿದೆ. ಜಿಲ್ಲೆಯ ತಾಪಮಾನ 17 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.
ಮೊದಲೇ ಅಕ್ಟೋಬರ್, ನವೆಂಬರ್ ಸೇರಿ ವರ್ಷವೀಡಿ ಮಳೆರಾಯನ (Rain ) ಅರ್ಭಟದಿಂದ ಸಾರ್ವಜನಿಕರು ಸಾಕಷ್ಟು ಆಸ್ತಿಪಾಸ್ತಿ ಕಳೆದುಕೊಂಡಿದ್ದು ಅದರಲ್ಲೂ ರೈತರು (Farmers) ಅಪಾರ ಪ್ರಮಾಣದಲ್ಲಿ ವಾಣಜ್ಯ ಬೆಳೆಗಳನ್ನು ಕಳೆದುಕೊಂಡು ನಷ್ಠಕ್ಕೆ ಒಳಾಗಿರುವಾಗಲೇ ಜಿಲ್ಲೆಯಲ್ಲಿ ಇದೀಗ ಮಾಂಡಸ್ ಚಂಡಮಾರುತ ಅಬ್ಬರಿಸುತ್ತಿದೆ.
ರಾಜ್ಯದಲ್ಲಿ 4-5 ದಿನ ಮಳೆ ಸಾಧ್ಯತೆ
ರಾಜ್ಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರಣ ರಾಜ್ಯದಲ್ಲಿ ನಾಲ್ಕೈದು ದಿನಗಳ ಕಾಲ ಮಳೆ ಆಗುವ ಸಾಧ್ಯತೆ ಇದ್ದು ಸದ್ಯ ಜಿಲ್ಲೆಯಲ್ಲಿ ಶುಕ್ರವಾರ ಮೂಡ ಕವಿದು ಅಲ್ಲಲ್ಲಿ ತುಂತರು ಮಳೆಯ ದರ್ಶನವಾಗಿದ್ದು ರೈತಾಪಿ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿಂದೆ ಜಿಲ್ಲೆಯಲ್ಲಿ ಮಳೆ ಜೊತೆಗೆ ಸೈಕ್ಲೋನ್ ಮಳೆಯಿಂದಾಗಿಯೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆಗಳನ್ನು ರೈತರು ಕಳೆದುಕೊಂಡಿದ್ದಾರೆ.
ಈಗ ಹಲವಡೆ ಹೂ, ಹಣ್ಣು ಸೇರಿದಂತೆ ಹಲವು ಬಿತ್ತಿದ ಬೆಳೆಗಳು ಫಸಲು ಕೊಟ್ಟು ಕೋಯ್ಲಿಗೆ ಬಂದಿದೆ. ಈ ಸಂದರ್ಭದಲ್ಲಿ ಚಂಡಮಾರುತದ ಪರಿಣಾಮ ನಿರಂತರ ಮಳೆ ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರನ್ನು ಕಾಡಲಿದೆ. ಜೊತೆಗೆ ಅವರೆ, ತೊಗರಿ, ರಾಗಿ ಬೆಳೆಗಳು ನಿರಂತರ ಮಳೆಯಾದರೆ ಹಲವು ರೋಗರುಜನಗಳಿಗೆ ತುತ್ತಾಗುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದು, ಚಂಡಮಾರುತದ ಪರಿಣಾಮದ ದಿನನಿತ್ಯದ ಹಲವು ಕೃಷಿ ಚಟುವಟಿಕೆಗಳಿಗೂ ಕೂಡ ಅಡ್ಡಿಪಡಿಸುತ್ತಿದ್ದು, ಹೂ, ಹಣ್ಣು, ತರಕಾರಿ ಮತ್ತಿತರ ಬೆಳೆಗಳನ್ನು ರೈತರು ಕೊಯ್ಲು ಮಾಡಿ ಮಾರುಕಟ್ಟೆತರುವುದು ಕಷ್ಟವಾಗುತ್ತಿದೆ.
ಚಳಿಯ ತೀವ್ರತೆ ಜೋರು:
ಮಳೆಗಾಲದಲ್ಲಿ ಸಾಕಷ್ಟುಏರಿಗತಿಯಲ್ಲಿ ಇರುತ್ತಿದ್ದ ಜಿಲ್ಲೆಯ ಉಷ್ಕಾಂಶ ಸದ್ಯ ಚಂಡಮಾರುತದ ಪರಿಣಾಮ ಇಳಿಮುಖ ಕಂಡಿದ್ದು ಚಳಿಯ ತೀವ್ರತೆ ಜಿಲ್ಲೆಯ ಜನರನ್ನು ನಡುಗಿಸುತ್ತಿದೆ. ಶಾಲೆಗೆ ತೆರಳುವ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು, ಅದರಲ್ಲೂ ಹಿರಿಯ ನಾಗರಿಕರು ಮಾಂಡಸ್ ಚಂಡಮಾರುತದ ಪರಿಣಾಮ ಸಾಕಷ್ಟುಪರಿಣಾಮ ಬೀರಿದ್ದು
ಆಲೂ ಬಿತ್ತನೆಗೆ ಮಾಂಡಸ್ ಅಡ್ಡಿ
ಜಿಲ್ಲೆಯಲ್ಲಿ ಸದ್ಯ ಆಲೂಗಡ್ಡೆ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು ಬಿತ್ತನೆ ಕಾರ್ಯಕ್ಕೆ ಹದ ಸಿಗದೇ ಮಾಂಡಸ್ ಚಂಡಮಾರುತ ಅಡ್ಡಿಪಡಿಸುತ್ತಿದೆ. ಬಿತ್ತನೆಗೆ ಸಜ್ಜಾಗಿರುವ ರೈತರಿಗೆ ಮಳೆ ಬಿಡುವು ಕೊಡುವ ಲಕ್ಷಣ ಸದ್ಯಕ್ಕೆ ಅಂತೂ ಕಾಣುತ್ತಿಲ್ಲ. ಈಗಾಗಿ ಲಕ್ಷಾಂತರ ರು, ವೆಚ್ಚ ಮಾಡಿ ಬಿತ್ತನೆ ಕಾರ್ಯಕ್ಕೆ ಸಜ್ಜಾಗಿರುವ ಆಲೂಗಡ್ಡೆ ಬಿತ್ತನೆಗಾರರು ಚಂಡಮಾರುತ ಮುಗಿಯುವುದು ಯಾವಾಗಪ್ಪ ಎನ್ನುತ್ತಿದ್ದಾರೆ. ಚಿಕ್ಕಬಳ್ಳಾಪುರ, ಶಿಡ್ಲ ಘಟ್ಟ, ಚಿಂತಾಮಣಿ ತಾಲೂಕುಗಳಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ.
ಕೋಲಾರದಲ್ಲಿ ಚಂಡುಮಾರುತದ ಪ್ರಭಾವದಿಂದ ತುಂತುರು ಮಳೆ
ಕೋಲಾರ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶುಕ್ರವಾರ ತುಂತುರು ಮಳೆಯಾಗಿದ್ದು, ಇಡೀ ದಿನ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಗಾಳಿಯೂ ಹೆಚ್ಚಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ದಿನವಿಡೀ ಧೂಳಿನ ಸಮಸ್ಯೆ ಎದುರಿಸಬೇಕಾಯಿತು. ಜೊತೆಗೆ ಉಷ್ಣಾಂಶ ಇಳಿಕೆಯಾಗಿದ್ದು, ಚಳಿಯೂ ಹೆಚ್ಚಾಗಿತ್ತು. ರಾಗಿ ಕೊಯ್ದು, ಹುಲ್ಲು ಬವಣೆ ಮಾಡುವ ಸಮಯ ಇದಾಗಿದ್ದು, ಮಳೆಯಿಂದ ರೈತರಲ್ಲಿ ಆತಂಕ ಶುರುವಾಗಿದೆ. ಹಲವೆಡೆ ಜಮೀನಿಗಳಲ್ಲಿ ಹುಲ್ಲು ಮೆದೆ ಜೋಡಿಸಿಟ್ಟಿದ್ದಾರೆ. ಜಿಲ್ಲೆಯಲ್ಲಿ ಈ ತಿಂಗಳ ಅಂತ್ಯದವರೆಗೆ ರಾಗಿ ಕೊಯ್ಲು ಇರಲಿದೆ. ಮಳೆಯ ಕಾರಣ ಈ ಬಾರಿ ರಾಗಿ ಬಿತ್ತನೆ ತಡವಾಗಿತ್ತು. ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಚಂಡಮಾರುತ ಪರಿಣಾಮ ಡಿ.13ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಿಲ್ಲೆಯಲ್ಲಿ ಈಗಾಗಲೇ ಯೆಲ್ಲೋ ಅಲರ್ಚ್ ಘೋಷಿಸಲಾಗಿದೆ.