Asianet Suvarna News Asianet Suvarna News

ಪೌರತ್ವ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಟ್ಟಿದ್ದು ಯಾಕೆ? ಇಲ್ಲಿದೆ ಸಿಎಎ ಅರ್ಜಿ ಸಲ್ಲಿಕೆ ವಿವರ!

ಕೇಂದ್ರ ಗೃಹ ಸಚಿವಾಲಯ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಈ ಕಾಯ್ದೆಯಲ್ಲಿ ಏನಿದೆ? ಮುಸ್ಲಿಮರನ್ನು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಹೊರಗಿಟ್ಟಿದ್ದೇಕೆ? ಇಲ್ಲಿದೆ ಸಂಪೂರ್ಣ ವಿವರ.

What is citizenship amendment act why Muslims not included how to apply details here ckm
Author
First Published Mar 11, 2024, 7:19 PM IST

ನವದೆಹಲಿ(ಮಾ.11) ಬಿಜೆಪಿ ಸರ್ಕಾರ ತನ್ನ ಅತೀ ದೊಡ್ಡ ಭರವಸೆಯಲ್ಲಿ ಒಂದಾದ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ನಿಯಮಗಳು ಅನ್ವಯವಾಗಲಿದೆ. ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಈ ಕಾಯ್ದೆ ಬರೋಬ್ಬರಿ 4 ವರ್ಷಗಳ ಬಳಿಕ ಜಾರಿಗೆ ಬರುತ್ತಿದೆ. 2019 ಡಿಸೆಂಬರ್ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಸಂಸತ್ತಿನ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಂಗೀಕಾರಗೊಂಡಿದೆ. ಇದೀಗ ನಿಯಮವಾಗಿ ಜಾರಿಗೆ ಬರುತ್ತಿದೆ.

ಇದೀಗ ಸಿಎಎ ಜಾರಿಯಿಂದ ಇದೀಗ ಭಾರತಕ್ಕೆ ವಲಸೆ ಬಂದು ನೆಲೆಸಿರುವ ಮುಸ್ಲಿಮೇತರರಿಗೆ ಪೌರತ್ವಕ್ಕೆ ಅರ್ಜಿ ಹಾಕಲು ಸಾಧ್ಯವಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಈ ಕಾಯ್ದೆಗೆ ಭಾರಿ ವಿರೋಧಗಳು ವ್ಯಕ್ತವಾಗಿತ್ತು. ಈ ಮೂರು ಮುಸ್ಲಿಮ್ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದು ನೆಲೆಸಿರುವ ಹಿಂದೂ, ಸಿಖ್, ಕ್ರಿಶ್ಚಿಯನ್, ಬುದ್ಧ, ಜೈನ  ಹಾಗೂ ಪಾರ್ಸಿ ಸಮುದಾಯದ ವ್ಯಕ್ತಿಗಳಿಗೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ 2014ರ ಡಿಸೆಂಬರ್ 31ಕ್ಕಿಂತ ಮೊದಲು ಭಾರತಕ್ಕೆ ಬಂದು ನೆಲೆಸಿದವರು ಭಾರತದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. 

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಮುಸ್ಲಿಮರನ್ನು ಈ ಕಾಯ್ದೆಯಿಂದ ಹೊರಗಿಟ್ಟಿದ್ದೇಕೆ?
ಕೇಂದ್ರ ಬಿಜೆಪಿ ಸರ್ಕಾರ ಸಿಎಎ ಕಾಯ್ದೆ ಮಂಡಿಸಿದ ಬೆನ್ನಲ್ಲೇ ಭಾರಿ ಪ್ರತಿಭಟನೆಗಳು ವ್ಯಕ್ತವಾಗಿತ್ತು. ವಿಪಕ್ಷಗಳು ಪ್ರಮುಖವಾಗಿ ಇದು ಮುಸ್ಲಿಮ್ ವಿರೋಧಿ ಕಾಯ್ದೆ ಎಂದು ಪ್ರತಿಭಟನೆ ಮಾಡಿತ್ತು. ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ಮುಸ್ಲಿಮ್ ರಾಷ್ಟ್ರಗಳು. ಈ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಬುದ್ಧ, ಜೈನ, ಕ್ರಿಶ್ಚಿಯನ್ ಹಾಗೂ ಪಾರ್ಸಿ ಸಮುದಾಯದ ಜನ ತಮ್ಮ ತಮ್ಮ ದೇಶದಲ್ಲಿ ನಡೆದ ನರಮೇಧ ಜೀವ ಉಳಿಸಿಕೊಳ್ಳಲು ಭಾರತಕ್ಕೆ ಬಂದು ನೆಲೆಸಿದವರಿಗೆ ಭಾರತದ ಪೌರತ್ವಕ್ಕೆ ಅರ್ಜಿ ಹಾಕಬಹುದು. ಮುಸ್ಲಿಮ್ ರಾಷ್ಟ್ರದಲ್ಲಿ ಬಹುಸಂಖ್ಯಾ ಮುಸ್ಲಿಮರು ವಲಸೆ ಬರುವ ಪ್ರಮೇಯ ಉದ್ಭವವಾಗುದಿಲ್ಲ. ಮುಸ್ಲಿಮ್ ರಾಷ್ಟ್ರದಲ್ಲಿ ಮುಸ್ಲಿಮರು ಅನ್ನೋ ಕಾರಣಕ್ಕೆ ಶೋಷಣೆ ನಡೆದ ಘಟನೆಗಳು ತೀರಾ ವಿರಳ. ಇತರ ಕಾರಣಗಳಿಂದ ಭಾರತಕ್ಕೆ ವಲಸೆ ಬಂದು ನೆಲೆಸಿದ್ದರೆ, ಅವರು ಸಿಎಎ ಅಡಿಯಲ್ಲಿ ಪೌರತ್ವ ಪಡೆಯಲು ಅರ್ಹರಲ್ಲ. 

ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮೇತರರು 2014 ಡಿಸೆಂಬರ್ 31ಕ್ಕಿಂತ ಮೊದಲು ಭಾರತಕ್ಕೆ ಬಂದಿರಬೇಕು. ಕನಿಷ್ಠ 6 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿರಬೇಕು. ಇನ್ನು ಈ ಮೂರು ದೇಶಗಳನ್ನು ಹೊರತುಪಡಿಸಿ ಇತರ ದೇಶದಿಂದ ವಲಸೆ ಬಂದ ಭಾರತದಲ್ಲಿ ನೆಲೆಸಿದವರು ಭಾರತದ ಪೌರತ್ವ ಪಡೆಯಲು ಕನಿಷ್ಠ 11 ವರ್ಷ ಇಲ್ಲಿ ನೆಲೆಸಿರಬೇಕು. ಕೇಂದ್ರ ಗೃಹ ಸಚಿವಾಲಯ ಮಾಹಿತಿ ಪ್ರಕಾರ, ವಲಸೆ ಬಂದು ಭಾರತದಲ್ಲಿ ನೆಲೆಸಿದ ಸದ್ಯ 31,313 ಮಂದಿ ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. 

Breaking:ಮಿಷನ್‌ ದಿವ್ಯಾಸ್ತ್ರ ಯಶಸ್ಸು ಘೋಷಿಸಿದ ಪ್ರಧಾನಿ ಮೋದಿ

ಸಿಎಎ ಅಡಿಯಲ್ಲಿ ಪೌರತ್ವ ಅರ್ಜಿ ಸಲ್ಲಿಕೆ ಸಂಪೂರ್ಣ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ವಲಸೆ ಬಂದ ಮುಸ್ಲಿಮೇತರರು ಯಾವ ವರ್ಷ ಭಾರತಕ್ಕೆ ಬಂದಿದ್ದಾರೆ ಅನ್ನೋ ದಾಖಲೆಯನ್ನು ಸಲ್ಲಿಸಬೇಕು. ಜೊತೆಗೆ ಮೊಬೈಲ್ ನಂಬರ್ ನಮೂದಿಸಬೇಕು. 

ಸಿಎಎ ಕಾಯ್ದೆಯಿಂದ ಭಾರತದ ಮುಸ್ಲಿಮರು ಅಥವಾ ಇತರ ಸಮುದಾಯಕ್ಕೆ ಆತಂಕವಿದೆಯಾ?
ಸಿಎಎ ಕಾಯ್ದೆ ಕೇವಲ ಮೂರು ರಾಷ್ಟ್ರಗಳಿಂದ ಅಲ್ಪಸಂಖ್ಯಾತರು ಅನ್ನೋ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಬಂದ ಅರ್ಹರಿಗೆ ಪೌರತ್ವ ನೀಡುವುದಾಗಿದೆ. ಭಾರತದ ಮುಸ್ಲಿಮರಿಗಾಗಲಿ, ಅಥವಾ ಇನ್ಯಾವುದೇ ಸಮುದಾಯದ ನಾಗರೀಕರ ಪೌರತ್ವಕ್ಕೆ ಧಕ್ಕೆ ಇಲ್ಲ. 
 

Follow Us:
Download App:
  • android
  • ios