Asianet Suvarna News Asianet Suvarna News

ಬಾಯ್‌ಫ್ರೆಂಡ್‌ನಿಂದಲೇ ಪೂನಂ ಪಾಂಡೆ ಬಾತ್ ರೂಂ ವಿಡಿಯೋ ಲೀಕ್, ಕ್ಷಮಿಸಲ್ಲ ಎಂದ ನಟಿ!

ಕ್ಯಾನ್ಸರ್‌ನಿಂದ ಸಾವು ಎಂದು ಸುದ್ದಿ ಹಬ್ಬಿಸಿ ಪ್ರಚಾರ ಪಡೆದ ಪೂನಂ ಪಾಂಡೆಯ ಬಾತ್ ರೂಂ ವಿಡಿಯೋ ಸಂಚಲನ ಸೃಷ್ಟಿಸಿದೆ.  ಮಾಜಿ ಬಾಯ್‌ಫ್ರೆಂಡ್ ಪೂನಂ ಪಾಂಡೆ ಬಾತ್ ರೂಂ ವಿಡಿಯೋ ಲೀಕ್ ಮಾಡಿ ಮಜಾ ತಗೊಂಡಿದ್ದಾನೆ. ಈ ಘಟನೆ ಕುರಿತು ಪೂನಂ ಪಾಂಡೆ ಪ್ರತಿಕ್ರಿಯಿಸಿದ್ದಾರೆ.
 

Ex boyfriend leaks Poonam Pandey Bath room Video year back Model reveals shocking Incident ckm
Author
First Published May 17, 2024, 3:15 PM IST

ಮುಂಬೈ(ಮೇ.17) ಮಾಡೆಲ್ ಕಮ್ ನಟಿ ಪೂನಂ ಪಾಂಡೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಗೆ ಕ್ಯಾನ್ಸರ್‌ನಿಂದ ಮೃತಪಟ್ಟಿರುವುದಾಗಿ ಸುದ್ದಿ ಹರಡಿಸಿ ಪ್ರಚಾರ ಪಡೆದ ಪೂನಂ ಪಾಂಡೆ ಅಷ್ಟೇ ಟೀಕೆಗೆ ಗುರಿಯಾದ್ದರು. ಇದೀಗ ಪೂನಂ ಪಾಂಡೆ ಬಾತ್ ರೂಂ ವಿಡಿಯೋ ಮತ್ತೆ ಕೋಲಾಹಲ ಸೃಷ್ಟಿಸಿದೆ. ಪೂನಂ ಬಾತ್ ರೂಂ ವಿಡಿಯೋ ಲೀಕ್ ಮಾಡಿದ್ದ ಬೇರೆ ಯಾರು ಅಲ್ಲ, ಪೂನಂ ಮಾಜಿ ಬಾಯ್‌ಫ್ರೆಂಡ್. ಈ ಕರಾಳ ಘಟನೆ ಕುರಿತು ಪೂನಂ ನೋವು ತೋಡಿಕೊಂಡಿದ್ದಾರೆ. ನಾನು ಎಂದಿಗೂ ಬಾತ್ ರೂಂ ವಿಡಿಯೋ ಘಟನೆ ಮರೆಯಲ್ಲ ಎಂದಿದ್ದಾರೆ.

ವರ್ಷಗಳ ಹಿಂದೆ ಪೂನಂ ಪಾಂಡ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿತ್ತು. ಪೂನಂ ಪಾಂಡೆ  ಬಾತ್‌ರೂಂನಲ್ಲಿ   ಚಿತ್ರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿತ್ತು. ಪೂನಂ ಪಾಂಡೆ ಡ್ರೆಸ್ ಕಳಚಿಟ್ಟು ಶವರ್ ಮೂಲಕ ಸ್ನಾನ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಶವರ್ ನೀರಿನಲ್ಲಿ ಡ್ಯಾನ್ಸ್ ಮಾಡುತ್ತಾ, ಮಾದಕ ನೋಟ ಬೀರಿದ್ದಳು. ಪೂನಂ ಪಾಂಡೆಯ ನಗ್ನ ಸೌಂದರ್ಯ ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿತ್ತು.

ಮೇಲಿಂದೆಲ್ಲಾ ತೋರಿಸ್ತಿರೋದು ಓಕೆ... ಪದೇ ಪದೇ ಕೈ ಅಲ್ಲಿ ಹೋಗ್ತಿರೋದ್ಯಾಕೆ ಎಂದು ಪೂನಂಗೆ ಕೇಳಿದ ಫ್ಯಾನ್ಸ್​!

ಬೋಲ್ಡ್ ವಿಡಿಯೋ ಮೂಲಕ ಸದಾ ಬಿಸಿ ಏರಿಸುವ ಪೂನಂ ಪಾಂಡೆಯ ಬಾತ್ ರೂಂ ವಿಡಿಯೋದಲ್ಲಿ(Poonam Pandey) ಖುಲ್ಲಂ ಖುಲ್ಲಾ ಆಗಿದ್ದರು. ಆದರೆ ಪೂನಂಗೆ ಬೆದರಿಸಿ, ಕಿರಿಕುಳ ನೀಡುತ್ತಿದ್ದ ಮಾಜಿ ಬಾಯ್‌ಫ್ರೆಂಡ್ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಈ ಘಟನೆ ಕುರಿತು ಪೂನಂ ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಮಾಜಿ ಗೆಳೆಯನ ಹೆಸರು ಹೇಳಲು ಇಚ್ಚಿಸದ ಪೂನಂ, ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಾಜಿ ಬಾಯ್‌ಫ್ರೆಂಡ್ ಜೊತೆ ಜಗಳ ನಡೆಯುತ್ತಿತ್ತು. ಪ್ರತಿ ವಿಷಯಕ್ಕೂ ಆತ ಕಿರುಕುಳ ನೀಡುತ್ತಿದ್ದ. ಒಂದು ದಿನ ಹಲ್ಲೆ ಮಾಡಿದ್ದ. ಬಳಿಕ ಟ್ರಿಮ್ಮರ್ ಬಳಸಿ ನನ್ನ ಕೂದಲು ಟ್ರಿಮ್ ಮಾಡಲು ಮುಂದಾಗಿದ್ದ. ಕಷ್ಟಪಟ್ಟು ಟ್ರಿಮ್ಮರ್ ಎಳೆದು ರೂಂನಿಂದ ಹೊರಗೋಡಿದೆ. ನೇರವಾಗಿ ಮನೆಗೆ ಬಂದು ತಂದೆಯಲ್ಲಿ ನಡೆದ ಘಟನೆ ವಿವರಿಸಿ ಬಿಕ್ಕಿ ಬಿಕ್ಕಿ ಅತ್ತಿದ್ದೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ಸ್ವಯಂ ರಕ್ಷಣೆಗೆ ನಾನು ಓಡುವ ಭರದಲ್ಲ ನನ್ನ ಫೋನ್ ರೂಂನಲ್ಲೇ ಉಳಿಯಿತು. ತಂದೆ ಬಳಿಕ ನೋವು ತೋಡಿಕೊಂಡ ಬೆನ್ನಲ್ಲೇ ತಂದೆ ಆತನಿಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಬಳಿಕ ನನ್ನಲ್ಲಿ ಫೋನ್ ಮೂಲಕ ಮಾತನಾಡಿದ ಮಾಜಿ ಬಾಯ್‌ಫ್ರೆಂಡ್, ಈಕ್ಷಣದಲ್ಲಿ ಮರಳಿ ಬರದಿದ್ದರೆ ನಿನ್ನ ಫೋನ್‌ನಲ್ಲಿರುವ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದಾನೆ. ಭಯದಿಂದ ನಾನು ಆತನ ಬಳಿ ಹೋಗಲಿಲ್ಲ, ಇಷ್ಟೇ ಅಲ್ಲ ವಿಡಿಯೋ ಲೀಕ್ ಮಾಡುವಷ್ಟ ಕೆಳಮಟ್ಟಕ್ಕೆ ಆತ ಇಳಿಯುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ ಆತ ವಿಡಿಯೋ ಲೀಕ್ ಮಾಡಿಬಿಟ್ಟ ಎಂದು ಪೂನಂ ಪಾಂಡೆ ಸಂದರ್ಶನದಲ್ಲಿ ಹೇಳಿದ್ದಾಳೆ.

ಸತ್ತೆನೆಂದು ಸುದ್ದಿ ಮಾಡಿದ ಬಳಿಕ ಈ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ: ವಿಡಿಯೋ ನೋಡಿ ತರಾಟೆ

ಮಾಜಿ ಬಾಯ್‌ಫ್ರೆಂಡ್ ಗೆಳೆಯರು ಆತನ ಬೆಂಬಲಕ್ಕೆ ನಿಂತಿದ್ದರು. ಹಲವರು ನನಗೆ ಕರೆ ಮಾಡಿ ಕಿರುಕುಳ ನೀಡಲು ಆರಂಭಿಸಿದರು. ಒಂದೆಡೆ ವಿಡಿಯೋ ಲೀಕ್, ಮತ್ತೊಂದೆಡೆ ಮಾನಸಿಕ ಹಿಂಸೆಯಿಂದ ನಾನು ಸಂಕಷ್ಟಕ್ಕೆ ಸಿಲುಕಿದ್ದೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.


 

Latest Videos
Follow Us:
Download App:
  • android
  • ios