Asianet Suvarna News Asianet Suvarna News

Breaking:ಮಿಷನ್‌ ದಿವ್ಯಾಸ್ತ್ರ ಯಶಸ್ಸು ಘೋಷಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಹತ್ವದ ವಿಚಾರ ತಿಳಿಸಿದ್ದು, ನ್ಯೂಕ್ಲಿಯರ್‌ ಸಾಮರ್ಥ್ಯದ ಅಗ್ನಿ-5 ಖಂಡಾಂತರ ಕ್ಷಿಪಣಿಯ 'ಮಿಷನ್‌ ದಿವ್ಯಾಸ್ತ್ರ'ದ ದೊಡ್ಡ ಯಶಸ್ಸನ್ನು ಘೋಷಣೆ ಮಾಡಿದ್ದಾರೆ.

PM Narendra Modi address the nation on DRDO scientists for Mission Divyastra san
Author
First Published Mar 11, 2024, 5:53 PM IST

ನವದೆಹಲಿ (ಮಾ.11):  ಮಿಷನ್ ದಿವ್ಯಾಸ್ತ್ರ ಎಂದು ಕರೆಯಲ್ಪಡುವ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಅಗ್ನಿ-5 ಕ್ಷಿಪಣಿಯ ಮೊಟ್ಟಮೊದಲ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದ್ದಾರೆ. ಪರೀಕ್ಷಾ ಹಾರಾಟದ ವಿಶಿಷ್ಟತೆ ಏನೆಂದರೆ, ಇದು ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನವನ್ನು ಹೊಂದಿದೆ, ಇದು ನಿಖರವಾದ ಮತ್ತು ಉದ್ದೇಶಿತ ದಾಳಿಯನ್ನು ಮಾಡುವ ಸಲುವಾಗಿ ಕ್ಷಿಪಣಿಯು ಬಹು ಮರು-ಪ್ರವೇಶ ವಾಹನಗಳಾಗಿ ವಿಭಜಿಸಬಹುದು ಎಂದು ತಿಳಿಸಲಾಗಿದೆ. ಮಿಷನ್‌ ದಿವ್ಯಾಸ್ತ್ರ ಯೋಜನೆಯ ಡೈರೆಕ್ಟರ್‌ ಮಹಿಳೆಯಾಗಿರುವುದು ವಿಶೇಷವಾಗಿದೆ. ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟದ ಪರೀಕ್ಷೆಯಾದ ಮಿಷನ್ ದಿವ್ಯಾಸ್ತ್ರಕ್ಕಾಗಿ ನಮ್ಮ ಡಿಆರ್‌ಡಿಓ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಪೋಸ್ಟ್‌ ಮಾಡಿದ್ದಾರೆ.

ಅತ್ಯಂತ ಮಹತ್ವದ ವಿಚಾರ ಏನೆಂದರೆ, ಒಂದೇ ಕ್ಷಿಪಣಿ, ಹಲವು ಸಿಡಿತಲೆಗಳಾಗಿ ರೂಪುಗೊಳ್ಳುವ ಸಾಮರ್ಥ್ಯ ಇದಕ್ಕಿದೆ. ಮಾತ್ರವಲ್ಲದೆ, ಭಿನ್ನ ಸ್ಥಳಗಳಲ್ಲಿರುವ ಗುರಿಯನ್ನು ಟಾರ್ಗೆಟ್‌ ಮಾಡುತ್ತದೆ. ಇದು ಹಿಂದಿನ ಎಲ್ಲಾ ಕ್ಷಿಪಣಿಗಳಿಗಿಂತ ಬಹಳ ಭಿನ್ನ.  ಅಂದಾಜು 7 ಸಾವಿರ ಕಿಲೋಮೀಟರ್‌ವರೆಗಿನ ಟಾರ್ಗೆಟ್‌ಅನ್ನು ಧ್ವಂಸ ಮಾಡುವ ಸಾಮರ್ಥ್ಯ ಇದಕ್ಕಿದೆ. ಅದಲ್ಲದೆ, ಎಂಐಆರ್‌ವಿ ತಂತ್ರಜ್ಞಾನ ಹೊಂದಿರುವುದು ವಿಶೇಷವಾಗಿದೆ.  ಮಿಷನ್ ದಿವ್ಯಾಸ್ತ್ರದ ಪರೀಕ್ಷೆಯೊಂದಿಗೆ, ಭಾರತವು MIRV ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿದೆ.

ಸೈಲೆಂಟ್‌ ಆಗಿ ಎದುರಾಳಿಯ ನೆಲ ಧ್ವಂಸ ಮಾಡಲಿದೆ ಮಾರಕ ದೇಶಿ ಡ್ರೋನ್‌, ಚಿತ್ರದುರ್ಗದಲ್ಲಿ ನಡೆಯಿತು ಪರೀಕ್ಷೆ!

ಈ ವ್ಯವಸ್ಥೆಯು ಸ್ಥಳೀಯ ಏವಿಯಾನಿಕ್ಸ್ ವ್ಯವಸ್ಥೆಗಳು ಮತ್ತು ಹೆಚ್ಚಿನ ನಿಖರತೆಯ ಸಂವೇದಕ ಪ್ಯಾಕೇಜ್‌ಗಳನ್ನು ಹೊಂದಿದೆ, ಇದು ಮರು-ಪ್ರವೇಶದ ವಾಹನಗಳು ಅಪೇಕ್ಷಿತ ನಿಖರತೆಯೊಳಗೆ ಗುರಿಯ ಬಿಂದುಗಳನ್ನು ತಲುಪಿದೆ ಎಂದು ಖಚಿತಪಡಿಸುತ್ತದೆ.  ಅಗ್ನಿ 5 ಕ್ಷಿಪಣಿಯನ್ನು ಈಗಾಗಲೇ ಸಾಕಷ್ಟು ಬಾರಿ ಪರೀಕ್ಷೆ ಮಾಡಲಾಗಿದೆ. ಆದರೆ, ಎಂಐಆರ್‌ವಿ ತಂತ್ರಜ್ಞಾನದೊಂದಿಗೆ ಈ ಕ್ಷಿಪಣಿಯ ಪರೀಕ್ಷೆ ಮಾಡಿ ಅದರಲ್ಲಿ ಭಾರತ ಯಶಸ್ಸು ಕಂಡಿದೆ.

ಅಗ್ನಿ5 ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು:

* ಅಗ್ನಿ V ಯೋಜನೆಯು ಚೀನಾದ ವಿರುದ್ಧ ಭಾರತದ ಪರಮಾಣು ಪ್ರತಿರೋಧವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬೀಜಿಂಗ್ 12,000-15,000 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ಡಾಂಗ್‌ಫೆಂಗ್ -41 ನಂತಹ ಕ್ಷಿಪಣಿಗಳನ್ನು ಹೊಂದಿದೆ. ಅದಕ್ಕೆ ವಿರುದ್ಧವಾಗಿ ಭಾರತ ಈ ಕ್ಷಿಪಣಿಯನ್ನು ನಿಯೋಜನೆ ಮಾಡಲಿದೆ.

*ಅಗ್ನಿ Vಯು ಚೀನಾದ ಉತ್ತರದ ಭಾಗ ಮತ್ತು ಯುರೋಪ್‌ನ ಕೆಲವು ಪ್ರದೇಶಗಳನ್ನು ಒಳಗೊಂಡಂತೆ ಬಹುತೇಕ ಇಡೀ ಏಷ್ಯಾವನ್ನು ತನ್ನ ವ್ಯಾಪ್ತಿಯ ಅಡಿಯಲ್ಲಿ ತರಬಲ್ಲುದು.

*ಇತ್ತೀಚಿನ ಪರೀಕ್ಷೆಯು ಭಾರತವು ಒಂದೇ ಕ್ಷಿಪಣಿಯೊಂದಿಗೆ ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿತಲೆಗಳನ್ನು ನಿಯೋಜಿಸಬಹುದು. ಪ್ರಸ್ತುತ  ಅಮೆರಿಕ,  ಇಂಗ್ಲೆಂಡ್‌, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಮಾತ್ರ MIRV ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಹೊಂದಿವೆ.

* ಅಗ್ನಿ 1 ರಿಂದ 4 ಕ್ಷಿಪಣಿಗಳು 700 ಕಿ.ಮೀ ನಿಂದ 3,500 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಅವುಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

* ಜೂನ್‌ನಲ್ಲಿ, ಭಾರತದ ಸೇನಾ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಭಾರತವು ಪರಮಾಣು ಸಾಮರ್ಥ್ಯದ ಅಗ್ನಿ-4 ಖಂಡಾಂತರ ಕ್ಷಿಪಣಿಯ ರಾತ್ರಿ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. 

ದೇಶೀಯ ನಿರ್ಮಿತ, ಲೇಸರ್-ನಿರ್ದೇಶಿತ ಟ್ಯಾಂಕ್ ವಿರೋಧಿ ಕ್ಷಿಪಣಿ ಪರೀಕ್ಷೆ ನಡೆಸಿದ DRDO!

ಸುದ್ದಿ ಅಪ್‌ಡೇಟ್‌ ಆಗುತ್ತಿದೆ

Follow Us:
Download App:
  • android
  • ios