ದೇಶದ ಪ್ರತಿಯೊಬ್ಬ ಮಕ್ಕಳು ಇದೊಂದು ಪುಸ್ತಕ ಓದ್ಲೇಬೇಕು ಅಂದ್ರು ಇನ್ಫಿ ನಾರಾಯಣ ಮೂರ್ತಿ, ಆ ಬುಕ್ ಯಾವ್ದು?
ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಡಿದ ಮಾತು ವೈರಲ್ ಆಗಿದೆ. ದೇಶದ ಪ್ರತಿಯೊಬ್ಬ ಮಕ್ಕಳು ಕೂಡ ಆ ಒಂದು ಪುಸ್ತಕವನ್ನು ಓದ್ಲೇಬೇಕು ಎಂದು ಒತ್ತಾಯ ಮಾಡಿದ್ದಾರೆ.
ಬೆಂಗಳೂರು (ಮೇ.17): ಇನ್ಫೋಸಿಸ್ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು ಭಾರತದಲ್ಲಿನ ಪ್ರತಿ ಮಗುವೂ ಓದಲೇಬೇಕಾದ ಒಂದು ಪುಸ್ತಕವನ್ನು ಸಜೆಸ್ಟ್ ಮಾಡಿದ್ದಾರೆ. ಭಾರತದ ಮೇಘಾಲಯದಿಂದ ಕನ್ಯಾಕುಮಾರಿ ಹಾಗೂ ಶ್ರೀನಗರದಿಂದ ಜಾಮ್‌ನಗರದವರೆಗಿನ ಎಲ್ಲಾ ಮಕ್ಕಳು ಅದೊಂದು ಪುಸ್ತಕವನ್ನು ಕಡ್ಡಾಯವಾಗಿ ಓದಲೇಬೇಕು ಎಂದು ಹೇಳಿದ್ದಾರೆ. ನಾರಾಯಣಮೂರ್ತಿ ಅವರು ಹೇಳಿರುವ ಆ ಪುಸ್ತಕದ ಹೆಸರು ಪಾಲ್ ಜಿ ಹೆವಿಟ್ ಬರೆದ "ಕಾನ್ಸೆಪ್ಚುವಲ್ ಫಿಸಿಕ್ಸ್". ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ 77 ವರ್ಷದ ಕೋಟ್ಯಧಿಪತಿ ಉದ್ಯಮಿ, ಈ ಪುಸ್ತಕವನ್ನು ಅದ್ಭುತ ಎಂದು ಉಲ್ಲೇಖ ಮಾಡಿದ್ದಲ್ಲದೆ, ಲೇಖಕರು ಪುಸ್ತಕವನ್ನು ಎಲ್ಲಾ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಅನುಮತಿ ನೀಡುತ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
"ನಾನು ಈಗ ಕಾನ್ಸೆಪ್ಚುವಲ್ ಫಿಸಿಕ್ಸ್ ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಇದು ಪಾಲ್ ಹೆವಿಟ್ ಎಂಬ ಹೈಸ್ಕೂಲ್ ಶಿಕ್ಷಕನ ಪುಸ್ತಕವಾಗಿದೆ. ಇದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರವನ್ನು ಹೇಗೆ ಕಲಿಸುವುದು ಎಂಬುದರ ಕುರಿತು ಬರೆಯಲಾಗಿದೆ. ಮುಂದಿನ ಬಾರಿ ನಾನು ಆ ಪುಸ್ತಕವನ್ನು ನಿಮಗೆ ತೋರಿಸುತ್ತೇನೆ. ಬಹಳ ಅದ್ಭುತ ಪುಸ್ತಕ. ಭಾರತದ ಎಲ್ಲಾ ಭಾಷೆಗೆ ಇದನ್ನು ಭಾಷಾಂತರ ಮಾಡುವ ನಿಟ್ಟಿನಲ್ಲಿ ನಾವು ಲೇಖಕರಿಂದ ಅನುಮತಿ ಪಡೆಯಬಹುದು ಎಂದು ಭಾವಿಸುತ್ತೇನೆ' ಎಂದು ಮೂರ್ತಿ ಹೇಳಿದ್ದಾರೆ.
ಈ ಪುಸ್ತಕಗಳನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ. ಸಂಕೀರ್ಣವಾದ ವಿಚಾರಗಳು ಹಾಗೂ ಸಲಹೆಗಳನ್ನು ಸಂವಹನ ಮಾಡಲು ಇದು ಅತ್ಯುತ್ತಮ ಮಾರ್ಗ ಎಂದೂ ಅವರು ತಿಳಿಸಿದ್ದಾರೆ.
ನಾವು ಈ ಪುಸ್ತಕವನ್ನು ಭಾರತದ ಎಲ್ಲಾ ಭಾಷೆಗಳಿಗೆ ಅನುವಾದ ಮಾಡಬೇಕು. ಏಕೆಂದರೆ, ಇದು ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹೊಂದಿದೆ. ಸಂಕೀರ್ಣ ವಿಚಾರಗಳನ್ನು ಸಂವಹನ ಮಾಡುವ ಅತ್ಯುತ್ತಮ ವಿಧಾನಗಳಿವೆ. ಮತ್ತು ಮೇಘಾಲಯದಿಂದ ಕನ್ಯಾಕುಮಾರಿಯಿಂದ ಶ್ರೀನಗರದಿಂದ ಜಾಮ್‌ನಗರದಿಂದ ಪ್ರತಿ ಮಗುವೂ ಈ ಪುಸ್ತಕವನ್ನು ಓದಬೇಕು ಎಂದು ನಾನು ಬಯಸುತ್ತೇನೆ. ಈ ರತಿಯ ಪುಸ್ತಕಗಳನ್ನು ನಮ್ಮ ಪಠ್ಯಕ್ರಮದಲ್ಲಿ ಇಟ್ಟದರೆ ಬಹಳ ಉತ್ತಮವಾಗುತ್ತದೆ ಎಂದು ಹೇಳಿದ್ದಾರೆ.
ಕೆಲಸ ಮಾಡದೆಯೂ ಚೀನಾಕ್ಕಿಂತ ಎತ್ತರಕ್ಕೆ ಬೆಳೆಯಬಹುದೆಂಬುದು ಕೆಲವರ ಭಾವನೆ ತಪ್ಪಲ್ಲ: ನಾರಾಯಣಮೂರ್ತಿ
"ಕಾನ್ಸೆಪ್ಚುವಲ್ ಫಿಸಿಕ್ಸ್" ಅನ್ನು ಮೊದಲು 1971 ರಲ್ಲಿ ಪ್ರಕಟಿಸಲಾಗಿತ್ತು. ಕ್ಲಾಸಿಕಲ್ ಮೆಕ್ಯಾನಿಕ್ಸ್‌ನಿಂದ ಆಧುನಿಕ ಭೌತಶಾಸ್ತ್ರದವರೆಗಿನ ತತ್ತ್ವಗಳ ಹೋಲಿಕೆಗಳು ಮತ್ತು ಚಿತ್ರಣಗಳೊಂದಿಗೆ ಓದುಗರನ್ನು ಸಾಕಷ್ಟು ಸೆಳೆದಿದೆ.
ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ನಾರಾಯಣ ಮೂರ್ತಿ!