ಶ್ವಾನಕ್ಕೆ ಪ್ರತಿದಿನ ಮೊಸರನ್ನದ ಭೋಜನ ಶ್ವಾನಕ್ಕೆ ಆಹಾರ ನೀಡಲು ಪ್ರತಿದಿನ ಬರುವ ಮಹಿಳೆ ಪಶ್ಚಿಮ ಬಂಗಾಳದ ರೈಲು ನಿಲ್ದಾಣದಲ್ಲಿರುವ ಶ್ವಾನ
ಕೋಲ್ಕತ್ತಾ(ಏ.25):ಪಶ್ಚಿಮ ಬಂಗಾಲದ ರೈಲ್ವೆ ಸ್ಟೇಷನ್‌ನಲ್ಲಿ ಮಹಿಳೆಯೊಬ್ಬರು ಬೀದಿ ನಾಯಿಯೊಂದಕ್ಕೆ ಮೊಸರನ್ನ ತಿನ್ನಿಸಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಮಹಿಳೆಯ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಂದು ನಿಮಿಷ 36 ಸೆಕೆಂಡುಗಳ ವೀಡಿಯೊ ಇದಾಗಿದ್ದು, ಅನಾಮಧೇಯ ಮಹಿಳೆಯೊಬ್ಬರು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಕುಳಿತು ಸಣ್ಣ ಸಣ್ಣ ತುತ್ತುಗಳನ್ನು ಮಾಡಿ ಶ್ವಾನಕ್ಕೆ ತಮ್ಮ ಕೈಯಿಂದಲೇ ತಿನ್ನಿಸುತ್ತಿದ್ದಾರೆ. ಮಹಿಳೆಯ ಪಕ್ಕದಲ್ಲಿ ಶಾಂತವಾಗಿ ಕುಳಿತ ಬಿಳಿಶ್ವಾನ ಮಹಿಳೆ ಕೊಟ್ಟ ಅನ್ನದ ಉಂಡೆಗಳನ್ನು ತಿನ್ನುತ್ತದೆ. ಏಪ್ರಿಲ್ 24 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊದ ದೃಶ್ಯಾವಳಿಗಳು ಪಶ್ಚಿಮ ಬಂಗಾಳದ ದಮ್ ದಮ್ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ (Dum Dum Cantonment Railway Station) ಕಂಡು ಬಂದಿದ್ದಾಗಿದೆ.
ಈ ಶ್ವಾನದ ಹೆಸರು ಕುತುಶ್ ಎಂಬುದಾಗಿಯೂ ಈ ಶ್ವಾನ ಮೊಸರು ಅನ್ನವನ್ನು ಹೊರತುಪಡಿಸಿ ಬೇರೆ ಏನನ್ನೂ ತಿನ್ನಲು ಬಯಸುವುದಿಲ್ಲ. ಕುತುಶ್‌ಗೆ ಈಗ 5 ವರ್ಷವಾಗಿದ್ದು, ಆಹಾರ ನೀಡುವಾಗ ಹಿನ್ನೆಲೆಯಲ್ಲಿ ಸಂಗೀತ ಕೇಳುತ್ತಿದ್ದಾರೆ ಆತ ಇಷ್ಟಪಡುತ್ತಾನೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳುತ್ತಾಳೆ.
ಅಲ್ಲದೇ ಈ ಶ್ವಾನಕ್ಕ ಆಹಾರ ನೀಡುವ ಸಲುವಾಗಿ ಪ್ರತಿ ದಿನ ಮೂರು ಬಾರಿ ನಿಲ್ದಾಣಕ್ಕೆ ಬರುತ್ತೇನೆ ಎಂದು ಮಹಿಳೆ ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವಿಡಿಯೋ ನೋಡಿದ ಬಳಕೆದಾರರು ಈ ರೈಲ್ವೆ ನಿಲ್ದಾಣವನ್ನು ಗುರುತಿಸಿದರು. ಅಲ್ಲದೇ ಬೀದಿ ನಾಯಿಯೊಂದನ್ನು ಹೀಗೆ ಮುದ್ದಾಗಿ ಸಾಕಿರುವ ಮಹಿಳೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸಾಕಿರುವ ಮಹಿಳೆಯನ್ನು ಹಲವರು ಶ್ಲಾಘಿಸಿದ್ದಾರೆ.
2020ರಲ್ಲಿ ಬಂಗಾಳದ ಮಹಿಳೆಯೊಬ್ಬರು ತಾಯಿ ತನ್ನ ಮಗುವಿಗೆ ಹಾಲುಣಿಸುವಂತೆಯೇ ತನ್ನ ಮನೆಯಲ್ಲಿ ಲಾಂಗುರ್ ಒಂದಕ್ಕೆ ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಪಶ್ಚಿಮ ಬಂಗಾಳದ ಬಿರ್ಭುಮ್ (Birbhum) ಜಿಲ್ಲೆಯ ಮಯೂರೇಶ್ವರದ(Mayureswar) ಚಂದ್ ದಾಸ್ (Chand Das) ಎಂಬುವವರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ (Facebook) ಪೋಸ್ಟ್ ಮಾಡಿದ್ದರು. ಲಂಗೂರ್ ತಾಳ್ಮೆಯಿಂದ ಮೇಜಿನ ಮೇಲೆ ಕುಳಿತಾಗ, ದಾಸ್ ಅವರ ತಾಯಿ ಅದಕ್ಕೆ ದಾಲ್, ಅನ್ನ ಮತ್ತು ತರಕಾರಿಗಳ ಮಿಶ್ರಣವನ್ನು ತಿನ್ನಿಸುತ್ತಿದ್ದರು. ತಾಯಿಯು ತನ್ನ ಮಗುವಿಗೆ ಆಹಾರವನ್ನು ನೀಡುವಂತೆ, ಮಹಿಳೆಯು ಅಕ್ಕಿಯ ಸಣ್ಣ ಉಂಡೆಗಳನ್ನು ಮಾಡಿ ಮತ್ತು ಅವುಗಳನ್ನು ಲಂಗೂರ್‌ಗೆ ತಿನ್ನಿಸುತ್ತಿದ್ದರು.
ಕೆಲದಿನಗಳ ಹಿಂದೆ ಅಮೆರಿಕಾದ (United State) ವರ್ಮೊಂಟ್(Vermont) ನಿವಾಸಿ ಟ್ರೇಸಿ ಫೌಲರ್ (Tracey Fowler)ಎಂಬ ಮಹಿಳೆ ಅಂಗವೈಖಲ್ಯಕ್ಕೊಳಗಾದ ಶ್ವಾನಗಳನ್ನು ದತ್ತು ಪಡೆದು ಅವುಗಳಿಗೆ ಗಾಲಿಯಂತ್ರಗಳನ್ನು ಅಳವಡಿಸುವ ಮೂಲಕ ಅವುಗಳು ಸ್ವ ಸಾಮರ್ಥ್ಯದಿಂದ ನಡೆಯುವಂತೆ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೊದಲ್ಲಿ ವಿಶೇಷ ಸಾಮರ್ಥ್ಯವುಳ್ಳ ನಾಯಿಮರಿಗಳ ಗುಂಪು ತಮ್ಮ ವಿಶಿಷ್ಟ ಗಾಲಿಕುರ್ಚಿಗಳಲ್ಲಿ ಅರಣ್ಯ ಪ್ರದೇಶದಲ್ಲಿ ರೌಂಡ್ ಹಾಕುವುದನ್ನು ಕಾಣಬಹುದು.
ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕಿಳಿದು ಚೆಂಡು ಎತ್ತಿಕೊಂಡು ಹೋದ ಶ್ವಾನ
ವೀಡಿಯೋದಲ್ಲಿ, ನಾಯಿಗಳು ತಮ್ಮ ದೇಹಕ್ಕೆ ಗಾಲಿಕುರ್ಚಿಗಳನ್ನು ಜೋಡಿಸಿಕೊಂಡು ಸಂತೋಷದಿಂದ ಓಡುತ್ತಿರುವುದನ್ನು ಕಾಣಬಹುದು. ಅನೇಕ ನಾಯಿಗಳು ಪಾರ್ಶ್ವವಾಯು ಅಥವಾ ಕೈಕಾಲುಗಳಿಲ್ಲದೇ ಬಳಲುತ್ತಿರುವುದನ್ನು ಕಾಣಬಹುದು. ಆದರೆ ಗಾಲಿಕುರ್ಚಿಗಳಿಂದಾಗಿ ಈ ನಾಯಿಗಳು ಇತರ ಎಲ್ಲಾ ಶ್ವಾನಗಳಂತೆ ಖುಷಿ ಪಡುತ್ತಿರುವುದನ್ನು ನೋಡಬಹುದು. ಈ ವೀಡಿಯೊವನ್ನು ಒಂದು ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾಯಿಮರಿಗಳಿಗೆ ಉತ್ತಮ ಜೀವನವನ್ನು ನೀಡಿದ್ದಕ್ಕಾಗಿ ಟ್ರೇಸಿಯನ್ನು ಶ್ಲಾಘಿಸಿದ್ದಾರೆ.
ಶೋಚನೀಯ ಸ್ಥಿತಿಯಲ್ಲಿದ್ದ ಶ್ವಾನಕ್ಕೆ ನಡೆದಾಡಲು ಕಲಿಸಿದ ಪ್ರೊಫೆಸರ್
ಯುಎಸ್‌ನ ವರ್ಮೊಂಟ್‌ನಿಂದ ಟ್ರೇಸಿ ಫೌಲರ್ ದತ್ತು ಪಡೆದ ಹಲವಾರು ನಾಯಿಗಳನ್ನು ಈ ವೀಡಿಯೊ ಒಳಗೊಂಡಿದೆ. ಫೌಲರ್ ಹರ್ಡ್ ಎಂದು ಕರೆಯಲ್ಪಡುವ ಟ್ರೇಸಿಯ ಈ ಶ್ವಾನ ಕುಟುಂಬವು ಈಗ ಎಂಟು ಸದಸ್ಯರನ್ನು ಒಳಗೊಂಡಿದೆ. ತನ್ನ ಪ್ರೀತಿಯ ಸಾಕುನಾಯಿ ತೀರಿಕೊಂಡ ನಂತರ ಟ್ರೇಸಿ ಈ ವಿಶೇಷ ಅಗತ್ಯವುಳ್ಳ ನಾಯಿಗಳನ್ನು ರಕ್ಷಿಸಲು ಪ್ರಾರಂಭಿಸಿದರು. ಈಗ ಅವರು ಇಂತಹ ಅನೇಕ ಶ್ವಾನಗಳ ಹೆಮ್ಮೆಯ ಅಮ್ಮ ಆಗಿದ್ದಾರೆ.