ಬಿಜೆಪಿ ಸಂಸದನ ಮನೆ ಮೇಲೆ 3 ಬಾಂಬ್ ಎಸೆದ ದುಷ್ಕರ್ಮಿಗಳು , ಟಿಎಂಸಿ ಕೈವಾಡ ಎಂದ ಕೇಸರಿ ಪಡೆ!
- ಬಿಜೆಪಿ ಸಂಸದ ಅರುಣ್ ಸಿಂಗ್ ಮನೆ ಮೇಲೆ ಬಾಂಬ್ ಎಸೆತ
- ಬೈಕ್‌ನಲ್ಲಿ ಬಂದ ಮೂವರಿಂದ ಕೃತ್ಯ
- ಬೆಳಗ್ಗೆ 6.30ಕ್ಕೆ ಘಟನೆ, ಟಿಎಂಸಿ ಕೈವಾಡ ಎಂದ ಬಿಜೆಪಿ
ಕೋಲ್ಕತಾ(ಸೆ.08): ಪಶ್ಚಿಮ ಬಂಗಾಳ ಚುನಾವಣೆ, ಫಲಿತಾಂಶ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಆದರೆ ದೀದಿ ನಾಡಲ್ಲಿ ಹಿಂಸಾಚಾರಕ್ಕೇನು ಕೊರತೆ ಇಲ್ಲ. ಇದೀಗ ಮತ್ತೆ ಬಿಜೆಪಿ ನಾಯಕನ ಮನೆ ಮೇಲೆ ದಾಳಿ ನಡೆದಿದೆ. ಈ ಬಾರಿ ಬಿಜೆಪಿ ಸಂಸದ, ಬಂಗಾಳದ ನಾಯಕ ಅರುಣ್ ಸಿಂಗ್ ಮನೆ ಮೇಲೆ ಮೂರು ಬಾಂಬ್ ಎಸೆದ ಘಟನೆ ನಡೆದಿದೆ.
ಪ. ಬಂಗಾಳ ಹಿಂಸಾಚಾರ: ಸಿಬಿಐ ತನಿಖೆಗೆ ಆದೇಶಿಸಿದ ಹೈಕೋರ್ಟ್, ಮಮತಾಗೆ ಹಿನ್ನಡೆ!
ಕೋಲ್ಕತಾದಿಂದ 100 ಕಿ.ಮೀ ದೂರದಲ್ಲಿನ ಜಗತ್‌ದಲ್ ಸಂಸದ ಅರುಣ್ ಸಿಂಗ್ ಮನೆ ಮೇಲೆ ಇಂದು(ಸೆ.08) ಬೆಳಗ್ಗೆ 6.30ಕ್ಕೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದಾರೆ. ಈ ಬಾಂಬ್ ಸ್ಫೋಟಗೊಂಡಿದೆ . ಆದರೆ ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೈಕ್‌ನಲ್ಲಿ ಬಂದ ಮೂವರು 3 ಬಾಂಬ್ ಎಸೆದು ಪರಾರಿಯಾಗಿದ್ದಾರೆ.
ಈ ಘಟನೆ ಮಮತಾ ಬ್ಯಾನರ್ಜಿ ಸರ್ಕಾರದ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತಿದೆ. ಪದೇ ಪದೆ ಬಿಜೆಪಿ ನಾಯಕರ ಮೇಲೆ, ಮನೆ ಮೇಲೆ, ಕುಟುಂಬದ ಮೇಲೆ ದಾಳಿ ನಡೆಯುತ್ತಿದೆ. ಹಲವು ಬಿಜೆಪಿ ಕಾರ್ಯಕರ್ತರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ.
ಜಡ್ಜ್ ವರ್ಗ ಕೋರಿದ್ದ ಮಮತಾಗೆ ಕೋರ್ಟಿಂದ 5 ಲಕ್ಷ ದಂಡ!
ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿ ಬಾಂಬ್ ಎಸೆಯಲಾಗಿದೆ ಘಟನೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ್ ಜಗದೀಪ್ ದನ್ಕರ್ ಖಂಡಿಸಿದ್ದಾರೆ. ಬಂಗಾಳದಲ್ಲಿ ಮತ್ತೆ ಹಿಂಸಾಚಾರ ಪ್ರಕರಣ ವರದಿಯಾಗಿದೆ. ಬಿಜೆಪಿ ನಾಯಕ ಮನೆ ಮೇಲೆ ಬಾಂಬ್ ಸ್ಫೋಟಿಸಲಾಗಿದೆ. ಇದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಎತ್ತಿತೋರಿಸುತ್ತಿದೆ. ನಿಸ್ಪಕ್ಷಪಾತ ತನಿಖೆಯ ಅಗತ್ಯವಿದೆ. ಕಾರಣ ಮಮತಾ ಸರ್ಕಾರದಲ್ಲಿ ಈಗಾಗಲೇ ಹಲವು ಘಟನೆಗಳು ಸಂಭವಿಸಿದೆ. ಆದರೂ ಸರ್ಕಾರ ತಡೆಯುವ ಕೆಲಸ ಮಾಡಿಲ್ಲ ಎಂದು ದನ್ಕರ್ ಹೇಳಿದ್ದಾರೆ.
ಬಾಂಬ್ ಎಸೆದ ಪ್ರಕರಣವನ್ನು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಖಂಡಿಸಿದ್ದಾರೆ. ಇಷ್ಟೇ ಅಲ್ಲ ಈ ರೀತಿಯ ಗೂಂಡಾವರ್ತನೆ ಮಾಡಲು ಟಿಎಂಸಿಗೆ ಮಾತ್ರ ಸಾಧ್ಯ. ಹೀಗಾಗಿ ದಾಳಿ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ
ಬಂಗಾಳದ ಹಿಂದೂಗಳ ರಕ್ಷಣೆ ಕೋರಿ ಸಲ್ಲಿಸಿದ್ದ PIL ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!.
ಬಾಂಬ್ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನೇರವಾಗಿ ಟಿಎಂಸಿ ಮೇಲೆ ಆರೋಪ ಮಾಡಿದರೆ, ಇದು ಬಿಜೆಪಿ ಕುತಂತ್ರ ಎಂದು ಟಿಎಂಸಿ ತಿರುಗೇಟು ನೀಡಿದೆ.