ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಮುಕುಲ್ ರಾಯ್, ರಾಹುಲ್ ಸಿನ್ಹಾ ಸೇರಿದಂತೆ ಘಟಾನುಘಟಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ.

ನವದೆಹಲಿ(ಮಾ.18): ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಸಂಪೂರ್ಣ ಸಜ್ಜಾಗಿದೆ. ಈ ಬಾರಿ ಆಡಳಿತಾರೂಡ ತೃಣಮೂಲ ಕಾಂಗ್ರೆಸ್ ಮಣಿಸಿ ಅಧಿಕಾರಕ್ಕೇರಲು ಭರ್ಜರಿ ತಯಾರಿ ನಡೆಸಿದೆ. ಇದೀಗ 5, 6 , 7 ಮತ್ತು 8ನೇ ಹಂತದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ.

ಮಮತಾ ವಿರುದ್ಧ ಸುವೆಂದು ಅಧಿಕಾರಿಯ ರಣಕಹಳೆ; ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ!

ಉತ್ತರ ಕೃಷ್ಣನಗರದಿಂದ ಬಂಗಾಳ ಬಿಜೆಪಿ ಉಪಾಧ್ಯಕ್ಷ ಮುಕುಲ್ ರಾಯ್, ಆದ್ರಾ ಕ್ಷೇತ್ರದದಿಂದ ಬಿಜೆಪಿ ಹಿರಿಯ ನಾಯಕ ರಾಹುಲ್ ಸಿನ್ಹಾ ಸ್ಪರ್ಧಿಸಲಿದ್ದಾರೆ. ಒಟ್ಟು 260 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.

Scroll to load tweet…

ಕೋಲ್ಕತಾ ರ‍್ಯಾಲಿಯಲ್ಲಿ ಮೋದಿ ಅಬ್ಬರ; ಬಂಗಾಳ ಜನತೆ ಪ್ರೀತಿಗೆ ಪ್ರಧಾನಿ ಧನ್ಯವಾದ!.

ಆರಂಭಿಕ 4 ಹಂತದ ಚುನಾವಣೆಗೆ ಬಿಜೆಪಿ ಈಗಾಗಲೇ 112 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ 148 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಬಾಬುಲ್ ಸುಪ್ರಿಯೋ, ಲಾಕೆಟ್ ಚಟರ್ಜಿ, ಸ್ವಪನ್ ದಾಸ್‌ಗುಪ್ತಾ, ನಿಸಿತ್ ಪ್ರಮಣಿಕ್ ಸೇರಿದಂತೆ ಬಿಜೆಪಿ ನಾಲ್ವರು ಸಂಸದರು ಈ ಬಾರಿ ಆಖಾಡಕ್ಕಿಳಿದಿದ್ದಾರೆ.