ಕೋಲ್ಕತಾ(ಮಾ.12): ಪಶ್ಚಿಮ ಬಂಗಾಳ ಚುನಾವಣೆ ಕಾವು ಹೆಚ್ಚಾಗಿದೆ. ಅದರಲ್ಲೂ ಶಾಂತವಾಗಿದ್ದ ನಂದಿಗ್ರಾಮ ಇದೀಗ ಕೆರಳಿ ಕೆಂಡವಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಇದೇ ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಚಾರದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ್ದು ಇದೇ ನಂದಿಗ್ರಾಮದಲ್ಲಿ. ಇದೀಗ ಮಮತಾ ವಿರುದ್ಧ ಬಿಜೆಪಿಯಿಂದ ಸುವೆಂದು ಅಧಿಕಾರಿ ಸ್ಪರ್ಧಿಸುತ್ತಿದ್ದಾರೆ. ಇಂದು ಭರ್ಜರಿ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ದೀದಿ ಗಾಯ​ಗೊಂಡಿದ್ದು ಅಪಘಾತದಲ್ಲಿ : ನಿಜವಾಗಿಯೂ ಆಗಿದ್ದೇನು?

ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್ ಜೊತೆ ರೋಡ್ ಶೋ ನಡೆಸಿದ ಸುವೆಂದು ಅಧಿಕಾರಿ, ಬಳಿಕ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ದೀದಿ ಮ್ಯಾಜಿಕ್ ವಿಫಲಗೊಳಿಸಲು ಸುವೆಂದು ರೆಡಿಯಾಗಿದ್ದಾರೆ.

ಟಿಎಂಸಿ ತೊರೆದು ಬಿಜೆಪಿ ಸೇರಿದ ಸುವೆಂದು ಅಧಿಕಾರಿ, ಮಮತಾ ವಿರುದ್ಧವೇ ತೊಡೆ ತಟ್ಟಿದ್ದರು.  ಸುವೆಂದು ಸವಾಲು ಸ್ವೀಕರಿಸಿದ ಮಮತಾ  ನಂದಿಗ್ರಾಮದಿಂದಲೇ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಟಿಎಂಸಿ ಹಾಗೂ ಬಿಜೆಪಿ ಜಿದ್ದಾಜಿದ್ದಿನ ಹೋರಾಟಕ್ಕೆ ಬಿದ್ದಿದೆ.  

ಬಂಗಾಳದಲ್ಲಿ 5 ವರ್ಷದ ಹಿಂದೆ ಬರೀ 3 ಸೀಟು ಗೆದ್ದಿದ್ದ ‘ಕಮಲ’ ಈಗ ಅರಳುತ್ತಿರುವುದು ಹೇಗೆ?.

ಮಮತಾ ಆಸ್ಪತ್ರೆ ದಾಖಲಾಗಲು ಬಿಜೆಪಿ ಕಾರಣ. ಮಮತಾ ಹಲ್ಲೆ ಮೇಲೆ ವ್ಯವಸ್ಥಿತ ಪಿತೂರಿ ನಡೆದಿದೆ. ಉನ್ನತ ಮಟ್ಟದ ತನಿಖೆ ಅಗತ್ಯ ಎಂದು ಟಿಎಂಸಿ ನಾಯಕರು ಇಂದು ರಾಜ್ಯ ಚುನಾವಣಾ ಆಯೋಗವನ್ನು ಭೇಟಿ ಮಾಡಿದೆ.