ಕೋಲ್ಕತಾ(ಮಾ.07): ಪಶ್ಚಿಮ ಬಂಗಾಳದಲ್ಲಿ ಬಿಜಪಿ ಹಾಗೂ ಟಿಎಂಸಿ ಚುನಾವಣಾ ಹೋರಾಟ ತೀವ್ರಗೊಂಡಿದೆ. ಇಂದು(ಮಾ.070 ಬ್ರಿಗೇಡ್ ಪರೇಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಗಾಳದ ಜನತೆ ಬದಲಾವಣೆ ಬಯಸುತ್ತಾರೆ. ಜನರು ನೀಡಿದ ಪ್ರೀತಿ ವಿಶ್ವಾಸಕ್ಕೆ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ಸರ್ಕಾರ ಮೋಸ ಮಾಡಿದೆ ಎಂದಿದ್ದಾರೆ.

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆ

ಬ್ರಿಗೇಡ್ ಚಲೋ ರ‍್ಯಾಲಿಯನ್ನುದ್ದೇಶಿ ಮಾತನಾಡಿದ ಮೋದಿ, ಮುಂದಿನ 25 ವರ್ಷ ಬಂಗಾಳದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರನಿರ್ವಹಿಸಲಿದೆ. ನಿಜವಾದ ಪರಿವರ್ತನೆಗೆ ನಾನು ಇಲ್ಲಿಗೆ ಬಂದಿದ್ದೇನೆ. ಬಂಗಾಳದಲ್ಲಿ ಕೈಗಾರಿಕೆ ಸ್ಥಾಪನೆ, ಹೂಡಿಕೆ, ಮೂಲಭೂತ ಸೌಕರ್ಯ, ಶುಚಿತ್ವ ಸೇರಿದಂತೆ ಅಭಿವೃದ್ಧಿ ಹಾಗೂ ಪುನರ್ ನಿರ್ಮಾಣವಾಗಲಿದೆ. ಇದಕ್ಕಾಗಿ ಬಂಗಾಳ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದು ಮೋದಿ ಹೇಳಿದರು.

 

ಬಂಗಾಳದ ಜನತೆ ಮಮತಾ ಬ್ಯಾನರ್ಜಿ ಮೇಲೆ ನಂಬಿಕೆ ಇಟ್ಟು ಅಧಿಕಾರ ನೀಡಿದರು. ಬಂಗಾಳದ ಅಭಿವೃದ್ಧಿ, ಬಂಗಾಳದಲ್ಲಿ ಪರಿವರ್ತನ ಬಯಸಿದ್ದರು. ಆದರೆ ದೀದಿ ಬಂಗಾಳ ಜನರ ನಂಬಿಕಗೆ ದ್ರೋಹ ಮಾಡಿದ್ದಾರೆ. ಬಂಗಾಳವನ್ನು ಅವಮಾನಿಸಿದ್ದಾರೆ. ಹೀಗಾಗಿ ಅಸೂಲ್ ಪರಿಬರ್ತನ್(ನಿಜವಾದ ಪರಿವರ್ತನೆ)ಗೆ ನಾನಿಲ್ಲಿಗೆ ಬಂದಿದ್ದೇನೆ ಎಂದರು.

ಅಸೂಲ್ ಪರಿಬರ್ತನ್ ಎಂದರೆ ಶಾಂತಿ, ಅಭಿವೃದ್ಧಿ. ಉತ್ತಮ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರದ ಅಭಿವೃದ್ಧಿಯಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ ಎಂದು ಮೋದಿ ಹೇಳಿದರು. ಇನ್ನು ಮಮತಾ ಬ್ಯಾನರ್ಜಿ ವ್ಯಂಗ್ಯವಾಗಿದ ಮೋದಿ, ಭವಾನಿಪುರದಲ್ಲಿ ಸ್ಟಾಪ್ ಮಾಡಬೇಕಿದ್ದ ದೀದಿ ಸ್ಕೂಟಿ ಧೀಡಿರ್ ನಂದಿಗ್ರಾಮಕ್ಕೆ ತಿರುಗಿದೆ ಎಂದು ವ್ಯಂಗ್ಯವಾಡಿದ್ದಾರೆ.

 

ಮಮತಾ ಬ್ಯಾನರ್ಜಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿ ಬಿಟ್ಟು ಉಳಿದೆಲ್ಲಾ ಆಟ ಆಡಿದ್ದೀರಿ. ಭ್ರಷ್ಟಾಚಾರ ಮಾಡಿದ್ದೀರಿ. ಆದರೆ ಈ ಬಾರಿ ಮಮತಾ ಖೇಲ್ ಖತಂ ಆಗಿದೆ. ಅಭಿವೃದ್ಧಿ ಶುರುವಾಗಿದೆ ಎಂದ ಮೋದಿ ಹೇಳಿದರು. ಇನ್ನು ಪ್ರದಾನಿ ನರೇಂದ್ರ ಮೋದಿ ಬಂಗಾಳ ಜನತೆಯ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ. ಈ ಪ್ರೀತಿ, ಜನಸಾಗರವೇ ಹೇಳುತ್ತಿದೆ, ಈ ಬಾರಿ ಬಿಜೆಪಿ ಬಂಗಾಳ ಜನತೆ ಆಯ್ಕೆ ಎಂದು ಮೋದಿ ಹೇಳಿದ್ದಾರೆ.