Asianet Suvarna News Asianet Suvarna News

ವಿಶ್ವಾಸ ಕಳೆದುಕೊಂಡಿರೋ ಮೋದಿ ರಾಜೀನಾಮೆ ನೀಡಲಿ: ದೀದಿ ಆಗ್ರಹ 

ನಾವು ಬಂಗಾಳದಲ್ಲಿ ಬಿಜೆಪಿ ಬೆನ್ನುಮೂಳೆ ಮುರಿದಿದ್ದೇವೆ. ಟಿಡಿಪಿ ಮತ್ತು ಜೆಡಿಎಸ್ (TDP And JDS) ಜೊತೆ ಸಂಬಂಧ ಬೆಳೆಸಲು ಬಿಜೆಪಿ ಮುಂದಾಗಿದೆ. ಬಿಜೆಪಿಯಿಂದಲೇ ಪಶ್ಚಿಮ ಬಂಗಾಳದಲ್ಲಿ 26 ಲಕ್ಷ ಶಿಕ್ಷಕರು ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. 

West Bengal cm Mamata Banerjee demands pm Narendra Modi should resign mrq
Author
First Published Jun 4, 2024, 10:26 PM IST | Last Updated Jun 4, 2024, 10:26 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶದ ಜನತೆಯ ವಿಶ್ವಾಸ ಕಳೆದುಕೊಂಡಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (West Bengal CM Mamata Banerjee)  ಆಗ್ರಹಿಸಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶ (Loksabha Election Results 2024) ಅಂತಿಮ ಹಂತಕ್ಕೆ ಬಂದಿದ್ದ, ಅಂಕಿ ಸಂಖ್ಯೆಗಳು ಸ್ಪಷ್ಟವಾಗುತ್ತಿವೆ. ಇದೀಗ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಬಂಗಾಳದಲ್ಲಿ ಬಿಜೆಪಿ ಬೆನ್ನುಮೂಳೆ ಮುರಿದಿದ್ದೇವೆ. ಟಿಡಿಪಿ ಮತ್ತು ಜೆಡಿಎಸ್ (TDP And JDS) ಜೊತೆ ಸಂಬಂಧ ಬೆಳೆಸಲು ಬಿಜೆಪಿ ಮುಂದಾಗಿದೆ. ಬಿಜೆಪಿಯಿಂದಲೇ ಪಶ್ಚಿಮ ಬಂಗಾಳದಲ್ಲಿ 26 ಲಕ್ಷ ಶಿಕ್ಷಕರು ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. 

3ನೇ ಅವಧಿಯಲ್ಲಿ ದೊಡ್ಡ ನಿರ್ಧಾರ ಜಾರಿ, ಮಹತ್ವದ ಸುಳಿವು ನೀಡಿದ ಪ್ರಧಾನಿ ಮೋದಿ!

ಇದೇ ವೇಳೆ ನಾನು ಐಎನ್‌ಡಿಐಎ ಮೈತ್ರಿಕೂಟದ ಭಾಗ ಎಂದು ಹೇಳಿಕೆ ನೀಡಿರುವ ಮಮತಾ ಬ್ಯಾನರ್ಜಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಜೊತೆ ಮಾತನಾಡಿದ್ದೇನೆ. ನಾಳೆಯ ಐಎನ್‌ಡಿಐಎ ನಾಯಕರ ಸಭೆಯಲ್ಲಿ ಭಾಗಿಯಾಗುತ್ತೇನೆ. ಪ್ರಧಾನಿ ಮೋದಿ ಚುನಾವಣೆ ಪ್ರಚಾರದಲ್ಲಿ ಸಂದೇಶ್ ಖಾಲಿ ಬಗ್ಗೆ ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಗುಡುಗಿದರು. 

ಷೇರು ಮಾರುಕಟ್ಟೆ ನೋಡಿದ್ದೀರಾ?

ನೀವು ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಸಿಬಿಐನ್ನು ನಿಯಂತ್ರಣ ಮಾಡಬಹುದು. ಆದ್ರೆ ಇಂಡಿಯಾ ಬ್ಲಾಕ್ ನಿಮ್ಮನ್ನು ಕೆಳಗೆ ಇಳಿಸುತ್ತದೆ. ಈ ಬಾರಿ ಜನರು ನನ್ನ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು. ನನಗೆ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚು ಅರ್ಥ ಆಗಲ್ಲ. ಆದ್ರೆ ಇಂದು ನೀವು ಷೇರು ಮಾರುಕಟ್ಟೆ ನೋಡಿದ್ದೀರಾ ಎಂದು ಮಾಧ್ಯಮ ಸಿಬ್ಬಂದಿಯನ್ನು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದರು. 

2ರಲ್ಲಿ ಗೆಲುವು, 27 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ

ಸಂಜೆ 6 ಗಂಟೆಯ ಟ್ರೆಂಡ್ ಪ್ರಕಾರ ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ ಟಿಎಂಸಿ 29, ಬಿಜೆಪಿ 19 ಮತ್ತು ಓರ್ವ ಪಕ್ಷೇತರ ಮುನ್ನಡೆಯಲ್ಲಿದ್ದಾರೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಫಲಿತಾಂಶ ಘೋಷಣೆ ಸಹ ಆಗಿದೆ. ಪಶ್ಚಿಮ ಬಂಗಾಳ ಒಂದೇ ರಾಜ್ಯದಲ್ಲಿಯೇ ಏಳು ಹಂತದಲ್ಲಿಯೂ ಮತದಾನ ಆಗಿದೆ.

Latest Videos
Follow Us:
Download App:
  • android
  • ios