3ನೇ ಅವಧಿಯಲ್ಲಿ ದೊಡ್ಡ ನಿರ್ಧಾರ ಜಾರಿ, ಮಹತ್ವದ ಸುಳಿವು ನೀಡಿದ ಪ್ರಧಾನಿ ಮೋದಿ!
ಲೋಕಸಭಾ ಚುನಾವಣೆ ತೀರ್ಪಿನ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಅತೀ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಾಗಿ ಪುನರುಚ್ಚರಿಸಿದ್ದಾರೆ. ಈ ಕುರಿತು ಮಹತ್ವದ ಸುಳಿವು ನೀಡಿದ್ದಾರೆ.
ನವದೆಹಲಿ(ಜೂ.04) ಬಿಜೆಪಿ 370, ಎನ್‌ಡಿಎ 400 ಸ್ಥಾನದ ಗುರಿಯೊಂದಿಗೆ ಕಣಕ್ಕಿಳಿದ ಪ್ರಧಾನಿ ಮೋದಿ ಅತೀ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಚನೆ ನೀಡಿದ್ದರು. ಇದೀಗ ಬಿಜೆಪಿಗೆ ಬಹುಮತ ಬರದಿದ್ದರೂ ಎನ್‌ಡಿಎ ಬಹುಮತ ಪಡೆದುಕೊಂಡಿದೆ. ಗೆಲುವಿನ ಬಳಿಕ ಜನತೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಮೂರನೇ ಅವಧಿಯಲ್ಲಿ ಸರ್ಕಾರ ಅತೀ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದೆ. ಇದು ಮೋದಿ ಗ್ಯಾರೆಂಟಿ ಎಂದು ಮಹತ್ವದ ಸೂಚನೆ ನೀಡಿದ್ದಾರೆ.
ಇಂಡಿಯಾ ಒಕ್ಕೂಟ ಒಟ್ಟಿಗೆ ಸೇರಿ ಬಿಜೆಪಿ ಗೆದ್ದಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಮೋದಿ ಹೇಳಿದ್ದಾರೆ. ಈ ದೇಶದ ಜನತೆಯ ಪ್ರಯಾಸ, ಬೆವರಿನ ಶ್ರಮ ನನಗೆ ಪ್ರೇರಣೆ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ. ನೀವು 10 ಗಂಟೆ ಕೆಲಸ ಮಾಡಿದ್ದರೆ ನಿಮಗಾಗಿ 18 ಗಂಟೆ ಕೆಲಸ ಮಾಡುತ್ತೇನೆ. ನಾವು ಭಾರತೀಯರು ಜೊತೆಯಾಗಿ ಸಾಗೋಣ, ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸೋಣ. ದೊಡ್ಡ ನಿರ್ಧಾರ ಈ ಮೂರನೇ ಅವಧಿಯಲ್ಲಿ ತೆಗೆದುಕೊಳ್ಳಲಿದ್ದೇವೆ. ಇದು ಮೋದಿ ಗ್ಯಾರೆಂಟಿ ಎಂದು ಪ್ರಧಾನಿ ಹೇಳಿದ್ದಾರೆ.
1996ರ ಬಳಿಕ ಮೊದಲ ಬಾರಿಗೆ ಒಂದೇ ಕೂಟಕ್ಕೆ 3ನೇ ಬಾರಿಗೆ ಅಧಿಕಾರ, ಜನತೆಗೆ ಮೋದಿ ಧನ್ಯವಾದ!
25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಹೊರತಂದಿದ್ದೇವೆ. ಇದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಂಖ್ಯೆ ಹೆಚ್ಚಿದೆ. ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಆದ್ಯತೆ, ಬಾಹ್ಯಾಕಾಶ, ಕೈಗಾರಿಕೆ, ಉದ್ಯಮ, ಸ್ಟಾರ್ಟ್‌ಅಪ್‌ಗಳಿಗೆ ನಾವು ನೆರವು ನೀಡಿದ್ದೇವೆ. ಏಮ್ಸ್, ಮೆಡಿಕಲ್ ಸಂಖ್ಯೆಗಳು ದುಪ್ಪಟ್ಟಾಗಿದೆ. ಭಾರತವನ್ನು ವಿಶ್ವದ 2ನೇ ಅತೀ ದೊಡ್ಡ ಮೊಬೈಲ್ ಉತ್ಪಾದನಾ ಕೇಂದ್ರವಾಗಿ ಮಾಡಿದ್ದಾರೆ. ಸೆಮಿಕಂಡಕ್ಟರ್ ಉತ್ಪಾದನೆ ಮಾಡುತ್ತಿದ್ದೇವೆ. ಡಿಫೆನ್ಸ್ ಉತ್ಪಾದನೆ ಮಾಡಿ ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ.
ಯುವ ಸಮೂಹಕ್ಕೆ ಶಿಕ್ಷಣ ಉದ್ಯೋಗ ನೀಡಿ ಎಲ್ಲಾ ಕ್ಷೇತ್ರದಲ್ಲಿ ಅವಕಾಶಗಳನ್ನು ಒದಿಸುತ್ತಿದ್ದೇವೆ. ಕೃಷಿ, ರೈತರಿಗೆ ನೆರವು ನೀಡುವ ಮೂಲಕ ಅವರನ್ನು ಸಮರ್ಥ ಹಾಗೂ ಆತ್ಮನಿರ್ಭರ ಮಾಡುತ್ತೇವೆ ಎಂದಿದ್ದಾರೆ. ನಮ್ಮ ಸರ್ಕಾರ ಪ್ರಗತಿ, ಪ್ರಕೃತಿ ಹಾಗೂ ಸಂಸ್ಕೃತಿಯ ಸಮಾಗಮವಾಗಿದೆ ಎಂದು ಮೋದಿ ಹೇಳಿದ್ದಾರೆ.
ಭಾರತವನ್ನು ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಎನ್‌ಡಿಎ ಸರ್ಕಾರ ಎಲ್ಲಾ ಶಕ್ತಿ ಪ್ರಯೋಗಿಸಿ ಕೆಲಸ ಮಾಡಲಿದೆ. ಕೊರೋನಾ ಸಮಯದಲ್ಲಿ ಭಾರತದ ಲಸಿಕೆ ವಿಶ್ವವನ್ನು ಸಂಕಷ್ಟದಿಂದ ಹೊರತರಲು ಪ್ರಯತ್ನಿಸಿರುವುದನ್ನ ನಾವು ನೋಡಿದ್ದೇವೆ. ಬಾಹ್ಯಕಾಶದಲ್ಲಿ ನಮ್ಮ ಸಾಧನೆ ವಿಶ್ವಕ್ಕೆ ಪ್ರೇರಣೆಯಾಗಿದೆ. ಎನ್‌ಡಿಎ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಲಿದೆ. ಭಾರತ ವಿಶ್ವಬಂಧುವಾಗಿ ಎಲ್ಲಾ ರಾಷ್ಟ್ರಗಳಿಗೆ ಹೆಗಲು ನೀಡಲಿದೆ ಎಂದಿದ್ದಾರೆ.
ಕುಸಿದ ಬಿಜೆಪಿಗೆ ಮತ್ತೊಂದು ಹಿನ್ನಡೆ, ವಾರಣಾಸಿಯಲ್ಲಿ ಮೋದಿ ಗೆದ್ದರೂ ಅಂತರ ಕುಸಿತ!
ಡಿಜಿಟಲ್ ಇಂಡಿಯಾದಿಂದ ಹಲವು ಭ್ರಷ್ಟಾಚಾರ ಅಂತ್ಯಗೊಂಡಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ದಿನದಿಂದ ದಿನಕ್ಕೆ ನಾವು ಕಠಿಣಗೊಳಿಸಿದ್ದೇವೆ. 3ನೇ ಅವಧಿಯಲ್ಲಿ ಎಲ್ಲಾ ರೀತಿಯ ಭ್ರಷ್ಟಾಚಾರ ಅಂತ್ಯಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರಿಗೆ ಪಕ್ಷಕ್ಕಿಂದ ದೇಶ ದೊಡ್ಡದು.