Asianet Suvarna News Asianet Suvarna News

ಮಲ್ಲಿಕಾರ್ಜುನ ಖರ್ಗೆಯವರ 'ಆ' ಮಾತಿಗೆ ಮೇಜು ತಟ್ಟಿದ ಸೋನಿಯಾ ಗಾಂಧಿ

Mallikarjun Kharge And Sonia Gandhi ಬಿಜೆಪಿ ಒಬ್ಬ ವ್ಯಕ್ತಿ ಹೆಸರು ಮತ್ತು ಆತನ ಮುಖವನ್ನು ತೋರಿಸಿ ಮತ ಕೇಳಿತ್ತು. ಈ ಫಲಿತಾಂಶ ಮೋದಿಯವರ ಬಂದಿದೆ ಅನ್ನೋದು ಇಂದಿನ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಹೇಳುತ್ತಿದ್ದಂತೆ ಸೋನಿಯಾ ಗಾಂಧಿ ಮೇಜು ತಟ್ಟಿದರು.

Mallikarjun Kharge says This is Narendra modi s moral and political defeat mrq
Author
First Published Jun 4, 2024, 10:19 PM IST

ನವದೆಹಲಿ: ಐಎನ್‌ಡಿಐ ಬ್ಲಾಕ್ (INDIA Bloc) 200ರ ಗಡಿ ದಾಟಿದ ಹಿನ್ನೆಲೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge), ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಮತ್ತು ಸಂಸದ ರಾಹುಲ್ ಗಾಂಧಿ (MP Rahul Gandhi) ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ ಆರಂಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇಶದ ಜನತೆಗೆ ಧನ್ಯವಾದ ಸಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸಿದರು. ನಂತರ ಇದು ನರೇಂದ್ರ ಮೋದಿ ಸೋಲು ಮತ್ತು ದೇಶದ ಜನರ ಗೆಲುವು ಎಂದು ಹೇಳಿದರು.

ಫಲಿತಾಂಶವನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇವೆ

ದೇಶದ ಚುನಾವಣೆ ಫಲಿತಾಂಶ ಬಂದಿದ್ದು, ಇದು ಜನರ ಮತ್ತು ಪ್ರಜಾಪ್ರಭುತ್ವದ ಗೆಲುವು  ಆಗಿದೆ. ಈ ಚುನಾವನೆ ನರೇಂದ್ರ ಮೋದಿ ವರ್ಸಸ್ ದೇಶದ ಜನರು ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ದೇಶದ ಜನರ ಈ ಫಲಿತಾಂಶವನ್ನು ನಾವು ಅತ್ಯಂತ ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇವೆ. ದೇಶದ ಜನತೆ ಯಾವುದೇ ಪಕ್ಷಕ್ಕೂ ಬಹುಮತ ನೀಡಿಲ್ಲ. ಅಧಿಕಾರದಲ್ಲಿರುವ ಪಕ್ಷಕ್ಕೂ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ. ಬಿಜೆಪಿ ಒಬ್ಬ ವ್ಯಕ್ತಿ ಹೆಸರು ಮತ್ತು ಆತನ ಮುಖವನ್ನು ತೋರಿಸಿ ಮತ ಕೇಳಿತ್ತು. ಈ ಫಲಿತಾಂಶ ಮೋದಿಯವರ ಬಂದಿದೆ ಅನ್ನೋದು ಇಂದಿನ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಹೇಳುತ್ತಿದ್ದಂತೆ ಸೋನಿಯಾ ಗಾಂಧಿ ಮೇಜು ತಟ್ಟಿದರು.

3ನೇ ಅವಧಿಯಲ್ಲಿ ದೊಡ್ಡ ನಿರ್ಧಾರ ಜಾರಿ, ಮಹತ್ವದ ಸುಳಿವು ನೀಡಿದ ಪ್ರಧಾನಿ ಮೋದಿ!

ಇದು ಮೋದಿಯವರ ನೈತಿಕ ಸೋಲು

ಇದು ಅವರ ರಾಜಕೀಯ ಮತ್ತು ನೈತಿಕತೆ ಸೋಲು ಆಗಿದೆ. ಪದೇ ಪದೇ ತಮ್ಮ ಹೆಸರಿನಲ್ಲಿಯೇ ಮತ ಕೇಳುತ್ತಿದ್ದ ಆ ವ್ಯಕ್ತಿಗೆ ಇದು ಅತ್ಯಂತ ದೊಡ್ಡ ಸೋಲು ಆಗಿದೆ. ಒಂದು ರೀತಿ ನೈತಿಕವಾಗಿಯೂ ಸೋತಿದ್ದಾರೆ. ಕಾಂಗ್ರೆಸ್ ಮತ್ತು ನಮ್ಮ ಇಂಡಿಯಾ ಬ್ಲಾಕ್‌ಗೆ ಅಧಿಕಾರದಲ್ಲಿರುವ ಸರ್ಕಾರ ಹಲವು ಅಡೆತಡೆಗಳನ್ನು ಉಂಟು ಮಾಡಿತು. ನಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದರೂ ಕಾಂಗ್ರೆಸ್ ಪ್ರಚಾರ ಸಕಾರಾತ್ಮಕವಾಗಿದ್ದು, ನಿರುದ್ಯೋಗ, ಸಂವಿಧಾನ, ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಿದ್ದೀವಿ. ಇದೇ ವಿಷಯಗಳು ನಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳಾಗಿದ್ದವು. ಮೋದಿ ಅವರಿಗೆ ಮತ್ತೊಂದು ಅವಕಾಶ ನೀಡಿದ್ರೆ ಸಂವಿಧಾನ ಉಳಿಸಲ್ಲ ಎಂಬ ಉದ್ದೇಶದಿಂದ ಮತ ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ನ್ಯಾಯ ಯಾತ್ರೆಯಲ್ಲಿ ಜನರ ಸಮಸ್ಯೆಗಳನ್ನು ಕೇಳುವುದು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಯಾತ್ರೆಯ ಉದ್ದೇಶವಾಗಿತ್ತು. ಈ ಯಾತ್ರೆಯಿಂದ ಸಿಕ್ಕ ಮಾಹಿತಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ತರಲಾಗಿತ್ತು.

ಸ್ಮೃತಿ, ಅಣ್ಣಾಮಲೈ, ಓಮರ್; ಲೋಕ ಕಣದಲ್ಲಿ ಘಟಾನುಘಟಿ ನಾಯಕರಿಗೆ ಸೋಲಿನ ಶಾಕ್, ಇಲ್ಲಿದೆ ಲಿಸ್ಟ್!

ಪಕ್ಷ, ಐಎನ್‌ಡಿಐಎ ಕೂಟಕ್ಕೆ ಖರ್ಗೆ ಧನ್ಯವಾದ

ಇಂದು ಜನತೆ ಯಾರಿಗೂ ಬಹುಮತ ನೀಡಿಲ್ಲ. ಇಂಡಿಯಾ ಒಕ್ಕೂಟದ ಎಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ, ನಮ್ಮ ಹೋರಾಟ ಮುಂದುವರಿಯಲಿದೆ. ಸಂವಿಧಾನ ಉಳಿಸುವಿಕೆ ಮತ್ತು ಗಡಿ ರಕ್ಷಣೆಯ ವಿಚಾರ ಕುರಿತ ನಮ್ಮ ಹೋರಾಟ ಇರಲಿದೆ. ಇದೇ ವೇಳೆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

Latest Videos
Follow Us:
Download App:
  • android
  • ios