ಚೀನಾಗೆ ಖಡಕ್ ವಾರ್ನಿಂಗ್ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!
ಭಾರತ-ಚೀನಾ ಗಡಿ ಬಿಕ್ಕಟ್ಟು ಮಾತುಕತೆ ಮೂಲಕ ಬಗೆ ಹರಿಸಲು ಪ್ರಯತ್ನಗಳು ನಡೆಯುತ್ತಿದೆ. ಆದರೆ ಚೀನಾ ಮಾತುಕತೆ ನಡೆಸಿದ ಬಳಿಕ ನರಿ ಬುದ್ದಿ ತೋರಿಸುತ್ತಿದೆ. ಇದೀಗ ಭಾರತೀಯ ವಾಯು ಸೇನೆ ಮುಖ್ಯಸ್ಥ ಚೀನಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಶ್ರೀನಗರ(ಜೂ.20): ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಮೇಲೆ ಚೀನಾ ದಾಳಿಯಿಂದ ಗಡಿ ಪ್ರದೇಶ ಉದ್ವಿಘ್ನಗೊಂಡಿದೆ. ಮಾತುಕತೆ ಮಾತನಾಡಿದ ಚೀನಾ ತನ್ನ ಆಕ್ರಮಣ ನಿರ್ಧಾರಿಂದ ಹಿಂದೆ ಸರಿದಿಲ್ಲ. ಗಲ್ವಾನ್ ಕಣಿವೆ ಬಳಿಕ ಇದೀಗ ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಕಿರಿಕ್ ಮಾಡುತ್ತಿದೆ. ಚೀನಾ ಉದ್ಧಟತನ ಮುಂದುವರಿಸಿದ ಬೆನ್ನಲ್ಲೇ ಭಾರತೀಯ ವಾಯು ಸೇನೆ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಗಡಿಯಲ್ಲಿ ಹಾರಾಡುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ BSF ಯೋಧರು!...
ಚೀನಾ ಜೊತೆ ಭಾರತ ಯುದ್ಧ ಬಯಸುವುದಿಲ್ಲ. ಆದರೆ ಯಾವುದೇ ಸಂದರ್ಭ ಎದುರಿಸಲು ಭಾರತ ಸಿದ್ಧವಿದೆ. ನಾವು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಶಾಂತಿ ಸ್ಥಾಪಿಸುವುದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಆದ್ಯತೆ. ಆದರೆ ಇದೇ ನಮ್ಮ ಅಂತಿಮ ನಿಲುವಲ್ಲ ಎಂದು ಏರ್ ಚೀಫ್ ಮಾರ್ಶಲ್ ಭದೌರಿಯಾ ವಾರ್ನಿಂಗ್ ನೀಡಿದ್ದಾರೆ
ಲಡಾಖ್‌ನಲ್ಲಿ ಕೆಚ್ಚೆದೆಯ ಹೋರಾಟ ನೀಡಿದ ಬಿಹಾರ್ ರಿಜಿಮೆಂಟ್‌ಗೆ ಮೋದಿ ಸಲಾಂ!..
ಲೇಹ್ ಹಾಗೂ ಶ್ರೀನಗರ ಏರ್‌ಬೇಸ್‌ಗೆ ಬೇಟಿ ನೀಡಿದ ಬಳಿಕ ಭದೌರಿಯಾ ಮಾಧ್ಯಮದ ಜೊತೆ ಮಾತನಾಡಿದರು. ಗಲ್ವಾನ್ ಕಣಿವೆ ಭಾರತೀಯ ಸೇನೆ ನಿಯಂತ್ರಣದಲ್ಲಿದೆ. ಸಂಘರ್ಷದಲ್ಲಿ ಭಾರತೀಯ ಸೇನೆ ದಿಟ್ಟ ಹೋರಾಟ ನೀಡಿದೆ. 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಕೆಲ ಸ್ಥಳಗಳಿಗೆ ಹೆಚ್ಚಿನ ಸೇನೆ ನಿಯೋಜನೆ ಮಾಡಲಾಗಿದೆ. ಇದೀಗ ಯುದ್ಧವಿಮಾನಗಳ ನಿಯೋಜನೆ ಕುರಿತು ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಭದೌರಿಯ ಹೇಳಿದ್ದಾರೆ.
ಭಾರತೀಯ ವಾಯುಸೇನೆ ಯಾವುದೇ ಸಂದರ್ಭ ಎದುರಿಸಲು ಸನ್ನದ್ಧವಾಗಿದೆ. ಅತೀ ಎತ್ತರದ ಪ್ರದೇಶದಲ್ಲೂ ವಾಯುಸೇನೆ ಕಾರ್ಯಚರಣೆ ನಡೆಸಲಿದೆ. ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭದೌರಿಯ ಹೇಳಿದ್ದಾರೆ.