Asianet Suvarna News Asianet Suvarna News

ಲಡಾಖ್‌ನಲ್ಲಿ ಕೆಚ್ಚೆದೆಯ ಹೋರಾಟ ನೀಡಿದ ಬಿಹಾರ್ ರಿಜಿಮೆಂಟ್‌ಗೆ ಮೋದಿ ಸಲಾಂ!

ಬಿಹಾರದಲ್ಲಿ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆಯಲ್ಲಿ ಬಿಹಾರ ಜನತೆಯ ಬಲಿದಾನವನ್ನು ಕೊಂಡಾಡಿದ್ದಾರೆ. ಪ್ರತಿಯೊಬ್ಬ ಬಿಹಾರಿಗೆ ಇದು ಹೆಮ್ಮೆ ಎಂದಿದ್ದಾರೆ. ಪ್ರಧಾನಿ ಮೋದಿ ಮಾತುಗಳ ವಿವರ ಇಲ್ಲಿದೆ.

Every Bihari is proud of Bihar Regiment valour says PM Narendra Modi
Author
Bengaluru, First Published Jun 20, 2020, 3:19 PM IST

ಬಿಹಾರ(ಜೂ.20): ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಬಿಹಾರದಲ್ಲಿ ಚಾಲನೆ ನೀಡಲಾಗಿದೆ. ಮಹತ್ವಾಂಕ್ಷಿ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ ಪ್ರಮುಖವಾಗಿ ಭಾರತೀಯ ಸೇನೆಯ ಬಿಹಾರ್ ರಿಜಿಮೆಂಟ್ ಕುರಿತು ಮಾತನಾಡಿದ್ದಾರೆ. ಲಡಾಖ್‍‌ನಲ್ಲಿ ಚೀನಾ ಸೇನೆ ವಿರುದ್ಧ ಭಾರತಯೀ ಸೇನೆ ದಿಟ್ಟ ಹೋರಾಟ ನೀಡಿದೆ. ಅದರಲ್ಲೂ ಸೇನೆಯ ಬಿಹಾರ್ ರಿಜಿಮೆಂಟ್ ಕೆಚ್ಚೆದೆಯ ಹೋರಾಟಕ್ಕೆ ಸಲಾಂ ಹೇಳಿದ್ದಾರೆ.

"

ಚೀನಾ ಅಡ್ಡಿ ನಡುವೆಯೂ ಗಲ್ವಾನ್‌ ಸೇತುವೆ ಪೂರ್ಣ!..

ಗಲ್ವಾನ್ ಕಣಿವೆಯಲ್ಲಿ ಬಿಹಾರ್ ರಿಜೆಮೆಂಟ್ ಹೋರಾಟ ನೀಡಿತ್ತು. ಭಾರತದ ನೆಲಕ್ಕಾಗಿ ತಮ್ಮ ಪ್ರಾಣ ಲೆಕ್ಕಿಸಿದ ಹೋರಾಟ ಮಾಡಿ ಹುತಾತ್ಮರಾಗಿದ್ದಾರೆ. ಬಿಹಾರ್ ರಿಜಿಮೆಂಟ್ ತ್ಯಾಗ, ಬಲಿದಾನಕ್ಕೆ ನಮ್ಮ ಸಲಾಂ. ಇಷ್ಟೇ ಅಲ್ಲ ಪ್ರತಿಯೊಬ್ಬ ಬಿಹಾರಿ ಕೂಡ ಬಿಹಾರ್ ರಿಜಿಮೆಂಟ್ ಕುರಿತು ಹೆಮ್ಮೆ ಪಡಬೇಕಾದ ವಿಚಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಬಾಯ್ಕಾಟ್‌’ ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ!.

ಕೊರೋನಾ ವೈರಸ್ ವಿರುದ್ಧ ಪ್ರತಿ ಹಳ್ಳಿ ಜನರು ಹೋರಾಟ ಮಾಡಿದ್ದಾರೆ. ಇದು ಇತರರಿಗೂ ಮಾದರಿಯಾಗಿದೆ. ಬಿಹಾರದ ಜನತಗೆ ತಾಳ್ಮೆ ಹಾಗೂ ಸಂಘಟಿತ ಹೋರಾಟಕ್ಕೆ ಧನ್ಯವಾದ. ಈ ವಿಶೇಷ ಗುಣದಿಂದಲೇ ಭಾರತೀಯ ಸೇನೆಯ ಬಿಹಾರ್ ರಿಜಿಮೆಂಟ್ ಕುರಿತು ಬಿಹಾರಿಗಳು ಹೆಮ್ಮ ಪಡಬೇಕು.  ವಿಶೇಷವಾಗಿ ಗರೀಬ್ ಕಲ್ಯಾಣ ರೋಜ್‌ಗಾರ್ ಸಂಕಷ್ಟದಲ್ಲಿ ಜನರಿಗೆ ನೆರವಾಗಿದೆ. ಇದೀಗ ಜನರಿಗೆ ಮತ್ತಷ್ಟು ಆರ್ಥಿಕ ಶಕ್ತಿ ನೀಡಲಿದೆ ಎಂದು ಪ್ರಧಾನಿ ಹೇಳಿದರು. 

Follow Us:
Download App:
  • android
  • ios