Asianet Suvarna News Asianet Suvarna News

ವಯನಾಡು ರೀತಿ ದುರಂತ ತಪ್ಪಿಸಲು ಕ್ರಮ; ಬೀದಿಗೆ ಬಿದ್ದು ಬದುಕು ಅಂತ್ಯಗೊಳಿಸಿದ ಹಿರಿ ಜೀವ!

ವಯನಾನಡಿನ ದುರಂತ ಬಳಿಕ ಪಶ್ಚಿಮ ಘಟ್ಟಗಳ ತಪ್ಪಿನಲ್ಲಿರುವ ಎಲ್ಲಾ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದೆ. ಮತ್ತೊಂದು ಭೂಕುಸಿತ, ಪ್ರವಾಹದಿಂದ ಆಗುವ ದುರಂತ ತಪ್ಪಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಈ ಕುರಿತು ಹೊರಡಿಸಿದ ಆದೇಶದಿಂದ ಹಿರಿಯ ಜೀವಗಳು ಬೀದಿ ಬಿದ್ದು ಬದುಕು ಅಂತ್ಯಗೊಳಿಸಿದ ದಾರುಣ ಘಟನೆ ನಡೆದಿದೆ.

Wayanad witness another tragedy elderly couple found dead after environmental concerns rule ckm
Author
First Published Aug 15, 2024, 11:45 AM IST | Last Updated Aug 15, 2024, 11:45 AM IST

ವಯನಾಡು(ಆ.15) ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದಲ್ಲಿ ಮಡಿದವರ ಸಂಖ್ಯೆ 400 ದಾಟಿದೆ. ಮುಂಡಕೈ, ಚೂರಲ್‌ಮಲ ಸೇರಿದಂತೆ ಹಲವು ಪ್ರದೇಶಗಳ ನಿರ್ನಾಮಗೊಂಡಿದೆ. ಇಲ್ಲಿನ ನಿವಾಸಿಗಳ ಜೀವ ಮಾತ್ರವಲ್ಲ, ಬದುಕು ಕೊಚ್ಚಿಹೋಗಿದೆ. ಈ ರೀತಿಯ ದುರಂತ ತಪ್ಪಿಸಲು ವಯನಾಡು ಜಿಲ್ಲಾಡಳಿತ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಆದರೆ ಈ ಆದೇಶದಿಂದ ವಯನಾಡಿನ ಹಿರಿಯ ದಂಪತಿ ಬೀದಿ ಬಿದ್ದಿದ್ದಾರೆ. ಪರಿಣಾಮ ಇಬ್ಬರು ಹಿರಿಯ ಜೀವಗಳು ಬದುಕನ್ನೇ ಅಂತ್ಯಗೊಳಿಸಿದ ಘಟನೆ ನಡೆದಿದೆ.

ವಯನಾಡಿನ ಅಂಬಲವಾಯಂ ಆಯಿರಂಕೊಲ್ಲಿಯ 82 ವರ್ಷದ ನಿವಾಸಿ ಜೊಸೆಫ್ ಹಾಗೂ ಅವರ ಪತ್ನಿ ಮೇರಿ ದುರಂತ ಅಂತ್ಯಕಂಡಿದ್ದಾರೆ. ಆಯಿರಂಕೊಲ್ಲಿ ಬಳಿ ಜೊಸೆಫ್ 1986ರಿಂದ ಕ್ವಾರಿ ಗ್ರಾನೈಟ್ ಉದ್ಯಮ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಹೊಸ ತಂತ್ರಜ್ಞಾನ, ಮಶಿನ್ ಖರೀದಿಸಲು ಭಾರಿ ಸಾಲ ಮಾಡಿದ್ದಾರೆ. ಉದ್ಯಮ ತಕ್ಕಮಟ್ಟಿಗೆ ಮುನ್ನಡೆಯುತ್ತಿದ್ದ ಕಾರಣ ಹೊಸ ಮಶಿನ್ ಖರೀದಿಸಿದ್ದರು. ಆದರೆ ಇತ್ತೀಚೆಗೆ ವಯನಾಡಿನಲ್ಲಿನ ಪರಿಸರಕ್ಕೆ ಆಗುತ್ತಿರವ ಹಾನಿ ತಪ್ಪಿಸಲು ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಕ್ವಾರಿಗಳಿಗೆ ನಿರ್ಬಂಧ ಹೇರಿದೆ. 

ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!

ಕ್ವಾರಿಗಳಿಂದ ಪರಿಸರಕ್ಕೆ ಅತೀ ಹೆಚ್ಚಿನ ಹಾನಿಯಾಗುತ್ತಿದೆ ಅನ್ನೋ ವೈಜ್ಞಾನಿಕ ವರದಿ ಆಧರಿಸಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿತ್ತು. ವಯಾನಾಡು ದುರಂತಕ್ಕೂ ಕೆಲ ತಿಂಗಳ ಮೊದಲೇ ಈ ನಿರ್ಧಾರ ಘೋಷಣೆಯಾಗಿತ್ತು. ಉದ್ಯಮ ಸ್ಥಗಿತಗೊಂಡ ಕಾರಣ ಮತ್ತಷ್ಟು ಸಾಲದ ಸುಳಿದ ಸಿಲುಕಿದ ಜೊಸೆಫ್ ಹಾಗೂ ಮೇರಿ ತಮ್ಮ ಮೂರು ಏಕರೆ ಜಮೀನು ಹಾಗೂ ಮನೆಯನ್ನು ಮಾರಾಟ ಮಾಡಿದ್ದಾರೆ. ಬಳಿಕ ಕೆಲ ದಿನಗಳ ಕಾಲ ಇಬ್ಬರು ಪುತ್ರಿಯರ ಪೈಕಿ ಓರ್ವ ಮಗಳ ಜೊತೆ ತಂಗಿದ್ದ ಇವರು ಬಳಿಕ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು.

ಕಾರ್ಮಿಕರ ವೇತನ, ಮಶಿನ್ ಖರೀದಿಸಲು ಮಾಡಿದ ಸಾಲದ ಹೊರೆ ಹೆಚ್ಚಾಗಿದೆ. ಅಂಬಲವಾಯಲ್ ಬಸ್ ನಿಲ್ದಾಣದ ಪಕ್ಕದಲ್ಲೇ ಇಬ್ಬರು ಅಸ್ವಸ್ಥರಾಗಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಿಸಿದ್ದಾರೆ. ಆದರೆ ಆಸ್ಪತ್ರೆ ದಾಖಲಿಸುವ ಮೊದಲೇ ಹಿರಿಯ ಜೀವಗಳ ಪ್ರಾಣ ಪಕ್ಷಿ ಹಾರಿದೆ ಹೋಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಚರಣೆ ವೇಳೆ ಅಸ್ವಸ್ಥರಾಗಿ ಬಿದ್ದಿದ್ದ ಸ್ಥಳದಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಇತ್ತ ಮರಣೋತ್ತರ ಪರೀಕ್ಷೆಯಲ್ಲೂ ವಿಷ ಸೇವಿಸಿಸುವುದು ದೃಢಪಟ್ಟಿದೆ.

ಕಣ್ಮುಂದೆಯೇ ಮಗನ ಮೇಲೆ ಕಟ್ಟಡ ಬಿತ್ತು, ಆತನಿಗಾಗಿ 8 ಗಂಟೆ ಹುಡುಕಾಡಿದೆ, ಕೆಸರಿನಲ್ಲಿ ಸಿಲುಕಿದ್ದು ಅವನೇ ಅಂತ ಗೊತ್ತಾಗಲಿಲ್ಲ
 

Latest Videos
Follow Us:
Download App:
  • android
  • ios