ವಯನಾಡು ದುರಂತದ ಸ್ಥಳದಲ್ಲಿ ಕಳೆದ 6 ದಿನಗಳಿಂದ ಮಾಲೀಕನ ಹುಡುಕುತ್ತಿರುವ ನಾಯಿ, ಕೊನೆಗೂ ಮಡಿಲು ಸೇರಿದೆ. ಅನ್ನ ಹಾಕಿದ ಒಡತಿ ಸಿಕ್ಕ ಬೆನ್ನಲ್ಲೇ ನಾಯಿಯ ಸಂಭ್ರಮ ಹೇಳತೀರದು.
ವಯನಾಡು(ಆ.04) ವಯನಾಡು ದುರಂತದ ವೇಳೆ ಮನೆ ಕೊಚ್ಚಿ ಹೋಗಿದೆ. ಮನೆಯ ಸದಸ್ಯರು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಇತ್ತ ನಾಯಿ ಕೂಡ ನಾಪತ್ತೆಯಾಗಿದೆ. ಭೂಕುಸಿತ, ಪ್ರವಾಹದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆಗಳು ಆರಂಭಗೊಂಡಿದೆ. ಇದೀಗ 6ನೇವೂ ಮುಕ್ತಾಯಗೊಂಡಿದೆ. ಇದರ ನಡುವೆ ಕಳೆದ 6 ದಿನಗಳಿಂದ ಮಾಲೀಕನ ಹುಡುಕುತ್ತಿದ್ದ ನಾಯಿ, ಕೊನೆಗೂ ಅನ್ನ ಹಾಕಿದ ಒಡತಿಯನ್ನು ನಾಯಿ ಪತ್ತೆ ಹಚ್ಚಿದೆ. ಈ ಸಂಭ್ರಮ ಹೇಳತೀರದು, ನಾಯಿ ತಬ್ಬಿಕೊಂಡು ಮುದ್ದಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಳೆದ 6 ದಿನಗಳಿಂದ ಈ ನಾಯಿ ದುರಂತ ಸ್ಥಳದಲ್ಲೇ ಬೀಡು ಬಿಟ್ಟಿದೆ. ಕೊಚ್ಚಿ ಹೋಗಿ ಮಣ್ಣು ತುಂಬಿಕೊಂಡಿರುವ ಮನೆ ಜಾಗದಲ್ಲಿ ಮಾಲೀಕನಿಗಾಗಿ ಹುಡುಕಾಡಿದೆ. ಮೇಲಿಂದ ಕೆಳಗೆ ಓಡಾಡಿದೆ. ಆದರೆ ಎಲ್ಲೂ ಪತ್ತೆ ಇಲ್ಲ. ಇನ್ನು ದುರಂತ ಸ್ಥಳದಲ್ಲಿ ಪತ್ತೆಯಾಗ ನಾಯಿ, ಬೆಕ್ಕು, ದನ ಕರುಗಳಿಗೆ ಸ್ವಯಂ ಸೇವಕರು ಆಹಾರ ಒದಗಿಸುತ್ತಿದ್ದಾರೆ.
ವಯನಾಡಿನ ಕಲ್ಲು ಮಣ್ಣು ಅವಶೇಷಗಳಡಿ ಉಸಿರಾಡುತ್ತಿದೆ ಜೀವ, ರೇಡಾರ್‌ನಲ್ಲಿ ನಾಡಿಮಿಡಿತ ಪತ್ತೆ!
ಆದರೆ ಈ ನಾಯಿಗೆ ಮಾಲೀಕನಿಲ್ಲದೆ ಯಾವದು ಸೇರುತ್ತಿರಲಿಲ್ಲ. ಒಂದೆಡೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದರೆ, ಇತ್ತ ಈ ನಾಯಿ ಹಲವು ಬಾರಿ ಅತ್ತಿಂದಿತ್ತ ಓಡಾಡುತ್ತಲೇ ದಿನದೂಡಿದೆ. ಆದರೆ ಅನ್ನ ಹಾಕಿದ ಕುಟುಂಬ ಸದಸ್ಯರ ಸುಳಿವಿಲ್ಲ. ಇತ್ತ ಈ ನಾಯಿ ಮಾಲೀಕರನ್ನು ದುರಂತ ಸ್ಥಳದಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು.
ಕಳೆದ ನಾಲ್ಕು ದಿನ ಕೆಲವೇ ಕೆಲವು ಸ್ಥಳೀಯರಿಗೆ ಮಾತ್ರ ದುರಂತ ಸ್ಥಳಕ್ಕೆ ಪ್ರವೇಶ ನೀಡಲಾಗಿತ್ತು. ಮೃತದೇಹಗಳ ಗುರುತಿಸಲು, ಮನೆ ಇದ್ದ ಜಾಗ ತೋರಿಸಿ ಅಲ್ಲಿ ಶೋಧ ಕಾರ್ಯ ನಡೆಸಲು ಕೆಲವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕಾರ್ಯಾಚರಣೆಗೆ ಅಡ್ಡಿಯಾಗಬಾರದು ಅನ್ನೋ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಮಳೆಯೂ ಕಡಿಮೆಯಾಗಿದೆ. ಬಹುತೇಕ ಕಾರ್ಯಾಚರಣೆ ಮುಗಿದಿದೆ. ಇದೀಗ ನಾಪತ್ತೆಯಾದವರಿಗೆ ಶೋಧ ಕಾರ್ಯ ನಡೆಯುತ್ತಿದೆ.
ನಿಜವಾಯ್ತು ಮಾನಸಿಕ ಅಸ್ವಸ್ಥನ ಭೂಕುಸಿತ ದುರಂತ ಭವಿಷ್ಯ, ವರ್ಷದ ಹಿಂದಿನ ವಿಡಿಯೋ ವೈರಲ್!
ಇತ್ತ ನಾಯಿ ಕೂಡ ದುರಂತ ಸ್ಥಳದಲ್ಲಿನ ಪ್ರದೇಶದಲ್ಲಿ ನೋವಿನಿಂದಲೇ ಹುಡುಕಾಟ ಮುಂದುವರಿಸಿತ್ತು. 6ನೇ ದಿನ ಮನೆ ಸದಸ್ಯರು ದುರಂತ ಸ್ಥಳಕ್ಕೆ ಆಗಮಿಸಿದ್ದಾರೆ. ತಮ್ಮ ಮನೆ ಇದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ದೂರದಲ್ಲಿದ್ದ ನಾಯಿ ಮಾಲೀಕರ ಗುರುತಿಸಿ ಓಡೋಡಿ ಬಂದಿದೆ. ಒಡತಿಯನ್ನು ಮೇಲೆ ಬಿದ್ದು ಮುದ್ದಾಡಿದೆ. ಈ ಹೃದಸ್ಪರ್ಶಿ ವಿಡಿಯೋ ಭಾರಿ ವೈರಲ್ ಆಗಿದೆ.
