ಈತ ಭಾರತೀಯ ಮಿಸ್ಟರ್ ಬೀನ್ ಮುಂಬೈ ಮೂಲದ ಜಿತಿನ್ ತನ್ವಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬೀನ್
ಮಿಸ್ಟರ್ ಬೀನ್ ಯಾರಿಗೆ ಗೊತ್ತಿಲ್ಲ ಹೇಳಿ. ಸದಾ ಎಲ್ಲರನ್ನು ನಕ್ಕು ನಗಿಸುವ ಮಿಸ್ಟರ್ ಬೀನ್ ಪಾತ್ರಧಾರಿ ರೋವನ್ ಅಟ್ಕಿನ್‌ಸನ್ ( Rowan Atkinson) ಹಾಗೂ ಆತನ ಹಾಸ್ಯಗಳು ಎಲ್ಲ ಕಾಲಕ್ಕೂ ಮನೆ ಮಾತು. ಈ ರೋವನ್ ಅಟ್ಕಿನ್‌ಸನ್ ವಿದೇಶಿ ಕಲಾವಿದ. ಈಗ ಮಿಸ್ಟರ್ ಬೀನ್ ತರಹವೇ ನಟನೇ ಮಾಡುವ ಆತನನ್ನೇ ಹೋಲುವ ಯುವ ಕಲಾವಿದನೋರ್ವ ನಮ್ಮಲ್ಲೂ ಇದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವವರು ಈತನ ಕಲೆಯನ್ನು ಈಗಾಗಲೇ ನೋಡಿರಲೂಬಹುದು. ಪ್ರಸ್ತುತ ಈತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಷ್ಟು ಫಾಲೋವರ್‌ಗಳಿದ್ದು ಭಾರಿ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಅಂದಹಾಗೆ ಇವರ ಹೆಸರು ಜಿತಿನ್ ತನ್ವಿ(Jatin Thanvi), ಮುಂಬೈ ನಿವಾಸಿಯಾದ ಇವರು ಯುವ ವಾಸ್ತುಶಿಲ್ಪಿ (architect).ಜೋಧಪುರದಲ್ಲಿ ಜನಿಸಿದ ಈ ಜಿತಿನ್ ತನ್ವಿ, ಓರ್ವ ಹಿರಿಯ ಸಹೋದರಿ ಹಾಗೂ ಅಪ್ಪ ಅಮ್ಮನೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಮಿಸ್ಟರ್ ಬೀನ್ ನಟನೆಯಿಂದ ತುಂಬಾ ಪ್ರಭಾವಿತರಾಗಿದ್ದ ಇವರು ಆತನಂತೆಯೇ ನಟನೆ ಮಾಡಲು ಕಲಿತಿದ್ದರು. ಆದರೆ ಇವರ ಪೋಷಕರಿಗೆ ಈತ ಮಿಸ್ಟರ್ ಬೀನ್ ಪಾತ್ರ ಮಾಡುವುದು ನಟನೆ ಮಾಡುವುದು ಸ್ವಲ್ಪವೂ ಇಷ್ಟವಿರಲಿಲ್ಲವಂತೆ ಅಮ್ಮನನ್ನು ಇದಕ್ಕೆ ಒಪ್ಪಿಸಲು ಒಂದು ವರ್ಷವನ್ನೇ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ ಜಿತಿನ್ ತನ್ವಿ.
ಇವರು ಈಗ ಈ ನಟನೆ ಖ್ಯಾತಿ ನಟನೆ ಎಲ್ಲಾ ಹೇಗೆ ಆರಂಭವಾಯಿತು ಎಂಬ ಬಗ್ಗೆ ಮಾಧ್ಯಮದೊಂದಿಗೆ ತಮ್ಮ ನಟನಾ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಅದು ಎರಡು ವರ್ಷಗಳ ಹಿಂದಿನ ಕತೆ. 2020ರ ಮಾರ್ಚ್‌ನಲ್ಲಿ ಕೋವಿಡ್ ದೇಶವನ್ನಾರಿಸಿ ಮೊದಲ ಬಾರಿ ದೇಶವನ್ನೇ ಲಾಕ್‌ಡೌನ್ ಮಾಡಲಾಗಿತ್ತು. ಈ ವೇಳೆ ಮನೆಯಲ್ಲಿ ಕೂತಿದ್ದ ಜಿತಿನ್ ತನ್ವಿ ಅಕ, ಮೊದಲ ಬಾರಿಗೆ ಮಿಸ್ಟರ್ ಬೀನ್ ನಟನೆಯನ್ನು ಅನುಕರಿಸಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಮಾರನೇ ದಿನ ಬೆಳಗ್ಗೆದ್ದು ಸೋಶಿಯಲ್ ಮೀಡಿಯಾ ನೋಡಿದ ಅವರಿಗೆ ಅಚ್ಚರಿ ಕಾದಿತ್ತು. ಈ ವಿಡಿಯೋವನ್ನು ರಾತ್ರಿ ಬೆಳಗಾಗುವುದರೊಳಗೆ 6 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರು. ಇದರಿಂದ ಖುಷಿಯಾದ ಜಿತಿನ್ ತನ್ವಿ ಮತ್ತೊಂದು ವಿಡಿಯೋವನ್ನು ಮಾಡಿ ಹಾಕಿದರು. ಇದನ್ನಂತೂ 56 ಮಿಲಿಯನ್ ಜನ ವೀಕ್ಷಿಸಿದರು. 'ನನಗೆ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ತಡೆ ಇಲ್ಲದಂತೆ ನನಗೆ ನಿರಂತರ ಸಂದೇಶಗಳು ಬರಲು ಶುರುವಾದವು. ನನಗೆ ಸೋಶಿಯಲ್ ಮೀಡಿಯಾ ಇಷ್ಟೊಂದು ಪವರ್‌ಫುಲ್ ಎಂಬ ಯೋಚನೆಯೇ ಇರಲಿಲ್ಲ. ನಂತರ ನಾನು ದಿನಾ ಈ ರೀತಿಯ ವಿಡಿಯೋ ಮಾಡಿ ಹಾಕಲು ನಿರ್ಧರಿಸಿದೆ' ಎಂದು ತಮ್ಮ ಕಲಾವಿದನ ಜರ್ನಿ ಬಗ್ಗೆ ವಿವರಿಸುತ್ತಾರೆ ಜಿತಿನ್
63ರ ಪ್ರಾಯದಲ್ಲಿ ತಂದೆಯಾದ ರಸಿಕ ಮಿಸ್ಟರ್ ಬೀನ್
ಇನ್ನು ತನ್ವಿಯ ಈ ಮಿಸ್ಟರ್ ಬೀನ್ ಅನುಕರಿಸುವ ಪ್ರತಿಭೆ ಅವರ ಶಾಲಾ ದಿನಗಳಿಂದಲೂ ಇತ್ತು. ನನ್ನ ಸ್ನೇಹಿತರು ನನಗೆ ಆಗಾಗ್ಗೆ ಹೇಳುತ್ತಿದ್ದರು. ಬಾಲ್ಯದಲ್ಲಿ ನಾನು ಮಿಸ್ಟರ್ ಬೀನ್ ಸಂಬಂಧಿಸಿದ ಸಿನಿಮಾವನ್ನೇ ಹೆಚ್ಚಾಗಿ ನೋಡುತ್ತಿದ್ದೆ. ನಾನು ಎರಡು ಅಥವಾ ಮೂರನೇ ತರಗತಿಯಲ್ಲಿದ್ದೀರಬೇಕು. ಆಗ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ಆಯೋಜಿಸಿದ್ದರು. ಅದರಲ್ಲಿ ನಾನು ಮಿಸ್ಟರ್ ಬೀನ್ ವೇಷ ಹಾಕಿದ್ದೆ. ಆದರೆ ಆಗ ನನಗೆ ಪ್ರಶಸ್ತಿ ಸಿಕ್ಕಿರಲಿಲ್ಲ. ಆದರೆ ನಟನೆಯಿಂದ ಖುಷಿಯಂತು ಸಿಕ್ಕಿತು. ಶಿಕ್ಷಕರು ಹಾಗೂ ಸ್ನೇಹಿತರು ನನ್ನ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಶಾಲಾ ದಿನಗಳಲ್ಲಿ ನಾನು ತುಂಬಾ ನಾಚಿಕೆ ಸ್ವಭಾವದವನಾಗಿದ್ದೆ. ತುಂಬಾ ಸ್ನೇಹಿತರನ್ನು ಹೊಂದಿದ್ದೆ. ಆದರೆ ಆತ್ಮೀಯರು ಎಂದು ಯಾರೂ ಇರಲಿಲ್ಲ. ನಾನು ನನ್ನಷ್ಟಕ್ಕೆ ಇರುತ್ತಿದ್ದೆ. ಆದರೆ ಮಿಸ್ಟರ್ ಬೀನ್ ಪಾತ್ರ ನನ್ನ ಬದುಕಿನಲ್ಲಿ ತುಂಬಾ ಬದಲಾವಣೆಯನ್ನು ತಂದಿತು. ಮಿಸ್ಟರ್ ಬೀನ್ ಆಗಿ ಒಮ್ಮೆ ವೇದಿಕೆ ಏರಿದ ನಂತರ ನನಗಿದ್ದ ಸ್ಟೇಜ್ ಪೀಯರ್ ಹೋಯಿತು. ಅಲ್ಲದೇ ಸ್ನೇಹಿತರು ಕೂಡ ತನ್ನಿಂದ ತಾನೇ ಜಾಸ್ತಿಯಾಗುತ್ತಾ ಹೋದರು. ಇವತ್ತು ಸ್ನೇಹಿತರ ಹೊರತಾಗಿ ದೊಡ್ಡದಾದ ಅಭಿಮಾನಿಗಳ ಬಳಗ ನನಗಿದೆ. ಜನ ಇಂದು ನನ್ನನ್ನು ನೋಡಿದಾಗ ಅರೆ ಇವನು ಮಿಸ್ಟರ್ ಬೀನ್ ತರ ಕಾಣಿಸ್ತಿದ್ದಾನಲ್ಲ ಎಂದು ಹೇಳುತ್ತಾರೆ. ಅವರ ಆ ಎಕ್ಸೈಟ್‌ಮೆಂಟ್ ನನಗೆ ಅರ್ಥವಾಗುತ್ತದೆ.
ಆದಾಗ್ಯೂ ಇವರಿಗೆ ಹೀಗೆ ಪಾತ್ರ ಮಾಡುವುದಕ್ಕೆ ಮನೆಯವರನ್ನು ಒಪ್ಪಿಸುವುದು ಸುಲಭವಿರಲಿಲ್ಲ. ಆರ್ಕಿಟೆಕ್ಟ್ ವಿದ್ಯಾಭ್ಯಾಸ ಮಾಡಿದ್ದ ಜಿತಿನ್ ತನ್ವಿ ಅದನ್ನು ತೊರೆದು ನಟನೆ ಮಾಡುತ್ತೇನೆ ಎಂದಾಗ ಮನೆಯವರು ಅಕ್ಷರಶಃ ಚಿಂತೆಗೀಡಾಗಿದ್ದರು. ನನ್ನ ತಾಯಿಗಂತು ಇದನ್ನು ಅರ್ಥ ಮಾಡಿಸಲು ನನಗೆ ಒಂದು ವರ್ಷವೇ ಬೇಕಾಯಿತು. ಕೊನೆಗೂ ಹಲವು ಪ್ರಯತ್ನಗಳ ಬಳಿಕ ನನ್ನ ತಾಯಿ ಒಪ್ಪಿಕೊಂಡರು. ಅಲ್ಲದೇ ಕೆಲವರು ನನ್ನ ತಾಯಿಗೆ ಸೋಶಿಯಲ್ ಮೀಡಿಯಾದಲ್ಲಿದ್ದ ನನ್ನದೇ ವಿಡಿಯೋವನ್ನು ಕಳುಹಿಸಿ, ಇವನನ್ನು ನೋಡಿದೆಯಾ, ಎಂದೂ ಕೇಳುತ್ತಿದ್ದರು. ವಿಡಿಯೋ ಕಳುಹಿಸುವವರಿಗೆ ಅವರು ನನ್ನ ತಾಯಿಗೇ ವಿಡಿಯೋ ಕಳುಹಿಸುತ್ತಿದ್ದಾರೆ ಎಂಬುದರ ಅರಿವಿರುತ್ತಿರಲಿಲ್ಲ. ಈ ವೇಳೆ ನನ್ನ ತಾಯಿ ಇದು ನೀನೆ ಅಲ್ವಾ ಎಂದು ಭಾವುಕರಾಗುತ್ತಿದ್ದರು. ಈ ವೇಳೆ ನಾನು ಆಕೆಗೆ ಹೇಳುತ್ತಿದೆ. ನೀನು ಹೆಮ್ಮೆ ಪಡುವಂತೆ ನಾನು ಮಾಡುತ್ತೇನೆ ಎನ್ನುತ್ತಿದ್ದೆ.
r. ಬೀನ್ ಸಿಕ್ಕರೆ ಜನ ಏನು ಕೇಳ್ತಾರೆ ಗೊತ್ತೆ?
ಆದರೆ ಈಗ ಆಕೆಯೇ ನನಗಾಗಿ ಇನ್ಸ್ಟಾಗ್ರಾಮ್‌ನಲ್ಲಿ (Instagram) ಒಂದು ಖಾತೆಯನ್ನು ತೆರೆದಿದ್ದಾಳೆ. ಒಂದು ದಿನ ನಾವು ಸಿನಿಮಾ ನೋಡುವುದಕ್ಕಾಗಿ ಕುಟುಂಬದೊಂದಿಗೆ ಥಿಯೇಟರ್‌ಗೆ ಹೋಗಿದ್ದೆವು. ಆಗ ಅಲ್ಲಿಗೆ ಬಂದ ಮೂರು ನಾಲ್ಕು ಜನ ನನ್ನ ಜೊತೆ ಸೆಲ್ಫಿ ತೆಗೆದುಕೊಂಡರು. ಆ ಕ್ಷಣ ನನ್ನ ಅಮ್ಮ ನನ್ನ ಬಗ್ಗೆ ಮೊದಲ ಬಾರಿಗೆ ಹೆಮ್ಮೆ ಪಟ್ಟುಕೊಂಡರು. ಅಲ್ಲದೇ ನನ್ನ ತಂದೆಯೂ ಈ ಹಿಂದೆ ನನ್ನ ಜೊತೆ, ನಿನ್ನನ್ನು ಯಾರೂ ಗುರುತಿಸುವುದಿಲ್ಲ ಎಂದು ಸವಾಲು ಹಾಕಿದ್ದರು. ಅವರಿಗೂ ಆ ಕ್ಷಣ ನಗುವಂತೆ ಮಾಡಿತ್ತು ಎಂದು ಜಿತಿನ್ ತಮ್ಮ ನಟನಾ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.
ಇನ್ನು ತಮ್ಮ ಭವಿಷ್ಯದ ಬಗ್ಗೆ ತಮಾಷೆಯಾಗಿ ಮಾತನಾಡುವ ಬೀನ್, ಮುಂದೆ ಭಾರತದಲ್ಲಿ ಮಿಸ್ಟರ್ ಬೀನ್ ಶೋ ಇದ್ದರೆ ಅದರಲ್ಲಿ ನಾನು ನಟಿಸುವೆ. ಅಥವಾ ನಾನೇ ಒಂದು ಇಂಡಿಯನ್ ಮಿಸ್ಟರ್ ಬೀನ್ ಸೀರಿಸ್ ಅನ್ನು ಶುರು ಮಾಡುವೆ ಎಂದರು.