Asianet Suvarna News Asianet Suvarna News

ಸಂಸತ್‌ ದಾಳಿಕೋರರ ಗುರಿ ಪ್ರಧಾನಿ ಮೋದಿ! ದಾಳಿಗೆ ಅಸಲಿ ಕಾರಣ ಇದೇನಾ?

ಲೋಕಸಭೆ ಒಳಗೆ ದಾಳಿ ಮಾಡಿದ ಮನೋರಂಜನ್‌, ಸಾಗರ್‌ ಶರ್ಮಾ ಮತ್ತು ಹೊರಗೆ ಸ್ಮೋಕ್‌ ಕ್ಯಾನ್‌ ಸಿಡಿಸಿದ ನೀಲಂ ಮತ್ತು ಅಮೋಲ್‌ ಬಳಿ ಒಂದಷ್ಟು ಕರಪತ್ರಗಳು ಪತ್ತೆಯಾಗಿವೆ. ಈ ಕರಪತ್ರಗಳಲ್ಲಿ ‘ಪ್ರಧಾನಿ ಮೋದಿ ಕಾಣೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಸ್ವಿಸ್‌ ಬ್ಯಾಂಕ್‌ನಿಂದ ಸೂಕ್ತ ಬಹುಮಾನ ನೀಡಲಾಗುವುದು’ ಎಂದು ಬರೆಯಲಾಗಿತ್ತು. 

was pm narendra modi the target of persons who breached security of parliament ash
Author
First Published Dec 15, 2023, 9:17 AM IST

ನವದೆಹಲಿ (ಡಿಸೆಂಬರ್ 15, 2023): ಸಂದರ್ಶಕರ ಸೋಗಿನಲ್ಲಿ ಬಂದು ಬುಧವಾರ ಲೋಕಸಭೆಯ ಹಾಲ್‌ನಲ್ಲಿ ಸದಸ್ಯರತ್ತ ಸ್ಮೋಕ್‌ ಕ್ಯಾನ್‌ ಸಿಡಿಸಿದ ದಾಳಿಕೋರರ ಪ್ರಮುಖ ಗುರಿ ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರೆ ಆಗಿದ್ದರು. ದಾಳಿ ವೇಳೆ ಪ್ರಧಾನಿ ಮೋದಿ ಅವರ ಬಳಿಗೇ ಹೋಗಿ ಕರಪತ್ರಗಳನ್ನು ನೀಡಲು ಯೋಜನೆ ರೂಪಿಸಲಾಗಿತ್ತು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಬಂಧಿತ ನಾಲ್ವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಕೋರಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಅರ್ಜಿಯಲ್ಲಿ ಪೊಲೀಸರು ಈ ಮಾಹಿತಿ ಬಹರಂಗಪಡಿಸಿದ್ದಾರೆ. 

ಇದನ್ನು ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ: 8 ಲೋಕಸಭೆ ಸಿಬ್ಬಂದಿ ಅಮಾನತು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು

ಲೋಕಸಭೆ ಒಳಗೆ ದಾಳಿ ಮಾಡಿದ ಮನೋರಂಜನ್‌, ಸಾಗರ್‌ ಶರ್ಮಾ ಮತ್ತು ಹೊರಗೆ ಸ್ಮೋಕ್‌ ಕ್ಯಾನ್‌ ಸಿಡಿಸಿದ ನೀಲಂ ಮತ್ತು ಅಮೋಲ್‌ ಬಳಿ ಒಂದಷ್ಟು ಕರಪತ್ರಗಳು ಪತ್ತೆಯಾಗಿವೆ. ಈ ಕರಪತ್ರಗಳಲ್ಲಿ ‘ಪ್ರಧಾನಿ ಮೋದಿ ಕಾಣೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಸ್ವಿಸ್‌ ಬ್ಯಾಂಕ್‌ನಿಂದ ಸೂಕ್ತ ಬಹುಮಾನ ನೀಡಲಾಗುವುದು’ ಎಂದು ಬರೆಯಲಾಗಿತ್ತು. 

ಇದನ್ನು ಸ್ವತ: ಮೋದಿಗೆ ನೀಡಲು ದಾಳಿಕೋರರು ಯೋಜಿಸಿದ್ದರು ಎಂಬ ವಿಷಯ ತನಿಖೆ ವೇಳೆ ಪತ್ತೆಯಾಗಿದೆ. ಹೀಗಾಗಿ ಅವರನ್ನು ಇನ್ನಷ್ಟು ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಬುಧವಾರ ಮೋದಿ ಸಂಸತ್ತಿಗೆ ಹಾಜರಾಗಿರಲಿಲ್ಲ. ಬದಲಾಗಿ ಅವರು ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಿದ್ದರು. 

ಇದನ್ನು ಓದಿ: ಮೊದಲು ಗ್ಯಾಲರಿಯಿಂದ ಬಿದ್ದರು ಎಂದು ಭಾವಿಸಿದ್ದೆ; ಆಮೇಲೆ ಉದ್ದೇಶಪೂರ್ವಕ ಕುಕೃತ್ಯ ಎಂದು ಗೊತ್ತಾಯ್ತು: ಕಾರ್ತಿ ಚಿದಂಬರಂ

ದಾಳಿ ಮಾಡಿದ್ದೇಕೆ?
ನಿರುದ್ಯೋಗ, ರೈತರ ಸಮಸ್ಯೆ, ಮಣಿಪುರ ದಂಗೆ ಬಗ್ಗೆ ದೇಶ ಮತ್ತು ಸಂಸತ್ತಿನ ಗಮನ ಸೆಳೆಯಲು ಸ್ಮೋಕ್‌ ಕ್ಯಾನ್‌ ದಾಳಿ ನಡೆಸಿರುವುದಾಗಿ ಬಂಧಿತ 5 ಆರೋಪಿಗಳು ಮಾಹಿತಿ ನೀಡಿದ್ದಾರೆ. 
 

ಇದನ್ನು ಓದಿ: ಮಹುವಾ ರೀತಿ ಪ್ರತಾಪ್‌ ಸಿಂಹ ವಜಾಕ್ಕೆ ಆಗ್ರಹ: ಇಂದು ವಿಪಕ್ಷಗಳ ತುರ್ತು ಸಭೆ; ರಾಷ್ಟ್ರಪತಿ ಮುರ್ಮು ಭೇಟಿ

ಸಂಸತ್‌ ಭದ್ರತಾ ಲೋಪ: ಸ್ಮೋಕ್‌ ಕ್ಯಾನ್‌ ಎಂದರೇನು? ಸಂಸತ್ತಿನ ವೀಕ್ಷಕರ ಪಾಸ್‌ ಪಡೆವ ಪ್ರಕ್ರಿಯೆ ಹೇಗಿದೆ ನೋಡಿ..

Follow Us:
Download App:
  • android
  • ios