* ಹಿಜಾಬ್‌, ಸಿಎಎ ವಿವಾದದಿಂದ ನೊಂದು ಗೋರಖಪುರ ದಾಳಿ* ಘಟನೆಗಳಿಂದ ರೋಸಿ ಹೋಗಿ ದಾಳಿ: ಬಂಧಿತ ಅಹ್ಮದ್‌ ಮುರ್ತಜಾ ಹೇಳಿಕೆ* ಐಸಿಸ್‌ಗೂ ಹಣ ರವಾನಿಸಿದ್ದ ಅಹ್ಮದ್‌ನಿಂದ ಕೆನಡಾಗೆ ಹೋಗಲು ಸಿದ್ಧತೆ

ಲಖನೌ(ಏ.08): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸ್ವಕ್ಷೇತ್ರ ಗೋರಖಪುರದ ಗೋರಖನಾಥ ಮಂದಿರದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಐಐಟಿ ಪದವೀಧರ ಅಹ್ಮದ್‌ ಮುರ್ತಜಾ ಅಬ್ಬಾಸಿ, ‘ಸಿಎಎ, ಎನ್‌ಆರ್‌ಸಿ ವಿವಾದ ಹಾಗೂ ಇತ್ತೀಚೆಗೆ ಕರ್ನಾಟಕದ ಹಿಜಾಬ್‌ ನಿರ್ಬಂಧ ತೀರ್ಮಾನದಿಂದ ನೊಂದಿದ್ದೆ. ಹೀಗಾಗಿ ಹತಾಶನಾಗಿ ದಾಳಿಗೆ ನಿರ್ಧರಿಸಿದ್ದೆ’ ಎಂದು ಹೇಳಿದ್ದಾನೆ. ಅಬ್ಬಾಸಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ಹೇಳಿವೆ.

‘ಮುಸ್ಲಿಮರ ವಿರುದ್ಧ ಸಿಎಎ ಹಾಗೂ ಎನ್‌ಆರ್‌ಸಿಯನ್ನು ಸರ್ಕಾರ ಹೇರುತ್ತಿದೆ. ಕರ್ನಾಟಕದಲ್ಲಿ ಕೂಡ ಮುಸ್ಲಿಮರಿಗೆ ಹಿಜಾಬ್‌ ಧರಿಸಲು ನಿರ್ಬಂಧಿಸಲಾಗಿದೆ. ನಮ್ಮ ಸಹಾಯಕ್ಕೆ ಯಾರೂ ಬರುತ್ತಿಲ್ಲ. ಹೀಗಾಗಿ ಇದಕ್ಕೆ ಪ್ರತೀಕಾರವಾಗಿ ಏನೋ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಎಷ್ಟುಹತಾಶ ಆಗಿದ್ದೆ ಎಂದರೆ ನಿದ್ದೆ ಕೂಡ ಬರುತ್ತಿರಲಿಲ್ಲ’ ಎಂದಿದ್ದಾನೆ ಎಂದು ತಿಳಿದುಬಂದಿದೆ.

ಗೋರಖ್‌ಪುರ ದೇಗುಲದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ವ್ಯಕ್ತಿ ಬಾಂಬೆ ಐಐಟಿ ಗ್ರಾಜ್ಯುಯೇಟ್

ಐಸಿಸ್‌ಗೆ ಹಣ:

ಈ ನಡುವೆ, ನೇಪಾಳಕ್ಕೂ ಭೇಟಿ ನೀಡಿದ್ದ ಅಬ್ಬಾಸಿ, ಅಲ್ಲಿನ ಬ್ಯಾಂಕ್‌ನಿಂದಲೇ ಸಿರಿಯಾದಲ್ಲಿ ಐಸಿಸ್‌ ಉಗ್ರರಿಗೆ ಹಣ ರವಾನಿಸಿದ್ದ ಎಂದೂ ತಿಳಿದುಬಂದಿದೆ. ಇದಕ್ಕಾಗಿ ಆತ ಪೇ ಪಾಲ್‌ ಆ್ಯಪ್‌ ಬಳಸಿದ್ದ. ಸಿರಿಯಾದಲ್ಲಿನ ಐಸಿಸ್‌ ಉಗ್ರರ ಜತೆ ತನ್ನ ಆಪ್ತ ಅಬ್ದುಲ್‌ ರೆಹಮಾನ್‌ ಜತೆಗೂಡಿ ಕಾನ್ಫರೆನ್ಸ್‌ ಕಾಲ್‌ನಲ್ಲೂ ಮಾತನಾಡಿದ್ದ ಎಂದು ವರದಿಗಳು ಹೇಳಿವೆ.

ಅಬ್ಬಾಸಿ ಕೆನಡಾ ವೀಸಾ ಕೂಡ ಇತ್ತೀಚೆಗೆ ಪಡೆದಿದ್ದ. ಇನ್ನೇನು ಕೆನಡಾಗೆ ಹೋಗುವನಿದ್ದ. ಆದರೆ ಆತನ ಚಟುವಟಿಕೆ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

Yogi Adityanath Swearing: ಹೋಳಿಗೂ ಮೊದಲೇ ಯೋಗಿ ಪ್ರಮಾಣ ವಚನ: ಪ್ರಧಾನಿ ಮೋದಿ, ಬಿಜೆಪಿ ಸಿಎಂಗಳಿಗೆ ಆಹ್ವಾನ?

ಗೋರಖ್‌ಪುರ ದಾಳಿಕೋರನ ಬಳಿ ಪಾಕಿಸ್ತಾನದ ಆ ಒಂದು ವಿಡಿಯೋ!

ಉತ್ತರ ಪ್ರದೇಶದ ಪ್ರಸಿದ್ಧ ಗೋರಖನಾಥ ದೇಗುಲ ಮೇಲೆ ದಾಳಿ ನಡೆಸಿದ ಅಹ್ಮದ್‌ ಮುರ್ತಜಾ ಅಬ್ಬಾಸಿ ಲ್ಯಾಪ್‌ಟಾಪ್‌ನಲ್ಲಿ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಹಲವು ವಿಡಿಯೋಗಳು ಪತ್ತೆಯಾಗಿವೆ. ಹೀಗಾಗಿ ದಾಳಿಯ ಹಿಂದೆ ಉಗ್ರ ಕೃತ್ಯ ಶಂಕೆಗೆ ಮತ್ತಷ್ಟುಬಲಬಂದಂತೆ ಆಗಿದೆ.

ಅಬ್ಬಾಸಿ ಮನೆ ಮೇಲೆ ನಡೆಸಿದ ದಾಳಿಯ ವೇಳೆ ಪತ್ತೆಯಾದ ಲ್ಯಾಪ್‌ಟಾಪ್‌ನಲ್ಲಿ ಝಾಕಿರ್‌ ಮತ್ತು ಐಎಸ್‌ಐಗೆ ಸೇರಿದ ವಿಡಿಯೋಗಳು ಪತ್ತೆಯಾಗಿವೆ. ಜೊತೆಗೆ ಆತನ ಮನೆಯಲ್ಲಿ ಸಿಕ್ಕ ಆಧಾರ್‌ ಕಾರ್ಡ್‌ನಲ್ಲಿ ನವಿ ಮುಂಬೈನ ವಿಳಾಸ ನೀಡಲಾಗಿದೆ. ಹೀಗಾಗಿ ಎಟಿಎಸ್‌ ತಂಡ ನವಿ ಮುಂಬೈಗೆ ಧಾವಿಸಿ ತನಿಖೆ ಮುಂದುವರೆಸಿದೆ.

ಈ ನಡುವೆ ಅಬ್ಬಾಸಿ ಆಲಿಘರ್ವಾ ಗಡಿಯಿಂದ ನೇಪಾಳಕ್ಕೆ ಪ್ರವೇಶಿಸಿ ನಂತರ ನೇಪಾಳದಿಂದ ವಾಪಸ್‌ ಬರುವಾಗ ಆಲಿಘರ್ವಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ತಂದಿದ್ದ. ದೇಗುಲ ದಾಳಿ ವೇಳೆ ಅದೇ ಮಾರಾಕಾಸ್ತ್ರಗಳನ್ನು ಬಳಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಪ್ರಕರಣ ಸಂಬಂಧ ಎಟಿಎಸ್‌ ಅಬ್ಬಾಸಿಯ ಪ್ರಯಾಣ ಇತಿಹಾಸದ ಕುರಿತು ತನಿಖೆ ನಡೆಸಿ ಆತನ ಪತ್ನಿ ಮತ್ತು ಕುಟುಂಬದವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ನಡುವೆ ಪ್ರಕರಣ ಸಂಬಂಧ ಮಂಗಳವಾರ ಮಹಾರಾಜಗಂಜಿಯ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಮಂಗಳೂರಿನ ಜೋಗಿ ಮಠಕ್ಕೆ ಪೀಠಾಧಿಪತಿ ನೇಮಕ ಮಾಡುವುದು Yogi Adityanath

ಅಬ್ಬಾಸಿ ಭಾನುವಾರ ರಾತ್ರಿ ಕೈಯಲ್ಲಿ ಮಚ್ಚು ಹಿಡಿದು ಏಕಾಏಕಿ ಧಾರ್ಮಿಕ ಘೋಷಣೆ ಕೂಗುತ್ತಾ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಪ್ರಸಿದ್ಧ ಗೋರಖ್‌ನಾಥ ದೇಗುಲದ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಘಟನೆಯನ್ನು ಭಯೋತ್ಪಾದನೆಯ ಕೃತ್ಯ ಎಂದು ಬಣ್ಣಿಸಿರುವ ಉತ್ತರಪ್ರದೇಶದ ಗೃಹ ಸಚಿವಾಲಯ, ಈ ಕುರಿತು ಎಸ್‌ಐಟಿ ತನಿಖೆಗೆ ಆದೇಶಿಸಿತ್ತು.