ಮಂಗಳೂರಿನ ಜೋಗಿ ಮಠಕ್ಕೆ ಪೀಠಾಧಿಪತಿ ನೇಮಕ ಮಾಡುವುದು Yogi Adityanath

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಮಂಗಳೂರು ನಂಟು

ಇದುವರೆಗೆ ಮಂಗಳೂರಿಗೆ 6 ಬಾರಿ ಭೇಟಿ ನೀಡಿದ್ದ ಯೋಗಿ

ಜೋಗಿ ಮಠದ ಪೀಠಾಧಿಪತಿ ನೇಮಕ ಮಾಡುವ ಯೋಗಿ ಆದಿತ್ಯನಾಥ್

yogi adityanath appoints the peetadhipathi to jogi mutt in Mangalore san

ಮಂಗಳೂರು (ಮಾ.10): ಇಡೀ ದೇಶದ ಗಮನ ಸೆಳೆದ ಉತ್ತರ ಪ್ರದೇಶ ಚುನಾವಣೆಯಲ್ಲಿ (Uttar Pradesh Election) 403 ಸ್ಥಾನಗಳ ಪೈಕಿ 274 ಸ್ಥಾನಗಳನ್ನು ಬಿಜೆಪಿ (BJP) ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈ ಗೆಲುವಿನ ಹಿಂದಿನ ಶಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿ (Uttar Pradesh Chief Minister) ಯೋಗಿ ಆದಿತ್ಯನಾಥರಿಗೂ (Yogi Adityanath) ಕಡಲತಡಿ ಮಂಗಳೂರಿಗೂ (Mangalore) ವಿಶೇಷ ನಂಟು ಇದೆ.

ಅವರು ಕರ್ನಾಟಕಕ್ಕೆ ಬರುತ್ತಾರೆಂದರೆ ಮಂಗಳೂರಿಗೆ ಬಂದೇ ಬರುತ್ತಾರೆ. ಇದುವರೆಗೆ ಯೋಗಿ ಆದಿತ್ಯನಾಥ್‌ ಆರು ಬಾರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ. 2017ರ ಅ.3ರಂದು ಕೇರಳದಲ್ಲಿ ಜನರಕ್ಷಾ ಯಾತ್ರೆಗೆ (Kerala Janaraksha Yatre) ಆಗಮಿಸಿದ್ದ ಸಂದರ್ಭವೂ ಮಂಗಳೂರಿನ ಕದ್ರಿ ಮಠಕ್ಕೆ (Kadri Mutt)ಆಗಮಿಸಿ ವಾಸ್ತವ್ಯ ಹೂಡಿದ್ದರು.

ಆದಿತ್ಯನಾಥ್‌ ಮಂಗಳೂರಿಗೆ ಬರುತ್ತಾರೆಂದರೆ ಮಂಗಳೂರಿನ ಕದ್ರಿ ಗುಡ್ಡದಲ್ಲಿರುವ ನಾಥ ಪಂಥದ ಯೋಗೇಶ್ವರ (ಜೋಗಿ) ಮಠದಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಇದಕ್ಕೆ ಕಾರಣವೂ ಇದೆ. ಕರಾವಳಿ ಭಾಗದ ಜೋಗಿ ಸಮುದಾಯದವರು ನಾಥ ಪಂಥದ ಅನುಯಾಯಿಗಳು. ಇಲ್ಲಿನ ಯೋಗೇಶ್ವರ ಮಠ ಜೋಗಿ ಮಠವಾಗಿಯೇ (Jogi Mutt) ಪ್ರಸಿದ್ಧಿ ಪಡೆದಿದೆ. ಆದಿತ್ಯನಾಥರು ನಾಥ ಸಂಪ್ರದಾಯದ ಮುಖ್ಯಸ್ಥರೂ ಹೌದು.

ನಿರ್ಮಲನಾಥಜೀ ಪಟ್ಟಾಭಿಷೇಕಕ್ಕೆ ಆಗಮಿಸಿದ್ದ ಯೋಗಿ: 12 ವರ್ಷಕ್ಕೊಮ್ಮೆ ಕದ್ರಿ ಯೋಗೇಶ್ವರ ಮಠದಲ್ಲಿ ನಡೆಯುವ ಪೀಠಾಧಿಪತಿ ಆಯ್ಕೆಯಲ್ಲಿ ನಾಥ ಸಂಪ್ರದಾಯದ ಮೂಲ ಪೀಠವಾಗಿರುವ ಗೋರಖ್‌ಪುರ ಮಠ ಮಹತ್ವದ ಪಾತ್ರ ವಹಿಸುತ್ತದೆ. 2016ರ ಮಾಚ್‌ರ್‍ 7ರಂದು ನೂತನ ಪೀಠಾಧಿಪತಿ ನಿರ್ಮಲನಾಥಜೀ ಪಟ್ಟಾಭಿಷೇಕಕ್ಕೆ ಯೋಗಿ ಆದಿತ್ಯನಾಥ್‌ ಆಗಮಿಸಿದ್ದರು. ಆ ಬಳಿಕ 2017ರ ಮಾಚ್‌ರ್‍ 19ರಂದು ಆದಿತ್ಯನಾಥ್‌ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಸಂದರ್ಭವೂ ಮಂಗಳೂರಿನ ಜೋಗಿ ಮಠದಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತ್ತು.

ಮಂಗಳೂರಿನ ನಾಥ ಸಂಪ್ರದಾಯದ ಯೋಗೇಶ್ವರ ಮಠದ ಮಠಾಧೀಶರನ್ನು ಅಥವಾ ರಾಜರನ್ನು ನೇಮಿಸುವಲ್ಲಿ ನಾಥ ಸಂಪ್ರದಾಯದ ಮೂಲಮಠ ಗೋರಖ್‌ಪುರ ಹಾಗೂ ಅವಧೂತ್‌ ಭೇಷ್‌ ಬಾರಹ ಪಂಥ ಯೋಗಿ ಮಹಾಸಭಾ ಮುಖ್ಯ ಪಾತ್ರ ವಹಿಸುತ್ತದೆ.

ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಯೋಗೇಶ್ವರ ಮಠದ ಮಠಾಧೀಶರ ಅಥವಾ ನಾಥ ಸಂಪ್ರದಾಯದ ರಾಜನನ್ನು ಆಯ್ಕೆ ಮಾಡುವುದೇ ಗೋರಖ್‌ಪುರ ಮಠದ ಮಠಾಧೀಶ. ಪ್ರಸ್ತುತ ಗೋರಖ್‌ಪುರ ಮಠದ ಮಠಾಧೀಶರಾಗಿರುವ ಯೋಗಿ ಆದಿತ್ಯನಾಥ್‌ ಅವರು ಯೋಗೇಶ್ವರ ಮಠದ ಮಠಾಧೀಶರ ಆಯ್ಕೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಮಠದ ಮಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಕೂಡ ಆದಿತ್ಯನಾಥ್‌ ಭಾಗವಹಿಸಿದ್ದರು.

ಎಎಪಿ ಕೇವಲ ರಾಜಕೀಯ ಪಕ್ಷ ಅಲ್ಲ ಇದೊಂದು ಕ್ರಾಂತಿ: ಕೇಜ್ರಿವಾಲ್
ನೂರರ ಇತಿಹಾಸ: ಕದ್ರಿ ಗುಡ್ಡದ ತುದಿಯಲ್ಲಿರುವ ಯೋಗೇಶ್ವರ (ಜೋಗಿ) ಮಠ ಸುಮಾರು 1000 ವರ್ಷಗಳ ಇತಿಹಾಸ ಹೊಂದಿದೆ. ಇದು ದಕ್ಷಿಣ ಭಾರತದಲ್ಲಿರುವ ನಾಥಪಂಥದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಪರಶುರಾಮರು ತಪಸ್ಸನ್ನಾಚರಿಸಿದ ಕುರುಹಾಗಿ ಸದಾ ಅಗ್ನಿ ಪ್ರಜ್ವಲಿಸುತ್ತಿರುವ ಪರಶುರಾಮ ಅಗ್ನಿ ಕುಂಡವಿದೆ. ಮಠದ ಸುತ್ತ ಇರುವ ವನವನ್ನು ‘ಕದಳಿ ವನ’ ಎನ್ನುತ್ತಾರೆ. ಇಲ್ಲಿ ಈ ಹಿಂದೆ ರಾಜರಾಗಿ ಪಟ್ಟಾಭಿಷಿಕ್ತರಾದವರ ಸಮಾಧಿಗಳನ್ನು ಕಾಣಬಹುದು. ಈ ಪೈಕಿ ಸಿದ್ದಗುರು ಜ್ವಾಲಾನಾಥರ ಸಮಾಧಿ ಅತ್ಯಂತ ಪವಿತ್ರವಾದುದು. ಇಲ್ಲಿ ಮುಕ್ತಿ ಹೊಂದುವ ಪರಿಪಾಠವಿದ್ದು ಇದನ್ನು ‘ಮುಕ್ತಿ ವನ’ ಎಂದೂ ಕರೆಯುತ್ತಾರೆ.

Election Result ಮೋದಿ ಯೋಗಿ ಅಭಿವೃದ್ಧಿ ಮಂತ್ರ, ಪಂಚ ರಾಜ್ಯ ಗೆಲುವು ಭಾರತದ ಭವಿಷ್ಯದ ದಿಕ್ಸೂಚಿ ಎಂದ ಸಿಎಂ ಬೊಮ್ಮಾಯಿ!
ಯೋಗಿ ಪದಗ್ರಹಣ ದಿನ ಮಂಗಳೂರು ಮಠದಲ್ಲಿ ಸಂಭ್ರಮ
ಮಂಗಳೂರಿನ ಕದ್ರಿ ಯೋಗೀಶ್ವರನಾಥ (ಜೋಗಿ) ಮಠದಲ್ಲಿ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಪ್ರಮಾಣ ವಚನ ಸ್ವೀಕರಿಸುವ ದಿನ ಸಂಭ್ರಮಾಚರಣೆ ನಡೆಯಲಿದೆ. ಯೋಗಿ ಆದಿತ್ಯನಾಥ್‌ ಅತ್ಯಧಿಕ ಮತಗಳಿಂದ ಜಯಿಸಿದ್ದಲ್ಲದೆ, ಮರಳಿ ಎರಡನೇ ಅವಧಿಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದಕ್ಕೆ ಮಠದ ಪೀಠಾಧಿಪತಿ ನಿರ್ಮಲ್‌ನಾಥ್‌ಜಿ ಸಂತಸ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios