Asianet Suvarna News Asianet Suvarna News

ಬುಡಕಟ್ಟು ದಂಪತಿಗೆ ಆಂಬುಲೆನ್ಸ್ ನಿರಾಕರಣೆ: ಮಗುವಿನ ಶವವನ್ನು ಸ್ಕೂಟರ್‌ನಲ್ಲಿ ಸಾಗಿಸಿದ ದಂಪತಿ

ಆಸ್ಪತ್ರೆ ಆಂಬುಲೆನ್ಸ್ ನಿರಾಕರಿಸಿದ ಹಿನ್ನೆಲೆಯಲ್ಲಿ 14 ತಿಂಗಳ ಮಗುವನ್ನು ದಂಪತಿ ತಮ್ಮ ಸ್ಕೂಟರ್‌ನಲ್ಲೇ ಕರೆದೊಯ್ದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪ ನಡೆದಿದೆ.

Visakhapatnam Hospital Ambulance Refused to tribal Couple, parents Carries Child's Body on Scooter akb
Author
First Published Feb 17, 2023, 12:37 PM IST

ವಿಶಾಖಪಟ್ಟಣಂ: ಆಸ್ಪತ್ರೆ ಆಂಬುಲೆನ್ಸ್ ನಿರಾಕರಿಸಿದ ಹಿನ್ನೆಲೆಯಲ್ಲಿ 14 ತಿಂಗಳ ಮಗುವನ್ನು ದಂಪತಿ ತಮ್ಮ ಸ್ಕೂಟರ್‌ನಲ್ಲೇ ಕರೆದೊಯ್ದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪ ನಡೆದಿದೆ. ಆಸ್ಪತ್ರೆ ಆಂಬುಲೆನ್ಸ್ ನಿರಾಕರಿಸಿದ ಹಿನ್ನೆಲೆಯಲ್ಲಿ ದಂಪತಿ ವಿಶಾಖಪಟ್ಟಣದಿಂದ 120 ಕಿಲೋ ಮೀಟರ್ ದೂರದಲ್ಲಿರುವ ತಮ್ಮ ಊರಾದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪಡೆರುವಿಗೆ ತಮ್ಮ ಸ್ಕೂಟರ್‌ನಲ್ಲೇ ಕರೆದೊಯ್ದಿದ್ದಾರೆ. 

ನಂತರ ಐಟಿಡಿಎ ಒದಗಿಸಿದ ಆಂಬ್ಯುಲೆನ್ಸ್ ದಂಪತಿಗೆ ಒಡಿಶಾ ಆಂಧ್ರ ಗಡಿಭಾಗದಲ್ಲಿರುವ ತಮ್ಮ ಊರಿಗೆ ಹೆಚ್ಚುವರಿ 70 ಕಿಮೀ ಪ್ರಯಾಣವನ್ನು ಮುಂದುವರಿಸಲು ಸಹಾಯ ಮಾಡಿದೆ. ಇವರು ಸ್ಕೂಟರ್‌ನಲ್ಲಿ ಮಗುವನ್ನು ಇಟ್ಟುಕೊಂಡು ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಜಿಲ್ಲಾಡಳಿತದ ಗಮನಕ್ಕೂ ಇದು ಬಂದು ಕೂಡಲೇ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು.

 ಖಾಸಗಿ ಆಂಬ್ಯುಲೆನ್ಸ್ ಮಾಫಿಯಾ : 10 ವರ್ಷದ ಮಗನ ಶವವನ್ನು ಬೈಕ್‌ನಲ್ಲಿ ಸಾಗಿಸಿದ ತಂದೆ

ಮೂಲಗಳ ಪ್ರಕಾರ  14 ದಿನಗಳ ಮಗುವಿನ ಪೋಷಕರು ನಿಷೇಧಿತ ಮಾವೋವಾದಿ ಉಗ್ರರ ಉಪಟಳವಿರುವ ಮುಂಚಿಗಪುಟ್ ಮಂಡಲ( Munchingput mandal)ದ ಕುಮಡಾ (Kumada)ಎಂಬ ಸ್ಥಳದವರಾಗಿದ್ದು, 14 ತಿಂಗಳ ಮಗುವನ್ನು ವಿಶಾಖಪಟ್ಟಣಂನ ಕೆಜಿಹೆಚ್ ಆಸ್ಪತ್ರೆಗೆ ಕೆಲ ತಿಂಗಳ ಹಿಂದೆ ಕರೆತಂದಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತ್ತು. ಮಗುವಿನ ಪೋಷಕರಾದ ಮತ್ಯಾಸ ರಾಜು (Matysa Raju) ಹಾಗೂ ಮಹೇಶ್ವರಿ (Maheswari) ಕೆಜಿಹೆಚ್‌ ಆಸ್ಪತ್ರೆಯಲ್ಲಿ ಮಗುವನ್ನು ಕರೆದೊಯ್ಯಲು ಆಂಬುಲೆನ್ಸ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಇವರ ಮನವಿಗೆ ಆಸ್ಪತ್ರೆ ಸರಿಯಾಗಿ ಸ್ಪಂದಿಸಿಲ್ಲ.  ಅಲ್ಲದೇ ಈ ಆಸ್ಪತ್ರೆಯಲ್ಲಿ ಬುಡಕಟ್ಟು ಸಮುದಾಯದ ವಿಭಾಗ ಕೂಡ ಇದ್ದು, ಹಾಗಿದ್ದರೂ ದಂಪತಿಗೆ ಆಸ್ಪತ್ರೆಯಿಂದ ನೆರವು ಸಿಕ್ಕಿಲ್ಲ.  ಹೀಗಾಗಿ ದಂಪತಿ ತಮ್ಮ ಸ್ಕೂಟರ್‌ನಲ್ಲಿ ಮೃತ ಮಗುವಿನ ಶವವನ್ನು ಇರಿಸಿಕೊಂಡು ತಮ್ಮ ಊರಿಗೆ ಹೊರಟ್ಟಿದ್ದಾರೆ. 

ಆಸ್ಪತ್ರೆಯ ಬುಡಕಟ್ಟು ವಿಭಾಗವನ್ನು  ಕೇಳಿಯೂ ಸಹಾಯ ಸಿಗದ ವಿಚಾರ ಕೆಲವು ಬುಡಕಟ್ಟು ಸಮುದಾಯದ ಯುವಕರ ಗಮನಕ್ಕೆ ಬಂದಿದ್ದು, ಅವರು ಬುಡಕಟ್ಟು ಅಭಿವೃದ್ಧಿ ನಿಗಮಕ್ಕೆ ಈ ವಿಚಾರ ತಿಳಿಸಿದ್ದಾರೆ. ನಂತರ ದಂಪತಿಗೆ ಪಡೇರು ಪ್ರದೇಶದಿಂದ ತಮ್ಮ ಊರಾದ ಕುಮಡಾಕ್ಕೆ ತೆರಳಲು ಆಂಬುಲೆನ್ಸ್ ದೊರೆತಿದೆ.  ಈ ಬಗ್ಗೆ ಪ್ರತಿಕ್ರಿಯಿಸಲು ಈ ದಂಪತಿ ಸಿಕ್ಕಿಲ್ಲ. ಕೆಜಿಹೆಚ್ ಆಸ್ಪತ್ರೆಯ ಸೂಪರಿಟೆಂಡೆಂಟ್ ಆದ ಡಾ. ಪಿ ಅಶೋಕ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ.  ಅಲ್ಲದೇ ಅವರು ಬೆಳಗ್ಗೆ .8.57ಕ್ಕೆ ಆಸ್ಪತ್ರೆ ತೊರೆದಿದ್ದಾರೆ.

ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ ಅಡ್ಡಿಪಡಿಸಿ ವಿಕೃತಿ; ಕಾರು ಸೇರಿ ಚಾಲಕ ಮಂಗಳೂರು ಪೊಲೀಸ್ ವಶಕ್ಕೆ!

ಮತ್ಯಾಸ ರಾಜು ಆಂಬುಲೆನ್ಸ್ ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ನೀಡುವ ವ್ಯವಸ್ಥೆ ಮಾಡಿದ್ದಾರೆ.  ಆದರೆ ಮಕ್ಕಳ ವಿಭಾಗ ತಲುಪಲು ಅದು ವಿಳಂಬವಾಯ್ತು. ಆಂಬುಲೆನ್ಸ್ 9.15ಕ್ಕೆ ಅಲ್ಲಿಗೆ ತಲುಪಿತು. ಆದರೆ ಈ ವೇಳೆಗೆ ದಂಪತಿ ತಮ್ಮ ಮಗುವಿನೊಂದಿಗೆ ಅಲ್ಲಿಂದ ಹೊರಟು ಹೋಗಿದ್ದರು ಎಂದು ವೈದ್ಯ ಕುಮಾರ ಹೇಳಿದ್ದಾರೆ. ಐದು ವರ್ಷ ಪ್ರಾಯದ ಕೆಳಗಿರುವವರಿಗೆ ಆಂಬುಲೆನ್ಸ್ ನೀಡುವುದಿಲ್ಲ ಎಂಬ ಯಾವ ನಿಯಮವೂ ಇಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟ ಪಡಿಸಿದರು.

Follow Us:
Download App:
  • android
  • ios