ಶ್ರೀಲಂಕಾದಲ್ಲಿ ಮಂಗವೊಂದು ವಿದ್ಯುತ್ ಗ್ರಿಡ್‌ಗೆ ಸಿಲುಕಿ ರಾಷ್ಟ್ರವ್ಯಾಪಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಕೊಲಂಬೊ ಉಪನಗರದ ಘಟನೆಯಿಂದಾಗಿ, ಆಸ್ಪತ್ರೆಗಳೂ ಸೇರಿದಂತೆ ದೇಶಾದ್ಯಂತ ಕತ್ತಲು ಆವರಿಸಿತು. ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾದರೂ, ಸಂಪೂರ್ಣ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲು ಗಂಟೆಗಳೇ ಹಿಡಿದವು. 2022ರ ಆರ್ಥಿಕ ಬಿಕ್ಕಟ್ಟಿನಲ್ಲಿ 13 ಗಂಟೆಗಳ ಕತ್ತಲನ್ನು ನೆನಪಿಸುವ ಈ ಘಟನೆ ತಡೆಯಲು ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ.

ರಾಮಾಯಣದ ಕಾಲಕ್ಕೆ ಹೋದರೆ ಲಂಕೆಯನ್ನು ಆಂಜನೇಯ ದಹನ ಮಾಡಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ರಾವಣನ ಸುಪರ್ದಿಯಲ್ಲಿದ್ದ ಸೀತೆಯನ್ನು ನೋಡುವುದಕ್ಕಾಗಿ ರಾಮನ ಆದೇಶಾನುಸಾರ ಹನುಮಂತ ಬಂದು ಸೀತೆಯನ್ನು ಭೇಟಿ ಮಾಡಿ ವಾಪಸಾಗುವ ಸಂದರ್ಭದಲ್ಲಿ ರಾವಣನಿಗೆ ಪಾಠ ಕಲಿಸಲು ಹನುಮಂತ ಅಲ್ಲಿದ್ದ ಎಲ್ಲಾ ವಸ್ತುಗಳನ್ನು ನಾಶಮಾಡತೊಡಗಿದ. ಕೊನೆಗೆ ರಾವಣನ ಧೂತರು ಹನುಮಂತನಿಗೆ ಬುದ್ಧಿ ಕಲಿಸಲು ಆತನ ಬಾಲಕ್ಕೆ ಬೆಂಕಿ ಇಟ್ಟರು. ಆದರೆ ಈ ವಾನರ ಸುಮ್ಮನೆ ಇರ್ತಾನೆಯೆ? ಎಲ್ಲೆಡೆ ಹಾರಿ ಆ ಬಾಲದಲ್ಲಿದ್ದ ಬೆಂಕಿಯಿಂದ ಲಂಕೆಯನ್ನು ದಹನ ಮಾಡಿದನು. ಇದು ಲಂಕಾದಹನ. ಆದರೆ ಈ ವಿಷಯ ಇಲ್ಯಾಕೆ ಬಂತು ಎಂದರೆ, ಇದೀಗ ಮಂಗನಾಟಕ್ಕೆ ಇದೇ ಶ್ರೀಲಂಕಾ ಕಗ್ಗತ್ತಿನಲ್ಲಿ ಇರುವ ಸ್ಥಿತಿ ನಿರ್ಮಾಣ ಆಗಿತ್ತು!

ಮಂಗವೊಂದರಿಂದಾಗಿ ಇಡೀ ಶ್ರೀಲಂಕಾ ದೇಶದಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿ ಕಾರ್ಗತ್ತಲು ಕವಿದಿತ್ತು. ಇಡೀ ದೇಶದಲ್ಲಿ ಏಕಾಏಕಿ ವಿದ್ಯುತ್​ ವ್ಯತ್ಯಯವಾಗಿ ಕೋಲಾಹಲ ಸೃಷ್ಟಿಯಾಯಿತು. ಬಳಿಕ ಇದಕ್ಕೆ ಕಾರಣ ಹುಡುಕಿದಾಗ, ಕೊಲಂಬೊ ಉಪನಗರದಲ್ಲಿ ಮಂಗವೊಂದು ವಿದ್ಯುತ್ ಗ್ರಿಡ್ ಗೆ ಸಿಲುಕಿದ ಪರಿಣಾಮ ಈ ಘಟನೆ ಸಂಭವಿಸಿರುವುದಾಗಿ ತಿಳಿದಿದೆ. ಭಾನುವಾರ ಬೆಳಿಗ್ಗೆ ಈ ಘಟನೆ ಸಂಭವಿಸಿತ್ತು. ಆದರೆ ಅದಕ್ಕೆ ಕಾರಣ ತಿಳಿದು ಅದನ್ನು ಸರಿಪಡಿಸುವಷ್ಟರಲ್ಲಿ ರಾತ್ರಿಯಿಡೀ ಲಂಕೆಯ ಜನರು ಕತ್ತಲಿನಲ್ಲಿ ಕಳೆಯುವಂತಾಯಿತು. ವಿದ್ಯುತ್​ ಸಹಾಯದಿಂದ ಮಾಡುವ ಎಲ್ಲಾ ಕಾರ್ಯಗಳೂ ಸ್ಥಗಿತಗೊಂಡಿದ್ದವು! 

ಅಮೆರಿಕದಲ್ಲಿ ಆಗ್ತಿರೋದೇನು? ತಾತ್ಕಾಲಿಕ ವೀಸಾ ಪಡೆದವರ, ಮಕ್ಕಳ ಗತಿಯೇನು? ಎಳೆ ಎಳೆ ಮಾಹಿತಿ ಇಲ್ಲಿದೆ...

 ಹಲವಾರು ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ವಿದ್ಯುತ್​ ಸರಬರಾಜು ಮಾಡಲಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಶ್ರೀಲಂಕಾದ ಪಣದುರದಲ್ಲಿರುವ ವಿದ್ಯುತ್ ಗ್ರಿಡ್‌ನ ಸಬ್‌ಸ್ಟೇಷನ್‌ನಲ್ಲಿ ಕೋತಿಯೊಂದು ತಂತಿಯ ಮೇಲೆ ಹೋಗು ಸಂದರ್ಭದಲ್ಲಿ ಗ್ರಿಡ್​ಗೆ ಸಿಲುಕಿಬಿಟ್ಟಿದೆ. ಇದು ಇಡೀ ದೇಶಕ್ಕೆ ವಿದ್ಯುತ್​ ಪೂರೈಕೆ ಮಾಡುವ ಮುಖ್ಯ ಗ್ರಿಡ್​. ಆದ್ದರಿಂದ ವಿದ್ಯುತ್ ಸರಬರಾಜು ಸ್ಥಗಿತವಾಯಿತು. ಇದರಿಂದ ಮುಖ್ಯವಾಗಿ ಆಸ್ಪತ್ರೆಗಳಲ್ಲಿ ಕೋಲಾಹ ಉಂಟಾಯಿತು. ಒಂದು ಗಂಟೆಯ ಬಳಿಕ ಆಸ್ಪತ್ರೆ ಮತ್ತು ಇತರ ಪ್ರಮುಖ ಸ್ಥಾಪನೆಗಳಲ್ಲಿ ಬೇರೆ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಆದರೆ ಇಡೀ ದೇಶಕ್ಕೆ ವಿದ್ಯುತ್ ನೀಡಲು ಹಲವಾರು ಗಂಟೆಗಳು ಹಿಡಿದವು. 

ಈ ಕುರಿತು ಮಾತನಾಡಿದ ಶ್ರೀಲಂಕಾದ ಇಂಧನ ಸಚಿವ ಕುಮಾರ, 2022ರಲ್ಲಿ ಬೇಸಿಗೆಯಲ್ಲಿ ಶ್ರೀಲಂಕಾ ಮಹಾ ಆರ್ಥಿಕ ಮುಗ್ಗಟ್ಟನ್ನು ಎದುರಿಸಿತ್ತು. ಆ ಸಮಯದಲ್ಲಿ 13 ಗಂಟೆ ವಿದ್ಯುತ್​ ಇಲ್ಲದೇ ದೇಶ ಒದ್ದಾಡಿತ್ತು. ಆದರೆ ಇದೀಗ ಮಂಗನಿಂದ ಭಾರಿ ತೊಂದರೆ ಅನುಭವಿಸುವಂತಾಯಿತು ಎಂದಿದ್ದಾರೆ. ಇಡೀ ದೇಶಕ್ಕೆ ವಿದ್ಯುತ್​ ಸರಬರಾಜು ಮಾಡುತ್ತಿದ್ದ ಗ್ರಿಡ್​ ಟ್ರಾನ್ಸ್​ಫಾರ್ಮರ್‌ಗೆ ಕೋತಿ ಸಿಲುಕಿದ್ದೇ ಕಾರಣವಾಯಿತು. ನಮ್ಮ ಎಂಜಿನಿಯರ್​ಗಳು ಅದನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ದುರಸ್ತಿ ಕಾರ್ಯ ನಡೆಸಿದರು. ಮತ್ತೊಮ್ಮೆ ಈ ರೀತಿ ತೊಂದರೆ ಆಗದಂತೆ ಎಚ್ಚರಿಕೆ ವಹಿಸುತ್ತಿದ್ದೇವೆ ಎಂದರು.

ಭಾರತಕ್ಕೆ ಅತಿದೊಡ್ಡ ಶಾಕ್ ಕೊಟ್ಟ ಟ್ರಂಪ್; ಭವಿಷ್ಯದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಕೊಕ್ಕೆ?