Asianet Suvarna News Asianet Suvarna News

ಪುರುಷ, ಮಹಿಳೆಯರ ಮೇಲಿನ ಕ್ರೌರ್ಯ ಒಂದೇ ರೀತಿಯಾಗಿ ಇರೋದಿಲ್ಲ: ಸುಪ್ರೀಂ

ವಿಚ್ಛೇದನ ಪ್ರಕರಣವೊಂದರ ವಿಚಾರಣೆಯ ವೇಳೆ, 1995ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13 (1)ರ ಅಡಿಯಲ್ಲಿ ಕೌರ್ಯಕ್ಕೆ ನಿಗದಿತವಾದ ಅರ್ಥವನ್ನು ನೀಡಿಲ್ಲ. ಹಾಗಾಗಿ ಇಂತಹ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಇದನ್ನು ಉದಾರವಾಗಿ ಮತ್ತು ಸನ್ನಿವೇಶ ಆಧಾರಿತವಾಗಿ ಬಳಸಿಕೊಳ್ಳಲು ಕೋರ್ಟ್‌ ಸ್ವವಿವೇಚನೆಯನ್ನು ಬಳಸಿಕೊಳ್ಳಬೇಕು ಎಂದು ನ್ಯಾ. ಸಂಜೀವ್‌ ಖನ್ನಾ ಮತ್ತು ನ್ಯಾ. ಎಂ.ಎಂ.ಸುಂದರೇಶ್‌ ಅವರಿದ್ದ ಪೀಠ ಹೇಳಿದೆ.

Violence Against Men and Women is Different Says Supreme Court grg
Author
First Published Sep 8, 2023, 4:00 AM IST

ನವದೆಹಲಿ(ಸೆ.08):  ಕ್ರೌರ್ಯ ನಡೆಯುತ್ತಿದೆ ಎಂಬ ವಿಚಾರಕ್ಕೆ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ತೀರ್ಪು ನೀಡುವಾಗ ವಿಸ್ತೃತ ದೃಷ್ಟಿಕೋನದಿಂದ ನೋಡಬೇಕು. ಕ್ರೌರ್ಯ ಎಂಬುದು ಪುರುಷ ಮತ್ತು ಮಹಿಳೆಗೆ ಒಂದೇ ರೀತಿಯಾಗಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ವಿಚ್ಛೇದನ ಪ್ರಕರಣವೊಂದರ ವಿಚಾರಣೆಯ ವೇಳೆ, 1995ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13 (1)ರ ಅಡಿಯಲ್ಲಿ ಕೌರ್ಯಕ್ಕೆ ನಿಗದಿತವಾದ ಅರ್ಥವನ್ನು ನೀಡಿಲ್ಲ. ಹಾಗಾಗಿ ಇಂತಹ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಇದನ್ನು ಉದಾರವಾಗಿ ಮತ್ತು ಸನ್ನಿವೇಶ ಆಧಾರಿತವಾಗಿ ಬಳಸಿಕೊಳ್ಳಲು ಕೋರ್ಟ್‌ ಸ್ವವಿವೇಚನೆಯನ್ನು ಬಳಸಿಕೊಳ್ಳಬೇಕು ಎಂದು ನ್ಯಾ. ಸಂಜೀವ್‌ ಖನ್ನಾ ಮತ್ತು ನ್ಯಾ. ಎಂ.ಎಂ.ಸುಂದರೇಶ್‌ ಅವರಿದ್ದ ಪೀಠ ಹೇಳಿದೆ.

ಸ್ಟ್ಯಾಲಿನ್‌, ರಾಜಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಚೆನ್ನೈ ಪೊಲೀಸರಿಗೂ ಬಂತು ಕುತ್ತು!

ಕ್ರೌರ್ಯತೆ ಎಂಬುದನ್ನು ಒಂದು ಪ್ರಕರಣದಲ್ಲಿ ನಿರ್ಧರಿಸಿದಂತೆ ಮತ್ತೊಂದು ಪ್ರಕರಣದಲ್ಲಿ ನಿರ್ಧರಿಸಲ ಸಾಧ್ಯವಿಲ್ಲ. ಹಾಗಾಗಿ ಪ್ರತಿ ಪ್ರಕರಣವನ್ನು ಸನ್ನಿವೇಶ ಆಧಾರಿತವಾಗಿ ವಿಚಾರಣೆ ನಡೆಸಬೇಕಾಗುತ್ತದೆ. ಮಹಿಳೆಗೆ ಕ್ರೌರ್ಯ ಎನಿಸಿದ್ದು, ಪುರುಷನಿಗೆ ಕ್ರೌರ್ಯವಾಗದಿರಬಹುದು. ಹಾಗಾಗಿ ಮಹಿಳೆಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ವಿಸ್ತೃತ ವಿಚಾರಣೆ ಅಗತ್ಯ ಎಂದು ಕೋರ್ಟ್‌ ಹೇಳಿದೆ.

Follow Us:
Download App:
  • android
  • ios