ಸ್ಟ್ಯಾಲಿನ್, ರಾಜಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಚೆನ್ನೈ ಪೊಲೀಸರಿಗೂ ಬಂತು ಕುತ್ತು!
ಸನಾತನ ಧರ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್, ಎ ರಾಜಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರೊಂದಿಗೆ ಕೇಸು ದಾಖಲಿಸಿದ ಚೆನ್ನೈ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ನವದೆಹಲಿ (ಸೆ.7): ಸನಾತನ ಧರ್ಮ ಡೆಂಘೆ, ಮಲೇರಿಯಾ ಇದ್ದ ರೀತಿ. ಅದನ್ನು ವಿರೋಧಿಸಿದರಷ್ಟೇ ಸಾಲದು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ದೇಶದ ಶೇ. 80ರಷ್ಟು ಹಿಂದುಗಳ ನರಮೇಧ ಮಾಡಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟ್ಯಾಲಿನ್ ಹಾಗೂ ಡಿಎಂಕೆ ನಾಯಕ ಎ.ರಾಜಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದೆ. 'ಸನಾತನ ಧರ್ಮ'ದ ಕುರಿತಾಗಿ ಟೀಕೆ ಮಾಡಿರುವ ತಮಿಳುನಾಡು ಸಚಿವ, ನಟ ಹಾಗೂ ಸಿಎಂ ಸ್ಟ್ಯಾಲಿನ್ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರೊಂದಿಗೆ ದ್ವೇಷ ಭಾಷಣ ವಿಚಾರದಲ್ಲಿ ಸುಮೋಟೋ ಕೇಸ್ ದಾಖಲು ಮಾಡದ ಚೆನ್ನೈ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ದ್ವೇಷದ ಭಾಷಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ವಕೀಲ ವಿನೀತ್ ಜಿಂದಾಲ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಸನಾತನ ಧರ್ಮದ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ, ಸನಾತನ ಧರ್ಮದ ವಿರುದ್ಧ ಜನರನ್ನು ಪ್ರಚೋದಿಸಲಾಗುತ್ತಿದೆ, ಸನಾತನಿಯ ಧಾರ್ಮಿಕ ಭಾವನೆಗಳನ್ನು ಕೆರಳಿಸಲಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಅಗತ್ಯ, ಉದಯನಿಧಿ ಸ್ಟಾಲಿನ್ ಅಥವಾ ಎ ರಾಜಾ ಇಬ್ಬರ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ, ಎಸ್‌ಸಿ ಆದೇಶದಂತೆ ಯಾವುದೇ ದೂರಿಗೆ ಕಾಯದೆ ದ್ವೇಷದ ಭಾಷಣದ ಮೇಲೆ ಕ್ರಮ ಕೈಗೊಳ್ಳಬೇಕು. ಈ ಕುರಿತಾಗಿ ನಾನು ಸುಪ್ರೀ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಹಾಗೂ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜಾರಿಯಾಗಬೇಕು ಎಂದು ಮನವಿ ಮಾಡಿದ್ದೇನೆ ಎಂದು ವಿಜೀತ್ ಜಿಂದಾಲ್ ಬರೆದುಕೊಂಡಿದ್ದಾರೆ.ಎಫ್‌ಐಆರ್ ದಾಖಲಿಸದಿದ್ದಕ್ಕಾಗಿ ಸಿಪಿ, ದೆಹಲಿ ಪೊಲೀಸ್, ಡಿಸಿಪಿ, ನಾರ್ತ್ ವೆಸ್ಟ್ ಮತ್ತು ಪೊಲೀಸ್ ಕಮಿಷನರ್, ಚೆನ್ನೈ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಕೋರಲಾಗಿದೆ.
‘ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಹಿಂದೂ ಧರ್ಮದ ಅನುಯಾಯಿಗಳ ಅವಮಾನ ಮತ್ತು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಹುಟ್ಟುಹಾಕುವ’ ಕೃತ್ಯಕ್ಕಾಗಿ ಸ್ಟಾಲಿನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಈ ಹೇಳಿಕೆಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A, 153B, 295A ಮತ್ತು 505 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ವಾದಿಸಲಾಗಿದೆ.
ವಕೀಲ ವಿನೀತ್ ಜಿಂದಾಲ್ ಅವರು ಅರ್ಜಿ ಸಲ್ಲಿಸಿದ್ದು, ಹಿಂದೂ ಮತ್ತು ಸನಾತನ ಧರ್ಮದ ಅನುಯಾಯಿಯಾಗಿರುವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ. ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ್ದು, ಸನಾತನವನ್ನು ಸೊಳ್ಳೆಗಳು, ಡೆಂಗ್ಯೂ, ಕರೋನಾ ಮತ್ತು ಮಲೇರಿಯಾಗಳೊಂದಿಗೆ ಹೋಲಿಸುವುದು ದ್ವೇಷಪೂರಿತ ಭಾಷಣವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಸನಾತನ ಧರ್ಮ ಡೆಂಘೀ, ಮಲೇರಿಯಾವಲ್ಲ, ಏಡ್ಸ್ ರೋಗಿವಿದ್ದಂತೆ: ಎ. ರಾಜಾ
ದ್ವೇಷ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಶಾಹೀನ್ ಅಬ್ದುಲ್ಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಜಿಂದಾಲ್ ಈ ಅರ್ಜಿಗಳನ್ನು ಸಲ್ಲಿಸಿದೆ. ಜಿಂದಾಲ್ ಪ್ರಕರಣದಲ್ಲಿ ತನ್ನನ್ನು ಕಕ್ಷಿದಾರನಾಗಿ ಸೇರಿಸಿಕೊಳ್ಳಲು ಒಂದು ಅರ್ಜಿಯನ್ನು ಮತ್ತು ಡಿಎಂಕೆ ನಾಯಕನ ವಿರುದ್ಧ ಎಫ್‌ಐಆರ್‌ಗೆ ನಿರ್ದೇಶನಗಳನ್ನು ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ.
ಪ್ರಕಾಶ್‌ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನೆ ಎನ್ನುವುದಕ್ಕೆ ಗ್ಯಾರಂಟಿ ಏನಿದೆ? ಕೆ.ಎಸ್. ಈಶ್ವರಪ್ಪ ವಾಗ್ದಾಳಿ