Asianet Suvarna News Asianet Suvarna News

ಸಾಲ ತೀರಿಸುವ ಬದಲು ವಿದೇಶದಲ್ಲಿ ಮೋಜು ಮಸ್ತಿಗೆ ಆಸ್ತಿ ಖರೀದಿಸಿ ಭಾರತದಿಂದ ಪಲಾಯನಗೈದ ಮದ್ಯದ ದೊರೆ..!

2008 ಮತ್ತು 2017 ರ ನಡುವೆ ಬ್ಯಾಂಕ್‌ಗಳಿಗೆ ಮರುಪಾವತಿಸಲು ಸಾಕಷ್ಟು ಹಣವನ್ನು ವಿಜಯ್‌ ಮಲ್ಯ ಹೊಂದಿದ್ದರು ಎಂದೂ ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ. ತಮ್ಮ ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್‌ಗೆ (ಕೆಎಎಲ್) ಹಲವು ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದಿದ್ದರು ಮದ್ಯದ ದೊರೆ.

vijay mallya had enough money to pay back loan instead he bought properties abroad before fleeing india ash
Author
First Published Mar 23, 2023, 1:03 PM IST

ನವದೆಹಲಿ (ಮಾರ್ಚ್‌ 23, 2023): ದೇಶದಿಂದ ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಅವರು 2015-16ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಲ್ಲಿ 330 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದರು ಎಂದು ಸಿಬಿಯ ಆರೋಪಿಸಿದೆ. ಆ ಸಮಯದಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ಹಣದ ಕೊರತೆ ಎದುರಿಸುತ್ತಿದ್ದರೂ ಅವರು ದೇಶದಿಂದ ಪರಾರಿಯಾಗಲು ವಿದೇಶದಲ್ಲಿ ಐಷಾರಾಮಿ ಆಸ್ತಿ ಖರೀದಿಸಿದ್ದಾರೆ ಎಂದು ಮುಂಬೈ ಕೋರ್ಟ್‌ನಲ್ಲಿ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿಕೊಂಡಿದೆ. ಅಲ್ಲದೆ, ಅದೇ ಸಮಯದಲ್ಲಿ ಬ್ಯಾಂಕ್‌ಗಳಿಂದ ಬಾಕಿ ಉಳಿದಿರುವ ಸಾಲವನ್ನು ಪಾವತಿ ಮಾಡುತ್ತಿರಲಿಲ್ಲ, ಆದರೆ ವಿದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದೂ ಸಿಬಿಐ ಚಾರ್ಜ್‌ಶೀಟ್ ಹೇಳಿದೆ.

2008 ಮತ್ತು 2017 ರ ನಡುವೆ ಬ್ಯಾಂಕ್‌ಗಳಿಗೆ ಮರುಪಾವತಿಸಲು ಸಾಕಷ್ಟು ಹಣವನ್ನು ವಿಜಯ್‌ ಮಲ್ಯ ಹೊಂದಿದ್ದರು ಎಂದೂ ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ. ತಮ್ಮ ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್‌ಗೆ (ಕೆಎಎಲ್) ಹಲವು ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದಿದ್ದರು ಮದ್ಯದ ದೊರೆ. ಆದರೂ, ಸಾಲ ಮರುಪಾವತಿ ಮಾಡದೆ ಅವರು ಯುರೋಪಿನಾದ್ಯಂತ "ವೈಯಕ್ತಿಕ ಆಸ್ತಿಗಳನ್ನು" ಖರೀದಿಸಿದರು ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿರುವ ಅವರ ಮಕ್ಕಳ ಟ್ರಸ್ಟ್‌ಗಳಿಗೆ ಹಣವನ್ನು ವರ್ಗಾಯಿಸಿದರು ಎಂದೂ ಆರೋಪಿಸಿದೆ.

ಇದನ್ನು ಓದಿ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ರೇಡ್‌: ರಾಬ್ಢಿ ದೇವಿ ವಿಚಾರಣೆ

ಈ ಹಿನ್ನೆಲೆ ನ್ಯಾಯಾಲಯದ ಅನುಮತಿ ಪಡೆದ ನಂತರ ಸಿಬಿಐ, ವಿಜಯ್‌ ಮಲ್ಯ ಅವರ ವಹಿವಾಟಿನ ವಿವರಗಳನ್ನು ಕೇಳಲು ವಿವಿಧ ದೇಶಗಳಿಗೆ ಸಂವಹನ ಕಳುಹಿಸಿದೆ. ಮಲ್ಯ ಅವರು ಫ್ರಾನ್ಸ್‌ನಲ್ಲಿ 35 ಮಿಲಿಯನ್ ಯುರೋಗಳಿಗೆ ರಿಯಲ್ ಎಸ್ಟೇಟ್ ಖರೀದಿಸಿದ್ದಾರೆ ಮತ್ತು ಅವರ ಕಂಪನಿಯಾದ ಗಿಜ್ಮೊ ಹೋಲ್ಡಿಂಗ್ಸ್‌ನ ಖಾತೆಯಿಂದ 8 ಮಿಲಿಯನ್ ಯುರೋಗಳನ್ನು ಪಾವತಿಸಲು ಪ್ರಯತ್ನಿಸಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿರುವ ಬಗ್ಗೆಯೂ ಸಿಬಿಐ ಹೇಳಿದೆ. 

ವಿಜಯ್‌ ಮಲ್ಯ 2016 ರಲ್ಲಿ ಭಾರತವನ್ನು ತೊರೆದರು ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಮತ್ತೆ ಭಾರತಕ್ಕೆ ಕರೆಸಿ ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಈವರೆಗೆ ಯಶಸ್ಸು ಸಿಕ್ಕಿಲ್ಲ. 

ಇದನ್ನೂ ಓದಿ: ಮನೀಶ್‌ ಸಿಸೋಡಿಯಾಗೆ ಗೂಢಚರ್ಯೆ ಹಗರಣ ಉರುಳು: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅಸ್ತು

ಐಡಿಬಿಐ ಬ್ಯಾಂಕ್-ಕಿಂಗ್‌ಫಿಶರ್ ಏರ್‌ಲೈನ್ಸ್ನ 900 ಕೋಟಿ ರೂ. ಸಾಲ ವಂಚನೆ ಪ್ರಕರಣದಲ್ಲಿ ವಿಜಯ್ ಮಲ್ಯ ಆರೋಪಿಯಾಗಿದ್ದಾರೆ. ಸಿಬಿಐ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಯು 11 ಆರೋಪಿಗಳನ್ನು ಈ ಹಿಂದೆ ಆರೋಪಪಟ್ಟಿಯಲ್ಲಿ ಹೆಸರಿಸಿದೆ ಮತ್ತು ಐಡಿಬಿಐ ಬ್ಯಾಂಕ್‌ನ ಮಾಜಿ ಜನರಲ್ ಮ್ಯಾನೇಜರ್ ಬುದ್ಧದೇವ್ ದಾಸ್‌ಗುಪ್ತಾ ಅವರ ಹೆಸರನ್ನು ತನ್ನ ಇತ್ತೀಚಿನ ಪೂರಕ ಚಾರ್ಜ್‌ಶೀಟ್‌ನಲ್ಲಿ ಸೇರಿಸಿದೆ.

ಎಲ್‌ಆರ್‌ಗಳ ಮೂಲಕ ಸಂಗ್ರಹಿಸಿದ ಸಾಕ್ಷ್ಯವನ್ನು ಉಲ್ಲೇಖಿಸಿ, 2008 ಮತ್ತು 2012 ರ ನಡುವೆ ಫೋರ್ಸ್ ಇಂಡಿಯಾ ಫಾರ್ಮುಲಾ 1 ತಂಡಕ್ಕೆ ಸಾಕಷ್ಟು ಮೊತ್ತವನ್ನು ವರ್ಗಾಯಿಸಲಾಗಿದೆ ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ಹೇಳಿದೆ. ಹಾಗೂ, 2007 ರಿಂದ 2012-13 ರವರೆಗೆ ಗಮನಾರ್ಹ ಮೊತ್ತವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಮತ್ತು ವಿಜಯ್‌ ಮಲ್ಯ ವೈಯಕ್ತಿಕವಾಗಿ ಬಳಸಿದ ಕಾರ್ಪೊರೇಟ್ ಜೆಟ್‌ಗಾಗಿ ಸಾಲವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಮರುಪಾವತಿ ಮಾಡಲು ಪಾವತಿಗಳನ್ನು ಮಾಡಲು ಬಳಸಲಾಗಿದೆ ಎಂದೂ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಪರೇಶ್‌ ಮೇಸ್ತಾ ಸಾವು: ಗಲಭೆ ಕೇಸ್‌ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರ

ಇನ್ನು, ಸಿಬಿಐ ಅಲ್ಲದೆ, ಜಾರಿ ನಿರ್ದೇಶನಾಲಯ (ಇಡಿ) ಕೂಡ ಮಲ್ಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ. ಜನವರಿ 5, 2019 ರಂದು ಮುಂಬೈನ ವಿಶೇಷ ನ್ಯಾಯಾಲಯವು ವಿಜಯ್ ಮಲ್ಯ ಅವರನ್ನು 'ಪರಾರಿ' ಎಂದು ಘೋಷಿಸಿತ್ತು. ಫ್ಯುಜಿಟಿವ್‌ ಆರ್ಥಿಕ ಅಪರಾಧಿಗಳ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ, ಒಬ್ಬ ವ್ಯಕ್ತಿಯನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಿದ ನಂತರ, ಪ್ರಾಸಿಕ್ಯೂಟಿಂಗ್ ಏಜೆನ್ಸಿಯು ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ.

Follow Us:
Download App:
  • android
  • ios