Asianet Suvarna News Asianet Suvarna News

ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ರೇಡ್‌: ರಾಬ್ಢಿ ದೇವಿ ವಿಚಾರಣೆ

ಬಿಹಾರ ಮಾಜಿ ಸಿಎಂ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಪತ್ನಿ ರಾಬ್ಡಿ ದೇವಿಯನ್ನು ಸಿಬಿಐ ಅಧಿಕಾರಗಳು ಪ್ರಶ್ನೆ ಮಾಡುತ್ತಿದ್ದು, ಈ ರೇಡ್‌ ವಿರೋಧಿಸಿ ಲಾಲೂ ಪ್ರಸಾದ್‌ ಯಾದವ್‌ ಅವರ ಮನೆಯ ಮುಂದೆ ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

cbi questioning rabri devi at her patna home in land for jobs case ash
Author
First Published Mar 6, 2023, 1:20 PM IST

ಪಾಟ್ನಾ (ಮಾರ್ಚ್‌ 6, 2023):  ಬಿಹಾರದ ಆಡಳಿತಾರೂಢ ಪಕ್ಷ ಆರ್‌ಜೆಡಿಗೆ ಸಿಬಿಐ ಬಿಗ್‌ ಶಾಕ್‌ ನೀಡಿದ್ದು, ಪಕ್ಷದ ಸಂಸ್ಥಾಪಕ ಹಾಗೂ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ಸಿಬಿಐ ರೇಡ್‌ ಮಾಡಿದ್ದು, ಈ ವೇಳೆ 200 ಕ್ಕೂ ಹೆಚ್ಚು ದಾಖಲೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಬಿಹಾರ ಮಾಜಿ ಸಿಎಂ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಪತ್ನಿ ರಾಬ್ಡಿ ದೇವಿಯನ್ನು ಸಿಬಿಐ ಅಧಿಕಾರಗಳು ಪ್ರಶ್ನೆ ಮಾಡುತ್ತಿದ್ದು, ಈ ರೇಡ್‌ ವಿರೋಧಿಸಿ ಲಾಲೂ ಪ್ರಸಾದ್‌ ಯಾದವ್‌ ಅವರ ಮನೆಯ ಮುಂದೆ ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಹಾರ (Bihar) ರಾಜಧಾನಿ ಪಾಟ್ನಾದಲ್ಲಿ (Patna) ಸಿಬಿಐ (CBI) ಶೋಧ ಕಾರ್ಯ ನಡೆಯುತ್ತಿದ್ದು, ಆದರೆ ಇದು ರೇಡ್‌ (Raid) ಅಥವಾ ಶೋಧ ಕಾರ್ಯಾಚರಣೆ (Search) ಅಲ್ಲ. ನಾವು ರಾಬ್ಡಿ ದೇವಿಯವರ (Rabri Devi) ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದೇವೆ. ವಿಚಾರಣೆಗೆ ನಾವು ಈ ಮೊದಲೇ ಅಪಾಯಿಂಟ್‌ಮೆಂಟ್‌ ಪಡೆದಿದ್ದವು ಎಂದು ಸಿಬಿಐ (CBI) ಮೂಲಗಳು ಸ್ಪಷ್ಟಪಡಿಸಿವೆ. 

ಇದನ್ನು ಓದಿ: ರೈಲ್ವೇ ನೌಕರಿಗಾಗಿ ಜಮೀನು ಲಂಚ ಪ್ರಕರಣ, ಲಾಲೂ, ಪತ್ನಿ ರಾಬ್ರಿ ಸೇರಿ 14 ಮಂದಿ ವಿರುದ್ಧ ಚಾರ್ಜ್‌ಶೀಟ್!

ಬಿಜೆಪಿಯ (BJP) ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ 8 ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಈ ವಿಚಾರಣೆ ನಡೆಯುತ್ತಿದೆ. ಈ ಪತ್ರದ ಸಹಿ ಮಾಡಿದವರಲ್ಲಿ ರಾಬ್ಡಿ ದೇವಿ ಅವರ ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಸೇರಿದ್ದಾರೆ. ಕೇಂದ್ರ ಏಜೆನ್ಸಿಗಳಿಂದ ಗುರಿಯಾಗಿರುವ ವಿರೋಧ ಪಕ್ಷದ ನಾಯಕರಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪಕ ಲಾಲೂ ಪ್ರಸಾದ್‌ ಯಾದವ್‌ ಅವರನ್ನು ಸಹ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.  

ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಲಾಲೂ ಪ್ರಸಾದ್‌ ಯಾದವ್, ರಾಬ್ಢಿ ದೇವಿ ಮತ್ತು ಅವರ ಪುತ್ರಿಯರಾದ ಮೀಸಾ ಮತ್ತು ಹೇಮಾ ಸೇರಿ ಇತರರನ್ನು ಸಿಬಿಐ ಹೆಸರಿಸಿದೆ. 2004 ರಿಂದ 2009 ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ನೀಡಿದ ಉದ್ಯೋಗಗಳಿಗೆ ಪ್ರತಿಯಾಗಿ ಲಾಲೂ ಪ್ರಸಾದ್‌ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ತುಂಬಾ ಕಡಿಮೆ ದರದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ಮೇ 2022 ರಲ್ಲಿ ದಾಖಲಾದ ಎಫ್‌ಐಆರ್ ಆರೋಪಿಸುತ್ತದೆ.

ಇದನ್ನೂ ಓದಿ: Fodder Scam: ಲಾಲೂ ಪ್ರಸಾದ್‌ ಯಾದವ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಮತ್ತೊಂದು ಮದುವೆ

ಹಿರಿಯ ರಾಜಕಾರಣಿ ಲಾಲೂ ಪ್ರಸಾದ್‌ ಯಾದವ್, ಅವರ ಪತ್ನಿ ಮತ್ತು ಅವರ ಪುತ್ರಿಯರಲ್ಲದೆ, ಎಫ್‌ಐಆರ್‌ನಲ್ಲಿ ಭೂಮಿಗೆ ಬದಲಾಗಿ ಉದ್ಯೋಗ ಪಡೆದ 12 ಜನರನ್ನು ಸಹ ಹೆಸರಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ, ಲಾಲೂ ಪ್ರಸಾದ್‌ ಯಾದವ್ ಅವರ ಸಹಾಯಕ ಮತ್ತು ವಿಶೇಷ ಕರ್ತವ್ಯದ ಮಾಜಿ ಅಧಿಕಾರಿ (OSD) ಭೋಲಾ ಯಾದವ್ ಅವರನ್ನು ಈ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು.

ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದವರು ಮತ್ತು ಇತರ ಆರೋಪಿಗಳು ದೆಹಲಿ ನ್ಯಾಯಾಲಯಕ್ಕೆ ಹಾಜರಾಗಲು ಒಂದು ವಾರ ಮುಂಚಿತವಾಗಿ ರಾಬ್ಡಿ ದೇವಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
 
ಇದನ್ನೂ ಓದಿ: ಲಾಲೂ ಪ್ರಸಾದ್‌ ಯಾದವ್‌ಗೆ ಕಿಡ್ನಿದಾನ: ಅದೊಂದು ಮಾಂಸದ ತುಣುಕಷ್ಟೇ ಎಂದ ಪುತ್ರಿ ರೋಹಿಣಿ

Follow Us:
Download App:
  • android
  • ios