Asianet Suvarna News Asianet Suvarna News

ಅಕ್ಕನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ತಂಗಿಗೆ ಹೃದಯಾಘಾತ, ವಿಡಿಯೋದಲ್ಲಿ ಸೆರೆಯಾಯ್ತು ಸಾವು!

ಮದುವೆ ಸಂಭ್ರಮ, ಪೋಷಕರು, ಕುಟುಂಬಸ್ಥರ ಮುಖದಲ್ಲಿ ಸಂತಸ. ಮದುವೆ ಹಲ್ದಿ ಸೆರೆಮನಿಯಲ್ಲಿ ಎಲ್ಲರೂ ಡ್ಯಾನ್ಸ್ ಮಾಡಿದ್ದಾರೆ. ಅಕ್ಕನ ಮದುವೆ ಕಾರಣ ತಂಗಿ ಎಲ್ಲರ ಅಟ್ರಾಕ್ಷನ್ ಆಗಿದ್ದರು. ಆದರೆ ಡ್ಯಾನ್ಸ್ ಮಾಡುತ್ತಲೇ 18ರ ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. 
 

Video 18 year old girl dies of heart attack while dancing sister marriage Event at Uttar Pradesh ckm
Author
First Published Apr 29, 2024, 4:55 PM IST

ಮೀರತ್(ಏ.29) ಮದುವೆ ಮನೆಯಲ್ಲಿ ಸಂಭ್ರಮ, ಖುಷಿ ತುಂಬಿರುತ್ತದೆ. ಆಪ್ತರು, ಕುಟುಂಬಸ್ಥರ ಸಮಾಗಮ. ಹತ್ತು ಹಲವು ಕಾರ್ಯಕ್ರಮ, ಪಾರ್ಟಿ ಹೀಗೆ ಪ್ರತಿ ದಿನ ಬ್ಯೂಸಿ. ಮದುವೆಗೂ ಮೊದಲು ಮೆಹಂದಿ, ಸಂಗೀತ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹೀಗೆ ಉತ್ತರ ಭಾರತದಲ್ಲಿನ ಮದುವೆಯಲ್ಲಿ ಪ್ರಮುಖವಾಗಿರುವ ಹಲ್ದಿ ಕಾರ್ಯಕ್ರಮದಲ್ಲಿ ಇಡೀ ಕುಟುಂಬಸ್ಥರು, ಆಪ್ತರು ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅಕ್ಕನ ಮದುವೆಯ ಹಲ್ದಿ ಸೆರೆಮನಿಯಲ್ಲಿ 18 ವರ್ಷದ ತಂಗಿ ಕೂಡ ಡ್ಯಾನ್ಸ್ ಮಾಡಿದ್ದಾಳೆ. ಆದರೆ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತಕ್ಕೆ ತುತ್ತಾದ ಯುವತಿ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. 

ಮೃತ ಯುವತಿಯನ್ನು ರಿಮ್ಶಾ ಎಂದು ಗುರುತಿಸಲಾಗಿದೆ. ರಿಮ್ಶಾಳ ಅಕ್ಕನ ಮದುವೆಗೂ ಮೊದಲು ಮನೆಯಲ್ಲಿ ಹಲ್ಡಿ ಸೆರಮನಿ ಆಯೋಜಿಸಲಾಗಿದೆ. ಎಲ್ಲಾ ಕುಟುಂಬಸ್ಥರು, ಆಪ್ತರು, ಸ್ಥಳೀಯರು ಆಗಮಿಸಿದ್ದಾರೆ. ಹಲ್ದಿ ಶಾಸ್ತ್ರಗಳ ಜೊತೆಗೆ ಮ್ಯೂಸಿಕ್ ಹಾಗೂ ಡ್ಯಾನ್ಸ್ ಕೂಡ ನಡೆಯುತ್ತಿತ್ತು. ಒಂದೆಡೆ ಅಕ್ಕನಿಗೆ ಹಳದಿ ಹಚ್ಚಿ, ನೀರು ಎರಚಿ ಸಂಭ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಮ್ಯೂಸಿಕ್ ಹಾಗೂ ಡ್ಯಾನ್ಸ್ ಜೋರಾಗಿತ್ತು.

ಅಳಿಯನ ಮದ್ವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತ: ಕುಸಿದು ಬಿದ್ದು ಮಾವ ಸಾವು

ಕುಟುಂಬಸ್ಥರು, ಆಪ್ತರು ಎಲ್ಲರೂ ಡ್ಯಾನ್ಸ್‌ನಲ್ಲಿ ಮಗ್ನರಾಗಿದ್ದರು. ಅಕ್ಕನ ಮದುವೆ ಕಾರಣ ತಂಗಿ ವಿಶೇಷ ಅಲಂಕಾರದಲ್ಲಿ ಕುಟುಂಬಸ್ಥರೊಂದಿಗೆ ಹೆಜ್ಜೆ ಹಾಕಿದ್ದಳು. ಮ್ಯೂಸಿಕ್‌ಗೆ ತಕ್ಕಂತೆ ಡ್ಯಾನ್ಸ್ ಮಾಡಿದ್ದಾಳೆ. ಇತ್ತ ಕುಟುಂಬ್ಥರು ರಿಮ್ಶಾಳನ್ನು ಹುರಿದುಂಬಿಸಿದ್ದಾರೆ. ಎಲ್ಲರ ಜೊತೆ ಡ್ಯಾನ್ಸ್ ಮಾಡುತ್ತಿದ್ದ ರಿಮ್ಶಾಗೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡುತ್ತಿದ್ದಂತೆ ಅಸ್ವಸ್ಥಗೊಂಡ ರಿಮ್ಶಾ ದಿಢೀರ್ ಕುಸಿದು ಬಿದ್ದಿದ್ದಾಳೆ.

 

 

ಕುಟುಂಬಸ್ಥರು ತಕ್ಷಣವೆ ನೆರವಿಗೆ ಆಗಮಿಸಿದ್ದಾಳೆ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ರಿಮ್ಶಾಳಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ರಿಮ್ಶಾ ಇತ್ತೀಚೆಗೆ ಸಂಬಂಧಿಕರೊಬ್ಬರ ಮದುವೆಯಲ್ಲೂ ಡ್ಯಾನ್ಸ್ ಮಾಡಿ್ದ್ದಳು. ಸತತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಗಮನಸೆಳೆದಿದ್ದರು. ಇದೀಗ ಅಕ್ಕನ ಮದುವೆಯಲ್ಲಿ ಡ್ಯಾನ್ಸ್ ಮಾಡಲು ಆರಂಭಿಸಿದ ಕೆಲವೇ ಹೊತ್ತಲ್ಲಿ ಈ ದುರ್ಘಟನೆ ನಡೆದಿದೆ.  

ಶ್ರೀಲಂಕಾದಿಂದ ರಾಮೇಶ್ವರಂಗೆ ಈಜುತ್ತಿದ್ದ ಬೆಂಗಳೂರಿನ ಸಾಹಸಿ ಹೃದಯಾಘಾತದಿಂದ ನಿಧನ!

ಮದುವೆ ಸಂಭ್ರಮದಲ್ಲಿದ್ದ ಮನೆ ಶೋಕದಲ್ಲಿ ಮುಳುಗಿದೆ. ಇತ್ತ ತಂಗಿ ಸಾವಿನಿಂದ ಅಕ್ಕ ತೀವ್ರವಾಗಿ ನೊಂದಿದ್ದಾಳೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಸಂಭ್ರಮದಲ್ಲಿದ್ದ ಕುಟಂಬಕ್ಕೆ ದಿಕ್ಕು ತೋಚದಂತಾಗಿದೆ.

Latest Videos
Follow Us:
Download App:
  • android
  • ios