ಶ್ರೀಲಂಕಾದಿಂದ ರಾಮೇಶ್ವರಂಗೆ ಈಜುತ್ತಿದ್ದ ಬೆಂಗಳೂರಿನ ಸಾಹಸಿ ಹೃದಯಾಘಾತದಿಂದ ನಿಧನ!

ಶ್ರೀಲಂಕಾದಿಂದ ತಮಿಳುನಾಡಿನ ರಾಮೇಶ್ವರಂನತ್ತ ಸಮುದ್ರದಲ್ಲಿ ಈಜುತ್ತಾ ಹೊಸ ದಾಖಲೆ ಬರೆಯಲು ಹೊರಟ ಬೆಂಗಳೂರಿನ ಸಾಹಸಿ ಹೃದಯಾಘಾತಕ್ಕೆ ನಿಧನರಾಗಿದ್ದಾರೆ. 

78 year old Bengaluru Swimmer dies heart attack while swimming from Sri lanka to Tamil Nadu ckm

ರಾಮೇಶ್ವರಂ(ಏ.23) ಸಮುದ್ರದಲ್ಲಿ ಈಜಿ ಹಲವು ದಾಖಳೆ ನಿರ್ಮಾಣವಾಗಿದೆ.  ಇದೇ ರೀತಿ ಶ್ರೀಲಂಕಾದಿಂದ ತಮಿಳುನಾಡಿನ ರಾಮೇಶ್ವರಂನ ದನುಷ್ಕೋಡಿಗೆ ಈಜುತ್ತಾ ದಾಖಲೆ ನಿರ್ಮಿಸಲು ಹೊರಟ ಬೆಂಗಳೂರಿನ ಸಾಹಸಿ ಗೋಪಾಲ್ ರಾವ್ ಹೃದಯಾಘಾತಕ್ಕೆ ನಿಧನರಾಗಿದ್ದಾರೆ. 24 ಕಿಲೋಮೀಟ್ ದೂರವನ್ನು ಸಮುದ್ರ ಮೂಲಕ ಈಜುತ್ತಾ ದಾಖಲೆ ನಿರ್ಮಿಸಲು ಸ್ವಿಮ್ಮಿಂಗ್ ತಂಡ ಸಜ್ಜಾಗಿತ್ತು. ಆದರೆ ಈ ತಂಡದ ಪ್ರಮಖ ಸದಸ್ಯ  78 ವರ್ಷದ ಗೋಪಾಲ್ ರಾವ್ ಈಜುತ್ತಿದ್ದಂತೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶ್ರೀಲಂಕಾದಿಂದ ಭಾರತದ ಧನುಷ್ಕೋಡಿಗೆ ಸ್ವಿಮ್ಮಿಂಗ್ ರಿಲೇ ಆಯೋಜಿಸಲಾಗಿತ್ತು. 31 ನುರಿತ ಈಜುಗಾರರು ಈ ರಿಲೆಯಲ್ಲಿ ಪಾಲ್ಗೊಂಡಿದ್ದರು. 24 ಕಿಲೋಮೀಟರ್ ಸಮುದ್ರ ಮಾರ್ಗದ ಮೂಲಕ ಈಜುವ ಸಾಹಸದಲ್ಲಿ ಈ ದುರ್ಗಟನೆ ಸಂಭವಿಸಿದೆ. ಎಪ್ರಿಲ್ 22ರಂದು ಬೋಟ್ ಮೂಲಕ ಶ್ರೀಲಂಕಾದ ತುದಿ ತಲೈಮಾನಾರ್‌ಗೆ ಈಜುಗಾರರು ತೆರಳಿದ್ದರು. ಇಂದು(ಏಪ್ರಿಲ್ 23) ಬೆಳ್ಳಂಬೆಳಗ್ಗೆಯಿಂದ ಈಜು ಆರಂಭಗೊಂಡಿತ್ತು. ಈಜುಗಾರರ ಸುರಕ್ಷತೆಹೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ತಂದೆ-ಮಗ ಸೇರಿ ನಾಲ್ವರು ದುರ್ಮರಣ!

ಈಜುಗಾರರ ಎರಡೂ ಬದಿಗಳಲ್ಲಿ ಬೋಟ್‌ಗಳು ಸಂಚರಿಸುತ್ತಿತ್ತು. ರಕ್ಷಣಾ ತಂಡ, ವೈದ್ಯಕೀಯ ತಂಡ, ತುರ್ತು ಸಹಾಯಕ ತಂಡಗಳು ಈ ಬೋಟ್ ಮೂಲಕ ಸಾಗಿದ್ದರು. ಮೂರನೇ ಸಾಲಿನಲ್ಲಿ ಬೆಂಗಗಳೂರನ ಸಾಹಸಿ ಸ್ವಿಮ್ಮರ್ ಎಂದೇ ಖ್ಯಾತಿಗಳಿಸಿರುವ ಗೋಪಾಲ್ ರಾವ್ ಈಜುತ್ತಿದ್ದರು. 31 ಈಜುಗಾರರ ತಂಡ ರಿಲೆ ಮೂಲಕ ಸಮುದ್ರ ಮಾರ್ಗದಲ್ಲಿ ಭಾರತದ ತುದಿ ಧನುಷ್ಕೋಡಿಯತ್ತ ಈಜುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಗೋಪಾಲ್ ರಾವ್‌ಗೆ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದು ಅರಿವಾಗಿದೆ. ಈಜುವುದು ಕಷ್ಟವಾಗಿದೆ. 

ಆರೋಗ್ಯ ಕ್ಷೀಣಿಸುತ್ತಿದ್ದಂತೆ ಗೋಪಾಲ್ ರಾವ್ , ಬೋಟ್‌ನಲ್ಲಿದ್ದ ರಕ್ಷಣಾ ತಂಡಕ್ಕೆ ಸೂಚನೆ ನೀಡಿದ್ದಾರೆ. ಇತ್ತ ಎಲ್ಲಾ ಈಜುಪಟುಗಳನ್ನು ಗಮನಿಸುತ್ತಿದ್ದ ತಂಡ, ತಕ್ಷಣವೇ ನೆರವಿಗೆ ಧಾವಿಸಿದೆ. ಗೋಪಾಲ್ ರಾವ್ ಅವರನ್ನು ಸಮುದ್ರದಿಂದ ರಕ್ಷಿಸಿ ಬೋಟ್‌ಗೆ ತಂದಿದ್ದಾರೆ. ಇತ್ತ ವೈದ್ಯರ ತಂಡ ಗೋಪಾಲ್ ಅವರನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಗೋಪಾಲ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಬೆಂಗಳೂರು ಅಪಾರ್ಟ್ಮೆಂಟ್ ಈಜುಕೊಳದಲ್ಲಿ ಬಾಲಕಿ ಸಾವು; 45 ದಿನದ ಬಳಿಕ ಸಿಕ್ಕ ಟ್ವಸ್ಟ್‌ನಿಂದ 7 ಮಂದಿ ಬಂಧನ!

ಗೋಪಾಲ್ ರಾವ್ ಮೃತಪಟ್ಟಿರುವುದು ಖಚಿತಪಡಿಸುತ್ತಿದ್ದಂತೆ ಶ್ರೀಲಂಕಾದಿಂದ ಧನುಷ್ಕೋಡಿಗೆ ಆಯೋಜಿಸಿದ್ದ ಸ್ವಿಮ್ಮಿಂಗ್ ರಿಲೆಯನ್ನು ಈಜುಪಟುಗಳು ರದ್ದುಗೊಳಿಸಿದ್ದಾರೆ. ಬೋಟ್ ಮೂಲಕ ರಾಮೇಶ್ವರಂಗೆ ಆಗಮಿಸಿದ ಈಜುಪಟುಗಳು ಗೋಪಾಲ್ ರಾವ್‌ಗೆ ಗೌರವ ನಮನ ಸಲ್ಲಿಸಿದ್ದಾರೆ. 
 

Latest Videos
Follow Us:
Download App:
  • android
  • ios